ಈ ರಾಜ್ಯದ ನಿರುದ್ಯೋಗಿ ಯುವಕರಿಗೆ Good News!

ಒಂದು ಲಕ್ಷ ಹುದ್ದೆಗಳ ಭರ್ತಿಗಾಗಿ ಮಧ್ಯಪ್ರದೇಶ ಸರ್ಕಾರ (Government of Madhya Pradesh) ತಯಾರಿ ನಡೆಸುತ್ತಿದೆ.

Last Updated : Nov 22, 2019, 02:06 PM IST
ಈ ರಾಜ್ಯದ ನಿರುದ್ಯೋಗಿ ಯುವಕರಿಗೆ Good News! title=

ಭೋಪಾಲ್: ಮಧ್ಯಪ್ರದೇಶದ ನಿರುದ್ಯೋಗಿ(Unemplyed) ಯುವಕರಿಗೆ ಒಳ್ಳೆಯ ಸುದ್ದಿ ಇದೆ. ಒಂದು ಲಕ್ಷ ಹುದ್ದೆಗಳ ಭರ್ತಿಗಾಗಿ ಮಧ್ಯಪ್ರದೇಶ ಸರ್ಕಾರ (Government of Madhya Pradesh) ತಯಾರಿ ನಡೆಸುತ್ತಿದೆ. ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಮಾಜಿಕ ನ್ಯಾಯ ಇಲಾಖೆ ಸೇರಿದಂತೆ 12 ಕ್ಕೂ ಹೆಚ್ಚು ಇಲಾಖೆಗಳಲ್ಲಿ ಈ ನೇಮಕಾತಿಗಳು ನಡೆಯುತ್ತಿವೆ ಎಂದು ಮಧ್ಯಪ್ರದೇಶ ಸರ್ಕಾರದ ಸಹಕಾರಿ ಸಚಿವ ಗೋವಿಂದ್ ಸಿಂಗ್ ಹೇಳಿದರು.

ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಕಮಲ್ ನಾಥ್ (Kamal Nath) ಸೂಚನೆ ನೀಡಿದ್ದಾರೆ ಎಂದು ಹೇಳಿದ ಸಚಿವ ಗೋವಿಂದ್ ಸಿಂಗ್, ಖಾಲಿ ಇರುವ ಈ ಹುದ್ದೆಗಳನ್ನು 1 ವರ್ಷದೊಳಗೆ ಭರ್ತಿ ಮಾಡಬೇಕು ಎಂದು ಸಿಎಂ ಸೂಚಿಸಿರುವುದಾಗಿ ಮಾಹಿತಿ ಹಂಚಿಕೊಂಡರು. ಈ ನೇಮಕಾತಿಗಳಲ್ಲಿ, ಗುತ್ತಿಗೆ ಕಾರ್ಮಿಕರಿಗೆ ಸಹ ಅವಕಾಶ ನೀಡಲಾಗುವುದು. ಬಿಜೆಪಿ ಸರ್ಕಾರ (BJP Government) ಹೊರಗುತ್ತಿಗೆ ಅಭ್ಯಾಸವನ್ನು ಪ್ರಾರಂಭಿಸಿದೆ ಎಂದು ಆರೋಪಿಸಿದ ಸಚಿವ ಗೋವಿಂದ್ ಸಿಂಗ್, ಈ ಮೂಲಕ ಸರ್ಕಾರದಿಂದ ಹೆಚ್ಚಿನ ಹಣವನ್ನು ತೆಗೆದುಕೊಳ್ಳುವ ಮೂಲಕ ನೌಕರರಿಗೆ ಕಡಿಮೆ ಹಣವನ್ನು ನೀಡಲಾಗುತ್ತಿದೆ. ಇಂತಹ ದಂಧೆಗೆ ಅವಕಾಶ ಕಲ್ಪಿಸದೆ ನೇರ ನೇಮಕಾತಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದಲ್ಲದೆ ಮಧ್ಯಪ್ರದೇಶವು ಮ್ಯಾಗಿ ನೂಡಲ್ಸ್‌ನ ಅತಿದೊಡ್ಡ ಸರಬರಾಜುದಾರನಾಗಲಿದೆ ಎಂಬ ವಿಷಯವನ್ನು ಗೋವಿಂದ್ ಸಿಂಗ್ ಬಹಿರಂಗಪಡಿಸಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಕಮಲ್ ನಾಥ್ ಸರ್ಕಾರ (Kamal Nath Government) ರಾಜ್ಯದಲ್ಲಿ ಹೂಡಿಕೆ ಹೆಚ್ಚಿಸಲು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ವಾಸ್ತವವಾಗಿ, ಮಧ್ಯಪ್ರದೇಶ ಸರ್ಕಾರವು ಈಗ ರಾಜ್ಯದಲ್ಲಿ ಆ ಬೆಳೆಗಳ ಮೇಲೆ ಗಮನ ಕೇಂದ್ರೀಕರಿಸಿದೆ, ಇದರಲ್ಲಿ ಆದಾಯ ಹೆಚ್ಚು ಮತ್ತು ಖರ್ಚು ಕಡಿಮೆ ಎಂದರು.

Trending News