ಭಗವಾನ್‌ ಶ್ರೀರಾಮ ʼಮಾಂಸಾಹಾರಿʼ, ಅವನು ಬೇಟೆಯಾಡಿ ಮಾಂಸ ತಿನ್ನುತ್ತಿದ್ದ

NCP leader Jitendra Awhad : "ರಾಮ ನಮ್ಮವನು, ಅವನು ಬಹುಜನ. ರಾಮನು ಬೇಟೆಯಾಡಿ ತಿನ್ನುತ್ತಿದ್ದ. ನಾವು ಸಸ್ಯಾಹಾರಿಗಳಾಗಬೇಕೆಂದು ನೀವು ಬಯಸುತ್ತೀರಿ, ಆದರೆ ನಾವು ಅವನನ್ನು ನಮ್ಮ ಆದರ್ಶವೆಂದು ಪರಿಗಣಿಸುತ್ತೇವೆ, ಕುರಿ ತಿನ್ನುತ್ತೇವೆ. ರಾಮ ಸಸ್ಯಾಹಾರಿಯಾಗಿರಲಿಲ್ಲ ಮಾಂಸಾಹಾರಿಯಾಗಿದ್ದ," ಅಂತ ಅವ್ಹಾದ್ ಹೇಳಿಕೆ ನೀಡಿದ್ದಾರೆ. 

Written by - Krishna N K | Last Updated : Jan 4, 2024, 05:02 PM IST
  • ಭಗವಾನ್ ಶ್ರೀರಾಮನು 'ಮಾಂಸಾಹಾರಿ'
  • ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಹೇಳಿಕೆ
  • ತೀವ್ರ ಪ್ರತಿಕ್ರಿಯೆ ಹುಟ್ಟುಹಾಕಿದ ಅವ್ಹಾದ್ ಭಾಷಣ
ಭಗವಾನ್‌ ಶ್ರೀರಾಮ ʼಮಾಂಸಾಹಾರಿʼ, ಅವನು ಬೇಟೆಯಾಡಿ ಮಾಂಸ ತಿನ್ನುತ್ತಿದ್ದ title=

Lord rama non vegetarian : ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಜಿತೇಂದ್ರ ಅವ್ಹಾದ್ ಅವರು ಭಗವಾನ್ ಶ್ರೀರಾಮನು 'ಮಾಂಸಾಹಾರಿ' ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.  ಜಿತೇಂದ್ರ ಅವರ ಭಾಷಣದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದು, ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅವ್ಹಾದ್ ಅವರ ಹೇಳಿಕೆಗಳಿಗೆ ಬಿಜೆಪಿ ಪಾಳಯ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ರಾಮನ ವಿರುದ್ಧ ಆಕ್ಷೇಪಾರ್ಹ ಟೀಕೆ ಮಾಡಿದ್ದಕ್ಕಾಗಿ ದೂರು ದಾಖಲಿಸಿದೆ.

"ರಾಮ ನಮ್ಮವನು, ಅವನು ಬಹುಜನ. ರಾಮನು ಬೇಟೆಯಾಡಿ ತಿನ್ನುತ್ತಿದ್ದ. ನಾವು ಸಸ್ಯಾಹಾರಿಗಳಾಗಬೇಕೆಂದು ನೀವು ಬಯಸುತ್ತೀರಿ, ಆದರೆ ನಾವು ಅವನನ್ನು ನಮ್ಮ ಆದರ್ಶವೆಂದು ಪರಿಗಣಿಸುತ್ತೇವೆ, ಕುರಿ ತಿನ್ನುತ್ತೇವೆ. ರಾಮ ಸಸ್ಯಾಹಾರಿಯಾಗಿರಲಿಲ್ಲ ಮಾಂಸಾಹಾರಿಯಾಗಿದ್ದ," ಅಂತ ಅವ್ಹಾದ್ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ: ಕುದುರೆ ಹತ್ತಿ ಫುಡ್‌ ಡೆಲಿವರಿಗೆ ಹೊರಟ ಝೊಮಾಟೋ ಡೆಲಿವರಿ ಬಾಯ್...

ಅಲ್ಲದೆ, ಜಿತೇಂದ್ರ ಅವ್ಹಾದ್, ಕ್ಷತ್ರಿಯನಾದ ಭಗವಾನ್ ರಾಮನು ಏನು ತಿನ್ನುತ್ತಿದ್ದನು ಅಂತ ಪ್ರಶ್ನೆ ಮಾಡಿದ್ದಾರೆ. ಕ್ಷತ್ರಿಯರು ಸಾಂಪ್ರದಾಯಿಕವಾಗಿ ಮಾಂಸಾಹಾರಿಗಳು ಎಂದು ಸೂಚಿಸುತ್ತದೆ. ಭಾರತವನ್ನು ಸಸ್ಯಾಹಾರಿ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಅವದ್ ಹೇಳಿದ್ದಾರೆ. ದೇಶದ ಜನಸಂಖ್ಯೆಯ ಶೇಕಡಾ 80 ರಷ್ಟು ಜನರು ಮಾಂಸಾಹಾರಿಗಳಾಗಿದ್ದು, ಅವರು ಶ್ರೀರಾಮನ ಭಕ್ತರು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ರಾಮ ಏನು ತಿನ್ನುತ್ತಿದ್ದ..? ಅಂದ್ರೆ ಕೆಲವು ರಾಮನು ಮೇತಿ-ಭಜಿ (ಮೆಂತ್ಯ ಸೊಪ್ಪಿನ ಆಹಾರ ಪದಾರ್ಥ) ತಿನ್ನುತ್ತಿದ್ದ ಎಂದು ಹೇಳುತ್ತಾರೆ, ಭಗವಾನ್ ರಾಮನು ಕ್ಷತ್ರಿಯ, ಕ್ಷತ್ರಿಯರು ಮಾಂಸಾಹಾರಿಗಳು. ನನ್ನ ಹೇಳಿಕೆ ಹಿಂದ ನಾನು ಹಿಂದೆ ಸರಿಯುವುದಿಲ್ಲ, ಭಾರತದ ಜನಸಂಖ್ಯೆಯಲ್ಲಿ 80% ಮಾಂಸಾಹಾರಿಗಳು, ಅಲ್ಲದೆ ಅವರು ಶ್ರೀರಾಮನ ಭಕ್ತರು ಎಂದು ಜಿತೇಂದ್ರ ಅವದ್ ಹೇಳಿದರು.

ಇದನ್ನೂ ಓದಿ:ರಾಮಮಂದಿರ ಲೋಕಾರ್ಪಣೆ ದಿನ ಅಯೋಧ್ಯೆಯಲ್ಲಿ ಬಿಗಿ ಭದ್ರತೆ: ಎಲ್ಲಿಲ್ಲೆ ಹೇಗಿರಲಿದೆ ಗೊತ್ತಾ ಸೆಕ್ಯೂರಿಟಿ?

"14 ವರ್ಷಗಳಿಂದ ಕಾಡಿನಲ್ಲಿ ವಾಸಿಸುವ ವ್ಯಕ್ತಿಯು ಸಸ್ಯಾಹಾರ ಆಹಾರವನ್ನು ಹುಡುಕಲು ಎಲ್ಲಿಗೆ ಹೋಗುತ್ತಾನೆ? ಸರಿಯೋ ತಪ್ಪೋ? ನಾನು ಯಾವಾಗಲೂ ಸರಿಯಾದದ್ದನ್ನೇ ಹೇಳುತ್ತೇನೆ" ಎಂದು ಅವದ್ ತಮ್ಮ ಹೇಳಿಕೆಯನ್ನು ಸರ್ಮರ್ಥಿಸಿಕೊಂಡರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News