ಪಾಕ್ ನಿಂದ ಮರಳಿದ್ದ ಭಾರತದ ಹುಡುಗಿ 'ಗೀತಾ' ಗೆ 20 ಮದುವೆ ಪ್ರಸ್ತಾಪಗಳು!

    

Last Updated : Apr 20, 2018, 07:41 PM IST
ಪಾಕ್ ನಿಂದ ಮರಳಿದ್ದ ಭಾರತದ ಹುಡುಗಿ 'ಗೀತಾ' ಗೆ 20 ಮದುವೆ ಪ್ರಸ್ತಾಪಗಳು!  title=

ಇಂದೋರ್:  ಮಗುವಾಗಿದ್ದಾಗ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿದ್ದ ಭಾರತದ ಬಾಲೆ ಗೀತಾ, ಇತ್ತೀಚಿಗೆ ಅವಳ ಇಚ್ಚೆಗನುಸಾರವಾಗಿ ಸರ್ಕಾರದ ಹಸ್ತಕ್ಷೆಪದ ಮೂಲಕ ಅವಳನ್ನು ಹಲವು ವರ್ಷಗಳ ನಂತರ ಮರಳಿ ಭಾರತಕ್ಕೆ ಕರೆ ತರಲಾಗಿತ್ತು.

ಈಗ ಅವಳ ಮದುವೆಯ ಕುರಿತಾಗಿ ಸಾಮಾಜಿಕ ಕಾರ್ಯಕರ್ತ ಜ್ನ್ಯಾನೆಂದ್ರ ಪುರೋಹಿತ್ ಎನ್ನುವವರು ಫೇಸ್ ಬುಕ್ ಪೇಜ್  Reunite Geeta' ಮೂಲಕ " ಅವಳ ಮದುವೆ ಕುರಿತಾಗಿ ಜಾಹಿರಾತನ್ನು ನೀಡಿದ್ದರು. ಈಗ ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುರೋಹಿತ್ ರವರು ಹೇಳುವಂತೆ ಒಟ್ಟು 20 ಜನರು ಅವಳನ್ನು ಮದುವೆಯಾಗುವುದಕ್ಕಾಗಿ ಮುಂದೆ ಬಂದಿದ್ದಾರೆ,ಇವರಲ್ಲಿ 12 ಜನರು ಅಂಗವೈಕಲ್ಯದಿಂದ ಬಳಲಿದರೆ,ಉಳಿದವರು ಸಾಮಾನ್ಯರಾಗಿದ್ದಾರೆ.ಅದರಲ್ಲಿ ಪ್ರಮುಖವಾಗಿ ಒಬ್ಬನು ಲೇಖಕ, ಮತ್ತೊಬ್ಬರು ದೇವಸ್ತಾನದ ಪುಜಾರಿ, ಎಂದು ತಿಳಿದುಬಂದಿದೆ

ಫೇಸ್ ಬುಕ್ ನಲ್ಲಿ ಹೇಳಿರುವಂತೆ ಗೀತಾಳ ಮದುವೆ ಕುರಿತು ಅಂತಿಮ ನಿರ್ಧಾರವನ್ನು ಭಾರತ ಸರ್ಕಾರದಿಂದ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಗೀತಾಳನ್ನು ಭಾರತಕ್ಕೆ ತರುವಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಹತ್ವದ ಪಾತ್ರವನ್ನು ವಹಿಸಿದ್ದರು. ಸದ್ಯ ಗೀತಾ ಇಂದೋರ್ ನಲ್ಲಿ ಮುಖ ಬಾದಿರ್ ಸಂಘಟನ ಎನ್ನುವ ಸರ್ಕಾರೇತರ ಸಂಸ್ಥೆಯು ಅವಳನ್ನು ವಿಚಾರೈಸಿಕೊಳ್ಳುತ್ತಿದೆ.ಇದಕ್ಕೆ ಮಧ್ಯಪ್ರದೇಶ ಸರ್ಕಾರದ ಸಾಮಾಜಿಕ ಕಲ್ಯಾಣ ಇಲಾಖೆಯು ಸಹಾಯಹಸ್ತ ಚಾಚಿದೆ.

ಗೀತಾ ಏಳು ವರ್ಷದ ಮಗುವಾಗಿದ್ದಾಗ ಆಕಸ್ಮಿಕವಾಗಿ ಸಂಜೋತಾ ಎಕ್ಷ್ ಪ್ರೆಸ್ ಮೂಲಕ ಲಾಹೋರ್ ತಲುಪಿದ್ದಳು. ಅಲ್ಲಿ  ಕರಾಚಿ ಮೂಲದ ಈದಿ ಫೌಂಡೆಶನ್ ಎನ್ನುವ ಸಂಸ್ಥೆಯು ಅವಳನ್ನು ಆರೈಕೆ ಮಾಡುತ್ತಿತ್ತು, ಇತ್ತೀಚಿಗಷ್ಟೇ ಸರ್ಕಾರದ ಹಸ್ತಕ್ಷೆಪದಿಂದಾಗಿ ಗೀತಾ ಭಾರತಕ್ಕೆ ಬಂದಿದ್ದಳು.    

Trending News