Air pollution: ಕಟ್ಟಡ ನಿರ್ಮಾಣ ಚಟುವಟಿಕೆ ನಿಷೇಧದಿಂದ ತೊಂದರೆಗೊಳಗಾದ ಕಾರ್ಮಿಕರಿಗೆ ಕೇಜ್ರಿವಾಲ್ ಪರಿಹಾರ ಘೋಷಣೆ

ವಾಯುಮಾಲಿನ್ಯದಿಂದಾಗಿ (Air pollution) ನಗರದಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳ ನಿಷೇಧದಿಂದ ತೊಂದರೆಗೊಳಗಾದ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ದೆಹಲಿ ಸರ್ಕಾರ ತಲಾ 5,000 ರೂಪಾಯಿಗಳನ್ನು ಜಮಾ ಮಾಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.

Written by - Zee Kannada News Desk | Last Updated : Nov 25, 2021, 08:06 PM IST
  • ದೆಹಲಿಯಲ್ಲಿ ಸತತ ಏಳನೇ ದಿನವೂ ಕುಸಿದ ವಾಯು ಗುಣಮಟ್ಟ
  • ವಾಯು ಮಾಲಿನ್ಯದಿಂದಾಗಿ ನಿರ್ಮಾಣ ಚಟುವಟಿಕೆಗಳ ನಿಷೇಧ
  • ಇದರಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕಟ್ಟಡ ಕಾರ್ಮಿಕರು
  • ಕಟ್ಟಡ ಕಾರ್ಮಿಕರಿಗೆ ಪರಿಹಾರ ಘೋಷಿಸಿದ ದೆಹಲಿ ಸರ್ಕಾರ
  • 5,000 ರೂಪಾಯಿ ಪರಿಹಾರ ಧನ ಘೋಷಿಸಿದ ಸಿಎಂ ಅರವಿಂದ್ ಕೇಜ್ರಿವಾಲ್
Air pollution: ಕಟ್ಟಡ ನಿರ್ಮಾಣ ಚಟುವಟಿಕೆ ನಿಷೇಧದಿಂದ ತೊಂದರೆಗೊಳಗಾದ ಕಾರ್ಮಿಕರಿಗೆ ಕೇಜ್ರಿವಾಲ್ ಪರಿಹಾರ ಘೋಷಣೆ title=
file photo

ನವದೆಹಲಿ: ವಾಯುಮಾಲಿನ್ಯದಿಂದಾಗಿ (Air pollution) ನಗರದಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳ ನಿಷೇಧದಿಂದ ತೊಂದರೆಗೊಳಗಾದ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ದೆಹಲಿ ಸರ್ಕಾರ ತಲಾ 5,000 ರೂಪಾಯಿಗಳನ್ನು ಜಮಾ ಮಾಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.

'ವಾಯು ಮಾಲಿನ್ಯದಿಂದಾಗಿ ನಿರ್ಮಾಣ ಚಟುವಟಿಕೆಗಳ ನಿಷೇಧದಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ತಲಾ 5,000 ರೂಪಾಯಿಗಳನ್ನು ಜಮಾ ಮಾಡಲು ನಾನು ಇಂದು ಆದೇಶ ನೀಡಿದ್ದೇನೆ.ಕಾರ್ಮಿಕರಿಗೆ ಅವರ ಕನಿಷ್ಟ ವೇತನದ ಪ್ರಕಾರ ಪರಿಹಾರವನ್ನು ನಾವು ನೀಡುತ್ತೇವೆ" ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ : ದೇಶದಲ್ಲಿ ಗಗನಕ್ಕೇರುತ್ತಿದೆ ತರಕಾರಿ ಬೆಲೆ : ಆದ್ರೆ ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ಟೊಮೇಟೊ-ಈರುಳ್ಳಿ!

ಸತತ ಏಳನೇ ದಿನವೂ ಕುಸಿದ ವಾಯು ಗುಣಮಟ್ಟ:

ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (SAFAR) ಪ್ರಕಾರ ಗುರುವಾರ ದೆಹಲಿಯ ಗಾಳಿಯ ಗುಣಮಟ್ಟವು "ಅತ್ಯಂತ ಕಳಪೆ" ವರ್ಗಕ್ಕೆ ಕುಸಿದಿದೆ.ಸತತ ಏಳನೇ ದಿನವೂ ವಾಯು ಗುಣಮಟ್ಟ ಕಳಪೆ ಮಟ್ಟದಲ್ಲಿರುವುದು ಆತಂಕ ಮೂಡಿಸಿದೆ. 

ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) ಭಾನುವಾರ 280 ರಿಂದ ಇಂದು 330 ಕ್ಕೆ ಮತ್ತೆ ಕುಸಿದಿದೆ. SAFAR ಪ್ರಕಾರ, ವಾಯು ಗುಣಮಟ್ಟ ಸೂಚ್ಯಂಕ  0-50ರ ಒಳಗಿದ್ದರೆ ಉತ್ತಮವೆಂದು, 51-100ರೊಳಗಿದ್ದರೆ ಮಧ್ಯಮವೆಂದೂ, 301-400ರ ಒಳಗಿದ್ದರೆ ಕಳಪೆ, 5400-500ರ ನಡುವಿದ್ದರೆ ಅತ್ಯಂತ ಗಂಭೀರ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ.

ಅಕ್ಕ-ಪಕ್ಕದ ನಗರಗಳಲ್ಲೂ ಕಳಪೆ ವಾಯು ಗುಣಮಟ್ಟ:

ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಮಟ್ಟವನ್ನು ನಿಭಾಯಿಸಲು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನವೆಂಬರ್ 13 ರಂದು 'ಮಾಲಿನ್ಯ ಲಾಕ್‌ಡೌನ್' ಘೋಷಿಸಿದರು. ದೆಹಲಿ ಸರ್ಕಾರ ಮಾಲಿನ್ಯ ನಿಯಂತ್ರಣಕ್ಕೆ ಬುಧವಾರ 10 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ : ಪ್ರಮುಖ ಪ್ರತಿಪಕ್ಷದ ಪಾತ್ರ ನಿರ್ವಹಣೆಯಲ್ಲಿ ಕಾಂಗ್ರೆಸ್ ವಿಫಲ- ಮಾಜಿ ಸಿಎಂ ಮುಕುಲ್ ಸಂಗ್ಮಾ 

ದೆಹಲಿಯ ಪಕ್ಕದ ನಗರಗಳಾದ, ಫರೀದಾಬಾದ್ (354), ಘಾಜಿಯಾಬಾದ್ (372), ಗ್ರೇಟರ್ ನೋಯ್ಡಾ (388), ಗುರುಗ್ರಾಮ್ (345) ಮತ್ತು ನೋಯ್ಡಾ (385)ಗಳೂ ಕೂಡ ಕಳಪೆ ವಾಯು ಗುಣಮಟ್ಟವನ್ನು ಹೊಂದಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News