ದೆಹಲಿಯಲ್ಲಿ ಭೂಕಂಪ!

 ಭಾನುವಾರ ದೆಹಲಿ- ಎನ್.ಸಿ.ಆರ್ ನ ಕೆಲವು ಭಾಗಗಳಲ್ಲಿ ಭೂಕಂಪನ ಅನುಭವವಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

Last Updated : Sep 9, 2018, 06:04 PM IST
ದೆಹಲಿಯಲ್ಲಿ  ಭೂಕಂಪ! title=
ಸಾಂದರ್ಭಿಕ ಚಿತ್ರ

ನವದೆಹಲಿ: ಭಾನುವಾರ ದೆಹಲಿ- ಎನ್.ಸಿ.ಆರ್ ನ ಕೆಲವು ಭಾಗಗಳಲ್ಲಿ ಭೂಕಂಪನ ಅನುಭವವಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಆದರೆ ಈ ಭೂಕಂಪನದ ತೀವ್ರತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಇನ್ನು ವರದಿ ನೀಡಬೇಕಾಗಿದೆ.ಒಂದು ಅಂದಾಜಿನ ಪ್ರಕಾರ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ  5 ಕ್ಕಿಂತ ಕಡಿಮೆ ಇದೆ ಎನ್ನಲಾಗುತ್ತಿದೆ. 

ಭೂಕಂಪನದಿಂದ ಇದುವರೆಗೆ ಯಾವುದೇ ಹಾನಿಯಾದ ಕುರಿತು ವರದಿಯಾಗಿಲ್ಲ ಎಂದು  ತಿಳಿದು ಬಂದಿದೆ. ಇನ್ನೊಂದೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ಜನರರು ಭೂಕಂಪನದ ಅನುಭವದ ಬಗ್ಗೆ ಟ್ವೀಟ್ ಮಾಡಿಕೊಂಡಿದ್ದಾರೆ.

 

 

Trending News