ನವದೆಹಲಿ: ಟಿಕ್‌ಟಾಕ್ ಬಳಕೆದಾರರಿಗೆ ಬಹಳ ಮುಖ್ಯವಾದ ಸುದ್ದಿ. ನೀವು ಸಹ ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡುತ್ತಿದ್ದರೆ ಕೆಲವು ವಿಷಯಗಳ ಬಗ್ಗೆ ಗಮನಕೊಡುವುದು ಬಹಳ ಮುಖ್ಯ. ಇಲ್ಲದಿದ್ದರೆ ನೀವು ಕಾನೂನು ರೀತಿ ಶಿಕ್ಷೆ ಎದುರಿಸುವ ಸನ್ನಿವೇಶ ಎದುರಾಗಬಹುದು.
ಕೇವಲ ಕಾನೂನು ಕ್ರಮ ತೆಗೆದುಕೊಳ್ಳುವುದು ಮಾತ್ರವಲ್ಲದೆ ಖಾತೆಯನ್ನು ಅಮಾನತುಗೊಳಿಸುವ ಅಪಾಯವೂ ಇರುತ್ತದೆ. ವಾಸ್ತವವಾಗಿ ಅನೇಕ ಅಪಾಯಕಾರಿ ವೀಡಿಯೊಗಳ ದೂರುಗಳ ನಂತರ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಬಳಕೆದಾರರನ್ನು ಎಚ್ಚರಿಸಲು ಕಂಪನಿಯು ಮಾರ್ಗಸೂಚಿಯನ್ನು ಹೊರಡಿಸಿದೆ.
TikTok ಬಗ್ಗೆ ಇಮೇಲ್ ಮೂಲಕ ಬಹಿರಂಗಗೊಂಡಿದೆ ಈ ಶಾಕಿಂಗ್ ಮಾಹಿತಿ
ವೀಡಿಯೊಗಳನ್ನು ಮಾಡುವಾಗ ಏನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಯಾವ ತಪ್ಪುಗಳನ್ನು ಮಾಡಬಾರದು ಎಂದು ಟಿಕ್‌ಟಾಕ್ ತನ್ನ ಬಳಕೆದಾರರಿಗೆ ತಿಳಿಸಿದೆ. ಇತ್ತೀಚೆಗೆ ಟಿಕ್‌ಟಾಕ್ (TikTok) ಅಪರಾಧವನ್ನು ಉತ್ತೇಜಿಸುವ ವೀಡಿಯೊಗಳನ್ನು ಮಾಡುವ ಅನೇಕ ಬಳಕೆದಾರರ ಖಾತೆಯ ಮೇಲೆ ಕ್ರಮ ಕೈಗೊಂಡಿದೆ. ಅಂತಹ ಖಾತೆದಾರರ ವಿರುದ್ಧ ಪೊಲೀಸರಿಗೆ ಹಲವು ದೂರುಗಳು ತಲುಪಿವೆ.
ಟಿಕ್‌ಟಾಕ್ ವೀಡಿಯೊ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:
ಟಿಕ್‌ಟಾಕ್ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಕಂಪನಿಯು ಯಾವುದೇ ರೀತಿಯ ಕಾನೂನುಬಾಹಿರ ಮತ್ತು ಅಪಾಯಕಾರಿ ಚಟುವಟಿಕೆ, ದೈಹಿಕ ಹಿಂಸೆ ಅಥವಾ ದೈಹಿಕ ಕಿರುಕುಳದ ಪ್ರಚಾರ, ಯಾವುದೇ ನಿರ್ದಿಷ್ಟ ಸಮುದಾಯವನ್ನು ತೋರಿಸುವುದು ಅಥವಾ ಅವಮಾನಿಸುವಂತಹ ವಿಡಿಯೋಗಳು ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ ಇತರರೊಂದಿಗೆ ಅಥವಾ ಅವರ ಸ್ವಂತ ಜೀವನ, ಲಿಂಗ ವ್ಯತ್ಯಾಸಗಳು ಅಥವಾ ಒಬ್ಬರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಸಹ ಶಿಕ್ಷಾರ್ಹವಾಗಿರುತ್ತದೆ. ಹಾಗೆ ಮಾಡುವ ಬಳಕೆದಾರರ ವಿರುದ್ಧ ಕಂಪನಿಯ ಪರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಟಿಕ್‌ಟಾಕ್ ಬಳಕೆದಾರರಿಗೆ ತಮ್ಮ ಎಲ್ಲ ಸೃಜನಶೀಲತೆ ಮತ್ತು ಸಂತೋಷವನ್ನು ಹಂಚಿಕೊಳ್ಳಲು ಕಂಪನಿ ಕೇಳಿದೆ. ಇದರೊಂದಿಗೆ ಇತರ ಬಳಕೆದಾರರಿಗೆ ಸುರಕ್ಷಿತ ವಾತಾವರಣವನ್ನು ನೀಡುವಂತೆಯೂ ಕಂಪನಿ ಮನವಿ ಮಾಡಿದೆ.