ಭಾರತ-ರಷ್ಯಾ AK-203 ರೈಫಲ್ ಒಪ್ಪಂದಕ್ಕೆ ಸಹಿ, 2031 ರವರೆಗೆ ಮಿಲಿಟರಿ ಸಹಕಾರ ವಿಸ್ತರಣೆ

India-Russia AK-203 deal: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಷ್ಯಾದ ರಕ್ಷಣಾ ಸಚಿವ ಸರ್ಗೆ ಶೋಯಿಗು ನಡುವಿನ ದ್ವಿಪಕ್ಷೀಯ ಸಭೆಯಲ್ಲಿ, ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ 5,00,000 ಕ್ಕೂ ಹೆಚ್ಚು AK-203 ಅಸಾಲ್ಟ್ ರೈಫಲ್‌ಗಳ ಜಂಟಿ ಉತ್ಪಾದನೆಗೆ ಬಹು ನಿರೀಕ್ಷಿತ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Edited by - ZH Kannada Desk | Last Updated : Dec 6, 2021, 05:23 PM IST
  • ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಷ್ಯಾದ ರಕ್ಷಣಾ ಸಚಿವ ಸರ್ಗೆ ಶೋಯಿಗು ನಡುವಿನ ದ್ವಿಪಕ್ಷೀಯ ಸಭೆ
  • ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ 5,00,000 ಕ್ಕೂ ಹೆಚ್ಚು AK-203 ಅಸಾಲ್ಟ್ ರೈಫಲ್‌ಗಳ ಜಂಟಿ ಉತ್ಪಾದನೆ
  • ಭಾರತ ಮತ್ತು ರಷ್ಯಾ ಸೋಮವಾರ ₹5,100 ಕೋಟಿ ಮೌಲ್ಯದ ಬಹು ನಿರೀಕ್ಷಿತ ಒಪ್ಪಂದಕ್ಕೆ ಸಹಿ
ಭಾರತ-ರಷ್ಯಾ AK-203 ರೈಫಲ್ ಒಪ್ಪಂದಕ್ಕೆ ಸಹಿ,  2031 ರವರೆಗೆ ಮಿಲಿಟರಿ ಸಹಕಾರ ವಿಸ್ತರಣೆ

ನವದೆಹಲಿ:  ಉತ್ತರ ಪ್ರದೇಶದ ಅಮೇಥಿಯಲ್ಲಿ ಜಂಟಿ ಉದ್ಯಮದ ಅಡಿಯಲ್ಲಿ 5,00,000 ಕ್ಕೂ ಹೆಚ್ಚು AK-203 ಅಸಾಲ್ಟ್ ರೈಫಲ್‌ಗಳ ಜಂಟಿ ಉತ್ಪಾದನೆಗೆ, ಸೋಮವಾರ ₹5,100 ಕೋಟಿ ಮೌಲ್ಯದ ಬಹು ನಿರೀಕ್ಷಿತ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ ಹಾಕಿವೆ (India-Russia AK-203 deal) ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಷ್ಯಾದ ರಕ್ಷಣಾ ಸಚಿವ ಸರ್ಗೆ ಶೋಯಿಗು ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಒಪ್ಪಂದವನ್ನು ಅಂತಿಮಗೊಳಿಸಲಾಯಿತು.

2021-31 ಕ್ಕೆ ಉಭಯ ದೇಶಗಳು ತಮ್ಮ ಮಿಲಿಟರಿ-ತಾಂತ್ರಿಕ ಸಹಕಾರ ವ್ಯವಸ್ಥೆಯನ್ನು ನವೀಕರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2021 ರಿಂದ 2031ರ ವರೆಗೆ ಮಿಲಿಟರಿ-ತಾಂತ್ರಿಕ ಸಹಕಾರ ವ್ಯವಸ್ಥೆಯಡಿ ಭಾರತ-ರಷ್ಯಾ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ 6,01,427 ಅಸಾಲ್ಟ್ ರೈಫಲ್ಸ್ AK-203 ಖರೀದಿ ಒಪ್ಪಂದಕ್ಕೆ (India-Russia AK-203 deal) ಭಾರತ ಮತ್ತು ರಷ್ಯಾ ಸಹಿ ಹಾಕಿವೆ.

ಇದನ್ನೂ ಓದಿ: Vladimir Putin India Visit: ಕುಟಿಲ ನೀತಿಯಲ್ಲಿ ಪರಿಣಿತ ವ್ಲಾಡಿಮೀರ್ ಪುಟಿನ್, ಭಾರತದ ಭೇಟಿ ಹಿಂದಿನ ಉದ್ದೇಶ ಏನು?

ಭಾರತಕ್ಕೆ ರಷ್ಯಾದ ಬಲವಾದ ಬೆಂಬಲವನ್ನು ಭಾರತವು ಆಳವಾಗಿ ಪ್ರಶಂಸಿಸುತ್ತದೆ. ನಮ್ಮ ಸಹಕಾರವು ಇಡೀ ಪ್ರದೇಶಕ್ಕೆ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ. ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಸೇನಾ ಸಹಕಾರಕ್ಕೆ ಸಂಬಂಧಿಸಿದಂತೆ ಹಲವಾರು ಒಪ್ಪಂದಗಳು/ಪ್ರೋಟೋಕಾಲ್‌ಗಳಿಗೆ ಸಹಿ ಹಾಕಿರುವುದು ಸಂತಸ ತಂದಿದೆ ಎಂದು ರಾಜನಾಥ್ ಸಿಂಗ್ ಸೋಮವಾರ ಟ್ವೀಟ್ ಮಾಡಿದ್ದಾರೆ.

 

 

ಭದ್ರತಾ ಕ್ಯಾಬಿನೆಟ್ ಸಮಿತಿ (CCS) ಕಳೆದ ವಾರ ಯೋಜನೆಗೆ ಅನುಮೋದನೆ ನೀಡಿದೆ. AK-203 ರೈಫಲ್‌ಗಳು ಮೂರು ದಶಕಗಳ ಹಿಂದೆ ಸೇರಿಸಲಾದ INSAS ರೈಫಲ್‌ಗಳನ್ನು ಬದಲಾಯಿಸುತ್ತವೆ.

ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ವಾರ್ಷಿಕ ಶೃಂಗಸಭೆಯ ಮುನ್ನ ಈ ಬೆಳವಣಿಗೆ ನಡೆದಿದೆ.

ಉಭಯ ದೇಶಗಳ ರಕ್ಷಣಾ ಸಚಿವರ ನಡುವಿನ ದ್ವಿಪಕ್ಷೀಯ ಸಭೆಯ ಹೊರತಾಗಿ, ಶೃಂಗಸಭೆಯ ಮೊದಲು ನಿಗದಿಪಡಿಸಲಾದ ಇತರ ಕಾರ್ಯಕ್ರಮಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಅವರ ರಷ್ಯಾದ ಸಹವರ್ತಿ ಸೆರ್ಗೆ ಲಾವ್ರೊವ್ ನಡುವಿನ ಸಭೆ ಮತ್ತು ರಕ್ಷಣಾ ಮತ್ತು ವಿದೇಶಾಂಗ ಮಂತ್ರಿಗಳ ಉದ್ಘಾಟನಾ 2+2 ಸಂವಾದಗಳು ಸೇರಿವೆ.

ಶೃಂಗಸಭೆಯಲ್ಲಿ ವ್ಯಾಪಾರ, ಬಾಹ್ಯಾಕಾಶ, ತಂತ್ರಜ್ಞಾನ ಮತ್ತು ಇಂಧನ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. 

More Stories

Trending News