Facebook ಇಷ್ಟವಿದ್ದರೆ Indian Army ಬಿಟ್ಟುಬಿಡಿ, Lieutenant Colonelಗೆ ದೆಹಲಿ HC ಕಡಕ್ ಸೂಚನೆ

ಭಾರತೀಯ ಸೇನೆಯಲ್ಲಿ 89 ಆಪ್ ಗಳ ಬಳಕೆಯ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಪ್ರಶ್ನಿಸಿ ಲೆಫ್ಟ್ ನೆಂಟ್ ಕರ್ನಲ್ ಒಬ್ಬರು ದೆಹಲಿ ಹೈಕೋರ್ಟ್ ಮೊರೆಹೋಗಿದ್ದಾರೆ. ಫೇಸ್ ಬುಕ್ ಖಾತೆ ಬಂದ್ ಮಾಡುವುದರಿಂದ ಆಗುವ ತೊಂದರೆಗಳ ಕುರಿತು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅವರ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ನಿಮಗೆ ಫೇಸ್ ಬುಕ್ ಇಷ್ಟವಿದ್ದರೆ, ನೌಕರಿಯನ್ನು ಬಿಟ್ಟುಬಿಡಿ ಎಂದು ಕಡ್ಡಿ ಮುರಿದ ಹಾಗೆ ಹೇಳಿದೆ.

Last Updated : Jul 14, 2020, 09:15 PM IST
Facebook ಇಷ್ಟವಿದ್ದರೆ Indian Army ಬಿಟ್ಟುಬಿಡಿ, Lieutenant Colonelಗೆ ದೆಹಲಿ HC ಕಡಕ್ ಸೂಚನೆ title=

ನವದೆಹಲಿ: ಭಾರತೀಯ ಸೇನೆಯಲ್ಲಿ 89 ಆಪ್ ಗಳ ಮೇಲೆ ವಿಧಿಸಲಾಗಿರುವ ಬ್ಯಾನ್ ಪ್ರಶ್ನಿಸಿ ಮತ್ತು ಫೇಸ್ ಬುಕ್ ಬಳಕೆಗೆ ಅನುಮತಿ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋದ ಲೆಫ್ಟ್ ನೆಂಟ್ ಕರ್ನಲ್ ವೋಬ್ಬರಿಗೆ ನ್ಯಾಯಪೀಠ ತೀವ್ರ ಕಟುವಾದ ಶಬ್ದಗಳಲ್ಲಿ ಟಿಪ್ಪಣಿ ಮಾಡಿದೆ. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಪೀಠ, ದೇಶದ ಸುರಕ್ಷತೆಯ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಹೈಕೋರ್ಟ್‌ನ ಇಬ್ಬರು ಸದಸ್ಯರ ಪೀಠವು ಲೆಫ್ಟಿನೆಂಟ್ ಕರ್ನಲ್ ಪಿ.ಕೆ. ಅವರು ಚೌಧರಿ ಅವರಿಗೆ ಫೇಸ್‌ಬುಕ್‌ ತೊರೆಯಲು ಸಾಧ್ಯವಾಗದಿದ್ದರೆ ಕೆಲಸ ತ್ಯಜಿಸಬೇಕೆಂದು ಕಡ್ಡಿ ಮುರಿದ ಹಾಗೆ ಹೇಳಿದೆ.

ನಿಮ್ಮ ಬಳಿ ಬೇರೆ ವಿಕಲ್ಪವಿದೆ ಎಂದ ಹೈಕೋರ್ಟ್ 
ಭಾರತೇಎಯ ಸೇನೆಯ ಈ ಹಿರಿಯ ಅಧಿಕಾರಿಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸುವ ಹೈಕೋರ್ಟ್, ಸಂಘಟನೆಯ ಆದೇಶವನ್ನು ಪಾಲಿಸಿ ಇಲ್ಲದಿದ್ದರೆ ರಾಜೀನಾಮೆ ನೀಡಿ ಎಂದು ಹೇಳಿದೆ. ಇತ್ತೀಚೆಗಷ್ಟೇ ಲೆಫ್ಟಿನೆಂಟ್ ಕರ್ನಲ್ ಪಿ.ಕೆ. ಚೌಧರಿ ಸಶಸ್ತ್ರ ಪಡೆಗಳ ಸಿಬ್ಬಂದಿಗಳಿಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳ ಬಳಕೆ ನಿಷೇಧಿಸಿದ್ದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ನ್ಯಾಯಪೀಠ ಅವರ ಬಳಿ ಆಯ್ಕೆ ಇದೆ ಎಂದು ಹೇಳಿದೆ.

ಲೆಫ್ಟಿನೆಂಟ್ ಕರ್ನಲ್ ಮಂಡಿಸಿದ ವಾದವೇನು?
ಭಾರತೀಯ ಸೇನೆ ನೀಡಿರುವ ಆದೇಶದ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಲೆಫ್ಟ್ ನೆಂಟ್ ಕರ್ನಲ್, ಫೇಸ್ ಬುಕ್ ಅಕೌಂಟ್ ಬಂದ್ ಮಾಡುವುದರಿಂದ ಅಕೌಂಟ್ ನಲ್ಲಿರುವ ಎಲ್ಲ ಡೇಟಾ, ಸಂಪರ್ಕಗಳು ಹಾಗೂ ಸ್ನೇಹಿತರ ಜೊತೆಗಿನ ಸಂಪರ್ಕ ಕಡಿತಗೊಳ್ಳಲಿದ್ದು, ಅವುಗಳನ್ನು ಮತ್ತೆ ಸ್ಥಾಪಿಸುವುದು ಕಷ್ಟಕರವಾಗಲಿದೆ ಎಂದು ಹೇಳಿದ್ದರು. ಅವರ ಅರ್ಜಿಯ ಕುರಿತು ವಿಚಾರಣೆ ನಡೆಸಿರುವ ಪೀಠ... 'ಇಲ್ಲ ಇಲ್ಲ ಕ್ಷಮಿಸಿ..ನೀವು ದಯವಿಟ್ಟು ಅದನ್ನು ಬಂದ್ ಮಾಡಿ. ನೀವು ಯಾವಾಗ ಬೇಕಾದರೂ ಕೂಡ ಹೊಸ ಖಾತೆ ತೆರೆಯಬಹುದು. ನೀವು ಒಂದು ಸಂಘಟನೆಯ ಭಾಗವಾಗಿದ್ದೀರಿ ಮತ್ತು ಸಂಘಟನೆಯ ಆದೇಶ ನೀವು ಪಾಲಿಸಲೇಬೇಕು' ಎಂದು ಹೇಳಿದೆ.

Trending News