ನವದೆಹಲಿ: ಎಲ್‌ಎಸಿ (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಚೀನಾ ಸೇನೆಗೆ ಸೇರಿದ ಹೆಲಿಕ್ಯಾಪ್ಟರ್ ಹಾಗೂ ಯುದ್ಧವಿಮಾನಗಳ ಹೆಚ್ಚಾಗುತ್ತಿರುವ ಚಟುವಟಿಕೆಗಳ ಹಿನ್ನೆಲೆ ಭಾರತ ಕೂಡ ಎಚ್ಚೆತ್ತುಕೊಂಡಿದೆ. ಪೂರ್ವ ಲಡಾಕ್ ನ ಗಡಿಭಾಗದಲ್ಲಿ ಭಾರತ ನೆಲದಿಂದ ಆಗಸದಲ್ಲಿ ದಾಳಿ ಮಾಡುವ ಮಿಸೈಲ್ ಡಿಫೆನ್ಸ್ ಸಿಸ್ಟಮ್ ಅನ್ನು ನಿಯೋಜಿಸುವ ಜೊತೆಗೆ ಸೇನೆಯ ಮೂರು ವಿಭಾಗಗಳನ್ನೂ ಸನ್ನದ್ಧವಾಗಿರಲು ಹೇಳಿದೆ.
ಚೀನಾ ನೀಡುತ್ತಿರುವ ಯಾವುದೇ ಭರವಸೆಗಳನ್ನು ನಂಬಲು ಸಾಧ್ಯವಿಲ್ಲ. ಹೀಗಾಗಿ ತಮ್ಮ ರಷ್ಯಾ ಭೇಟಿಯಿಂದ ಮರಳಿದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಅವರನ್ನು ಭೇಟಿಯಾಗಿ, ಪೂರ್ವ ಲಡಾಕ್ ನ ಚೀನಾ ಗಡಿಯಲ್ಲಿ ಇತ್ತೀಚಿನ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದ್ದಾರೆ.
ಭಾರತೀಯ ಸೇನೆಯ ಮೂರು ವಿಭಾಗಗಳಿಗೆ ಅಲರ್ಟ್ ಜಾರಿ
ಇತ್ತೀಚೆಗಷ್ಟೇ ಭಾರತೀಯ ರಕ್ಷಣಾ ಸಚಿವ ರಾಜನಾಥ್ ಸಿಂಗ್, CDS ಜನರಲ್ ಬಿಪಿನ್ ರಾವತ್, ಭಾರತೀಯ ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರ ಜೊತೆಗೆ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿ, ಸೇನೆಯ ಮೂರು ವಿಭಾಗಗಳನ್ನು ಹೈ ಅಲರ್ಟ್ ಮೇಲಿರಲು ಸೂಚಿಸಲಾಗಿದೆ..
LACಯ ಪ್ರತಿಯೊಂದು ಪೋಸ್ಟ್ ಗಳ ಮೇಲೆ ಹೆಚ್ಚುವರಿ ಯೋಧರ ನಿಯೋಜನೆ
ಈ ಕುರಿತು ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಅರುಣಾಚಲ ಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ ಹಾಗೂ ಲಡಾಕ್ ನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಪ್ರಮುಖ ಪೋಸ್ಟ್ ಗಳು ಹಾಗೂ ಸೇನಾ ತುಕಡಿಗಳಿಗೆ ಹೆಚ್ಚುವರಿ ಯೋಧರನ್ನು ಈ ಮೊದಲೇ ನಿಯೋಜಿಸಲಾಗಿದೆ.
ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಗೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ಸೇನೆಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ಈ ಭಾಗದಲ್ಲಿ ಉಭಯ ಸೈನಿಕರ ಮಧ್ಯೆ ನಡೆದ ಒಂದು ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದೇ ಜಾಗದಲ್ಲಿ ಚೀನಾ ಲಿಬರೇಶನ್ ಆರ್ಮಿಯ ಜವಾನರು ಒಂದು ಟೆಂಟ್ ಹಾಗೂ ಒಬ್ಸೆರ್ವೆಶನ್ ಪಾಯಿಂಟ್ ನಿರ್ಮಿಸಿದ್ದಾರೆ. ಓಪನ್ ಸೋರ್ಸ್ ಸೆಟೆಲೈಟ್ ಮೂಲಕ್ ಕ್ಲಿಕ್ಕಿಸಳಗಿರುವ ಫೋಟೋಗಳಲ್ಲಿ ಈ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಬಂಕರ್ ಗಳನ್ನು ಸಿದ್ಧಗೊಳಿಸಿರುವುದು ಕೂಡ ಸ್ಪಷ್ಟವಾಗಿ ಗೋಚರಿಸುತ್ತಿದೆ.