Viral video : ಚಿರತೆ ಶಿಕಾರಿಗೆಂದು ಮರವೇರಿದ ಕರಿ ಚಿರತೆ, ಮರದ ತುತ್ತ ತುದಿಯಲ್ಲಿ ಇಬ್ಬರ ನಡುವೆ ನಡೆದಿದ್ದೇನು ?

Black Panther And Leopard Video: ಕಾಡು ಪ್ರಾಣಿಗಳ ಕಾದಾಟದ ಕೆಲವು ವೀಡಿಯೊಗಳನ್ನು ನಂಬಲು ಕಷ್ಟ. ಇತ್ತೀಚಿನ ದಿನಗಳಲ್ಲಿ ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಪ್ಪು ಪ್ಯಾಂಥರ್ ಚಿರತೆಯನ್ನು ಬೇಟೆಯಾಡಲು ಮರವನ್ನು ಏರಿದೆ.

Written by - Ranjitha R K | Last Updated : Mar 28, 2022, 05:02 PM IST
  • ಚಿರತೆ ಮೇಲೆ ದಾಳಿ ಮಾಡಲು ಹೊರಟ ಕರಿ ಚಿರತೆ
  • ಸರ ಸರನೆ ಮರ ಹತ್ತಿ ಬಂದ ಕರಿ ಚಿರತೆ
  • ಚಿರತೆ ಮುಂದೆ ಬರುತ್ತಿದಂತೆಯೇ ಬಾಲ ಮುದುರಿಕೊಂಡ ಕರಿ ಚಿರತೆ
Viral video : ಚಿರತೆ ಶಿಕಾರಿಗೆಂದು ಮರವೇರಿದ ಕರಿ ಚಿರತೆ, ಮರದ ತುತ್ತ ತುದಿಯಲ್ಲಿ ಇಬ್ಬರ ನಡುವೆ ನಡೆದಿದ್ದೇನು ?  title=
ಚಿರತೆ ಮೇಲೆ ದಾಳಿ ಮಾಡಲು ಹೊರಟ ಕರಿ ಚಿರತೆ (photo twitter)

Black Panther And Leopard Video: ಸಾಮಾಜಿಕ ಜಾಲತಾಣಗಳಲ್ಲಿ ಕಾಡು ಪ್ರಾಣಿಗಳ ಕಾದಾಟದ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ಇವುಗಳಲ್ಲಿ ಕೆಲವು ವೀಡಿಯೋಗಳು ಅತ್ಯಂತ ಭಯಾನಕವಾಗಿರುತ್ತವೆ (Animal video).   ಇವುಗಳನ್ನು ವೀಕ್ಷಿಸುತ್ತಿದ್ದರೆ ಎದೆ ಝಲ್ಲೆನ್ನುತ್ತದೆ. ಕೆಲವೊಮ್ಮೆ ಪ್ರಾಣಿಗಳು ಹೀಗೂ  ಕಾದಾಡುತ್ತವೆಯಾ ಎಂಬ ಸಂದೇಹವು ಮೂಡುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ (Viarl Video).

ಚಿರತೆಯ ಮೇಲೆ ದಾಳಿ ಮಾಡಲು ಮರವೇರಿದ ಕರಿ ಚಿರತೆ : 
ಚಿರತೆಯನ್ನು ಬೇಟೆಯಾಡುವ ಸಲುವಾಗಿ ಇಲ್ಲಿ ಕರಿ ಚಿರತೆ (Balck Panther ) ಅದೆಷ್ಟು ವೇಗವಾಗಿ ಮರ ಏರುತ್ತದೆ ಎಂದರೆ ನೋಡುಗರು ನಿಬ್ಬೆರಗಾಗಬೇಕು. ಅದೇನೋ ಸಿಟ್ಟಿನಲ್ಲಿ ಓಡೋಡಿ ಬಂದ ಕರಿಚಿರತೆ ಸರಸರನೆ ಮರವೇರಿ ಬಿಡುತ್ತದೆ. ಮರ ಏರುವ ಹೊತ್ತಿಗೂ ಅದು ಘರ್ಜಿಸುವ ಸದ್ದು ಕೇಳಿದರೆ ಅದೆಷ್ಟು ಕೋಪದಲ್ಲಿದೆ ಎನ್ನುವುದನ್ನು ಅಂದಾಜಿಸಿಕೊಳ್ಳಬಹುದು (Animal Viral Video).  

ಇದನ್ನೂ ಓದಿ :  Amazing Theft Video: ಚಲಿಸುತ್ತಿರುವ ವಾಹನದಲ್ಲಿ ಕೈಚಳಕ ತೋರಿಸಿದ ಕಳ್ಳ, Video ನೋಡಿ

ಮರವನ್ನು ವೇಗವಾಗಿ ಏರುವ ಮೂಲಕ ಕರಿ ಚಿರತೆ, ಚಿರತೆ ಇದ್ದ ಜಾಗವನ್ನು ತಲುಪುತ್ತದೆ. ಮರದ ತುತ್ತ ತುದಿಯಲ್ಲಿ ಚಿರತೆ ಮತ್ತು ಕರಿ ಚಿರತೆ ಮುಖಾ ಮುಖಿಯಾಗಿ ಬಿಡುತ್ತವೆ. ಇಲ್ಲಿ ಕರಿ ಚಿರತೆ, ಚಿರತೆ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ಆದರೆ, ಚಿರತೆ ಒಮ್ಮೆಲೇ ಘರ್ಜಿಸಿ ಬಿಡುತ್ತದೆ, ಚಿರತೆಯ ಒಂದೇ ಘರ್ಜನೆಗೆ ಕರಿ ಚಿರತೆ ತನ್ನ ಹೆಜ್ಜೆ ಹಿಂದೆ ಸರಿಸಿ ಬಿಡುತ್ತದೆ (Viral video).  ಅದೆಷ್ಟು ವೇಗವಾಗಿ ಮರವೆರಿತ್ತೋ ಅಷ್ಟೇ ವೇಗವಾಗಿ ಮರದಿಂದ ಕೆಳಗಿಳಿದು ಬರುತ್ತದೆ ಕರಿ ಚಿರತೆ.

 

@GuptaIfs ಹೆಸರಿನ ಟ್ವಿಟರ್ ಖಾತೆಯಲ್ಲಿ ಈ  ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ 18 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ನೋಡಿದ್ದಾರೆ. 

ಇದನ್ನೂ ಓದಿ : Watch Video: ರೈಲು ಪ್ರಯಾಣಿಕನ ಪಾಲಿಗೆ ಆಪತ್ಬಾಂಧವನಾಗಿ ಬಂದ ಪೊಲೀಸಪ್ಪ..!

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News