ಕಾಂಗ್ರೆಸ್ ಸರ್ಕಾರ ಪತನವಾದರೆ ಅದರ ಶ್ರೇಯ ಬಿಜೆಪಿಗೆ ಸಲ್ಲುವುದಿಲ್ಲ ಎಂದ ಶಿವಸೇನಾ...!

ಕಾಂಗ್ರೆಸ್ ನಿಂದ ಜ್ಯೋತಿರಾದಿತ್ಯ ಸಿಂಧಿಯಾ ನಿರ್ಗಮಿಸಿದ ನಂತರ ಮಧ್ಯಪ್ರದೇಶದಲ್ಲಿ ಬಿಕ್ಕಟ್ಟಿನ ಮಧ್ಯೆ, ಶಿವಸೇನೆ ಇಂದು ತನ್ನ ಮುಖವಾಣಿಯಲ್ಲಿ ಕಮಲ್ ನಾಥ್ ವಿರುದ್ಧ ವಾಗ್ದಾಳಿ ನಡೆಸಿದೆ.

Last Updated : Mar 12, 2020, 12:37 PM IST
ಕಾಂಗ್ರೆಸ್ ಸರ್ಕಾರ ಪತನವಾದರೆ ಅದರ ಶ್ರೇಯ ಬಿಜೆಪಿಗೆ ಸಲ್ಲುವುದಿಲ್ಲ ಎಂದ ಶಿವಸೇನಾ...!   title=

ನವದೆಹಲಿ: ಕಾಂಗ್ರೆಸ್ ನಿಂದ ಜ್ಯೋತಿರಾದಿತ್ಯ ಸಿಂಧಿಯಾ ನಿರ್ಗಮಿಸಿದ ನಂತರ ಮಧ್ಯಪ್ರದೇಶದಲ್ಲಿ ಬಿಕ್ಕಟ್ಟಿನ ಮಧ್ಯೆ, ಶಿವಸೇನೆ ಇಂದು ತನ್ನ ಮುಖವಾಣಿಯಲ್ಲಿ ಕಮಲ್ ನಾಥ್ ವಿರುದ್ಧ ವಾಗ್ದಾಳಿ ನಡೆಸಿದೆ.

'ಜ್ಯೋತಿರಾದಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ 22 ಕಾಂಗ್ರೆಸ್ ಶಾಸಕರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ. ಸಿಂಧಿಯಾ ಬಿಜೆಪಿಗೆ ಪ್ರವೇಶಿಸಿದ್ದಾರೆ. ಇದು ಕಮಲ್ ನಾಥ್ ಅವರ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡಿತು.ಕಾಂಗ್ರೆಸ್ ಸರ್ಕಾರ ಮಧ್ಯಪ್ರದೇಶದಲ್ಲಿ ಪತನಗೊಂಡರೆ, ಕ್ರೆಡಿಟ್ ಬಿಜೆಪಿಗೆ ಹೋಗುವುದಿಲ್ಲ. ಕಮಲ್ ನಾಥ್ ಅವರ ಸರ್ಕಾರದ ಅವನತಿಗೆ ಅವರ ಅಸಡ್ಡೆ, ದುರಹಂಕಾರ ಮತ್ತು ಹೊಸ ಪೀಳಿಗೆಯನ್ನು ಕಡೆಗಣಿಸುವ ಪ್ರವೃತ್ತಿ ಕಾರಣ ಎಂದು ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ತಿಳಿಸಿದ್ದಾರೆ.

'ದಿಗ್ವಿಜಯ ಸಿಂಗ್ ಮತ್ತು ಕಮಲ್ ನಾಥ್ ಅವರು ಮಧ್ಯಪ್ರದೇಶದ ಹಳೆಯ ನಾಯಕರು. ಅವರ ಆರ್ಥಿಕ ಶಕ್ತಿ ಹೆಚ್ಚಾಗಿದೆ, ಆದ್ದರಿಂದ ಅವರು ಬಹುಮತದ ಅಂಚಿನಲ್ಲಿರುವಾಗ ಇಲ್ಲಿಂದ ಮತ್ತು ಅಲ್ಲಿಂದ ಶಾಸಕರನ್ನು ಒಟ್ಟುಗೂಡಿಸುವ ಮೂಲಕ ಬೆಂಬಲವನ್ನು ಪಡೆದರು.ಇದು ನಿಜವಾಗಿದ್ದರೂ ರಾಜಕೀಯವನ್ನು ಮಾಡಲು ಸಾಧ್ಯವಿಲ್ಲ, ಜ್ಯೋತಿರಾದಿತ್ಯ ಸಿಂಧಿಯಾ ಪ್ರಭಾವ ಇಡೀ ರಾಜ್ಯದ ಮೇಲೆ ಬಿರದೆ ಇರಬಹುದು ಆದರೆ ಗ್ವಾಲಿಯರ್ ಮತ್ತು ಗುನಾದಂತಹ ದೊಡ್ಡ ಪ್ರದೇಶಗಳಲ್ಲಿ ಅವನಿಗೆ ಪ್ರಭಾವವಿದೆ 'ಎಂದು ಅದು ಹೇಳಿದೆ.

2018 ರ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಕಡೆಗಣಿಸುವುದರ ಕುರಿತು ಸಂಪಾದಕೀಯವು ಪ್ರಶ್ನೆಗಳನ್ನು ಎತ್ತಿತು. ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಮುಖವಾಗಿದ್ದರು. ಆದರೆ ನಂತರ ಪಕ್ಷದ ಹಿರಿಯರು ಅವರನ್ನು ಪಕ್ಕಕ್ಕೆ ತಳ್ಳಿದರು' ಎಂದು ಸಾಮ್ನಾ ಹೇಳಿದೆ.

2019 ರಲ್ಲಿ ಕರ್ನಾಟಕ ಸರ್ಕಾರದ ಬಿಕ್ಕಟ್ಟು ಮತ್ತು ಇತ್ತೀಚೆಗೆ ನಡೆದ ದೆಹಲಿ ಹಿಂಸಾಚಾರದ ಬಗ್ಗೆ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಯನ್ನು ಟೀಕಿಸಿದ್ದರು ಆದರೆ ಅವರು ವಿರೋಧಿಸಿದ ಅದೇ ಪಕ್ಷಕ್ಕೆ ಸೇರಿದರು ಎಂದು ಅದು ಹೇಳಿದೆ.

 

Trending News