ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ರೂ ಭಾರತ-ಪಾಕ್ ನಡುವೆ ಲವ್ ಮ್ಯಾರೇಜ್!

2014 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಪಾಕ್ ಯುವತಿ ಕಿರಣ್ ಸರ್ಜಿತ್ ಗೆ ವರವಿಂದರ್​ ಸಿಂಗ್ ಪರಿಚಯವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. 

Last Updated : Mar 10, 2019, 11:49 AM IST
ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ರೂ ಭಾರತ-ಪಾಕ್ ನಡುವೆ ಲವ್ ಮ್ಯಾರೇಜ್! title=

ಅಂಬಾಲಾ: ಪುಲ್ವಾಮಾ ದಾಳಿ ಬಳಿಕ ಭಾರತ-ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದರೂ ಸಹ ಪ್ರೀತಿಗೆ ಯಾವುದೇ ಗಡಿಯ ಅಡೆತಡೆ ಇಲ್ಲ ಎಂಬುದಕ್ಕೆ ಈ ಜೋಡಿಯ ವಿವಾಹ ಸಾಕ್ಷಿಯಾಗಿದೆ. 

ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಭಾರತದ ಹರಿಯಾಣ ರಾಜ್ಯದ ಅಂಬಾಲಾ ಜಿಲ್ಲೆಯ ತೆಪಲಾ ಗ್ರಾಮದ ವರಿಂದರ್ ಸಿಂಗ್ ಹಾಗೂ ಪಾಕಿಸ್ತಾನದ ಸಿಯಾಲ್ಕೊಟ್ ಜಿಲ್ಲೆಯ ಯುವತಿ ಕಿರಣ್​ ಸರ್ಜಿತ್​ ವಿವಾಹ ಇದೀಗ ಯಾವುದೇ ಅಡೆತಡೆಯಿಲ್ಲದೆ ನೆರವೇರಿದೆ.

2014 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಪಾಕ್ ಯುವತಿ ಕಿರಣ್ ಸರ್ಜಿತ್ ಗೆ ವರವಿಂದರ್​ ಸಿಂಗ್ ಪರಿಚಯವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಅದಕ್ಕೆ 2016 ಹಿರಿಯರ ಸಮ್ಮತಿಯೂ ದೊರೆತಿತ್ತು. ಫೆಬ್ರವರಿ 23 ರಂದೇ ಭಾರತದಲ್ಲಿ ಇವರ ಮದುವೆ ನಡೆಯಬೇಕಿತ್ತಾದರೂ ಭಾರತ-ಪಾಕ್​ ಮಧ್ಯೆ  ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಮಾಡುವೆ ಮುಂದೂಡಲ್ಪಟ್ಟಿತ್ತು. ಗುರುವಾರದಂದು ಪಂಜಾಬ್​ನ ಪಟಿಯಾಲದ ಗುರುದ್ವಾರವೊಂದರಲ್ಲಿ ಸಿಖ್​ ಸಂಪ್ರದಾಯದಂತೆ ಗುರು-ಹಿರಿಯರ ಆರ್ಶೀವಾದ ಪಡೆದು ಪರಿವಿಂದರ್​ ಸಿಂಗ್​ ಮತ್ತು ಸರ್ಜಿತ್ ವಿವಾಹವಾಗಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ವರ ವರಿಂದರ್, ಯುದ್ಧದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ.  ಹಾಗಾಗಿ ಎರಡೂ ರಾಷ್ಟ್ರಗಳ ಸರ್ಕಾರಗಳು ಸಂಧಾನದ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಪ್ರೀತಿ ವಿಶ್ವಾಸದಿಂದ ಸಂಬಂಧಗಳನ್ನು ಬಲಗೊಳಿಸಿಕೊಳ್ಳಬೇಕು ಎಂದು ಕೋರುತ್ತೇನೆ ಎಂದಿದ್ದಾರೆ. 

ಹಲವು ವರ್ಷಗಳ ಪ್ರೀತಿ ವಿವಾಹದಲ್ಲಿ ನಮ್ಮನ್ನು ಬೆಸೆದಿದೆ. ಇದರಿಂದ ಬಹಳ ಸಂತೋಷವಾಗಿದೆ ಎಂದು ವಧು ಕಿರಣ್ ಹೇಳಿದ್ದಾರೆ. "ನಮ್ಮ ಸಂಬಂಧಿಕರು ಹರಿಯಾಣ ಹಾಗೂ ಪಂಜಾಬ್ ನಲ್ಲಿ ನೆಲೆಸಿದ್ದಾರೆ. ಆ ಧೈರ್ಯದ ಮೇಲೆ ನಾವು ಮಗಳನ್ನು ವಿವಾಹ ಮಾಡಿ ಕೊಟ್ಟಿದ್ದೇವೆ" ಎಂದು ವಧು ಪೋಷಕರು ತಿಳಿಸಿದ್ದಾರೆ. 

Trending News