ಭೋಪಾಲ್: ಪುಲ್ವಾಮದಲ್ಲಿ ಗುರುವಾರ ನಡೆದ ಉಗ್ರರ ಭೀಕರ ದಾಳಿಯಲ್ಲಿ ಹುತಾತ್ಮನಾದ ಮಧ್ಯಪ್ರದೇಶ ಮೂಲದ ಯೋಧನ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರ ಒಂದು ಕೋಟಿ ರೂ. ಪರಿಹಾರ ಘೋಷಿಸಿದೆ.
ಮಧ್ಯಪ್ರದೇಶದ ಕೋಹ್ವಾಲ್ ಶಿರೋರಾ ಎಂಬ ಗ್ರಾಮದವರಾದ ಯೋಧ ಅಶ್ವನಿ ಕುಮಾರ್ ಅವರು ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದು, ಮೃತರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಧನ ಘೋಷಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್, ಮೃತ ಯೋಧನ ಕುಟುಂಬಕ್ಕೆ ಆರ್ಥಿಕ ನೆರವಿನೊಂದಿಗೆ, ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡುವುದಾಗಿಯೂ ಘೋಷಿಸಿದ್ದಾರೆ.
शहादत को नमन..!
पुलवामा आतंकी हमले में शहीद मप्र के जबलपुर के सपूत अश्विनी कुमार काछी की शहादत को नमन करता हूं।
मप्र सरकार द्वारा शहीद के परिवार को 1 करोड़ रुपये, एक आवास एवं परिवार के 1 सदस्य को शासकीय नौकरी दी जाएगी।
—दुख की इस घड़ी में हम शहीद परिवार के साथ हैं।
— Office Of Kamal Nath (@OfficeOfKNath) February 15, 2019