'ನೈತಿಕ ಸಮಿತಿ ಸಭೆಯಲ್ಲಿ ನನ್ನ ವಸ್ತ್ರಾಪಹರಣ ನಡೆಸಲಾಗಿದೆ' ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದ ಮಹಿಳಾ ಸಂಸದೆ!

Mahua Moitra Letter To Om Birla: ಪ್ರಶ್ನೆ ಕೇಳಲು ಹಣ ಪಡೆದ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. Political News In Kannada  

Written by - Nitin Tabib | Last Updated : Nov 2, 2023, 10:09 PM IST
  • ಮೊಯಿತ್ರಾ ಅವರ ಆರೋಪ ಮತ್ತು ವಿರೋಧ ಪಕ್ಷದ ಸಂಸದರ ಸಭಾತ್ಯಾಗದ ನಂತರ
  • ವಿನೋದ್ ಸೋಂಕರ್ ಅವರು ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ್ದು.
  • ‘ಉತ್ತರ ನೀಡುವ ಬದಲು ಮಹುವಾ ಮೊಯಿತ್ರಾ ಸಿಟ್ಟಿನಿಂದ ಅಸಂಸದೀಯ ಭಾಷೆ ಬಳಸಿದ್ದಾರೆ’ ಎಂದು ಮರು ಆರೋಪಿಸಿದ್ದಾರೆ.
'ನೈತಿಕ ಸಮಿತಿ ಸಭೆಯಲ್ಲಿ ನನ್ನ ವಸ್ತ್ರಾಪಹರಣ ನಡೆಸಲಾಗಿದೆ' ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದ ಮಹಿಳಾ ಸಂಸದೆ! title=

ನವದೆಹಲಿ: ಪ್ರಶ್ನೆ ಕೇಳಲು ಹಣ ಪಡೆದ ಆರೋಪದ ವಿಚಾರ ಮುಂದುವರೆದಿದೆ. ಈ ನಡುವೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ಅವರು ನೈತಿಕ ಸಮಿತಿಯ ಮುಂದೆ ಹಾಜರಾದ ಸಂದರ್ಭದಲ್ಲಿ ತಮ್ಮ ವಸ್ತ್ರಾಪಹರಣ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಸಮಿತಿ ಸಭೆಯಲ್ಲಿ ಅನೈತಿಕ ಮತ್ತು ಅಸಭ್ಯ ವರ್ತನೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. Political News In Kannada

ಸಮಿತಿ ಅಧ್ಯಕ್ಷ, ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ಅವರು ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಬದಲು ದುರುದ್ದೇಶಪೂರಿತ ಮತ್ತು ಅವಮಾನಕರ ರೀತಿಯಲ್ಲಿ ಪ್ರಶ್ನಿಸುವ ಮೂಲಕ ಪಕ್ಷಪಾತ ತೋರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವಾಸ್ತವದಲ್ಲಿ, ಮಹುವಾ ಮೊಯಿತ್ರಾ ಮತ್ತು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಸೇರಿದಂತೆ ಅನೇಕ ವಿರೋಧ ಪಕ್ಷದ ಸಂಸದರು ಆಕ್ರೋಶಗೊಂದು ನೈತಿಕ ಸಮಿತಿ ಸಭೆಯಿಂದ ಹೊರನಡೆದಿದ್ದಾರೆ. ಈ ವೇಳೆ ಡ್ಯಾನಿಶ್ ಅಲಿ ಸಭೆಯಲ್ಲಿ ವಸ್ತ್ರಾಪಹರಣ ನಡೆದಿದೆ ಎಂದು ಆರೋಪಿಸಿದ್ದಾರೆ.

ಮಹುವಾ ಮೊಯಿತ್ರಾ ಹೇಳಿದ್ದೇನು?
ಈ ಕುರಿತು ತಮ್ಮ ಪಾತ್ರದಲ್ಲಿ ಬರೆದುಕೊಂಡಿರುವ ಮಹುವಾ, “ನೀತಿ ಸಮಿತಿಯ ವಿಚಾರಣೆಯ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ನನಗೆ ತೋರಿದ ಅನೈತಿಕ, ಅಸಹ್ಯಕರ ಮತ್ತು ಪೂರ್ವಾಗ್ರಹ ಪೀಡಿತ ವರ್ತನೆಯ ಬಗ್ಗೆ ನಿಮಗೆ ತಿಳಿಸಲು ನಾನು ಇಂದು ಬಹಳ ವಿಷಾಧದಿಂದ ನಿಮಗೆ ಪತ್ರ ಬರೆಯುತ್ತಿದ್ದೇನೆ. ಭಾಷಾಂತರ ಬಳಸಿ ಹೇಳುವುದಾದರೆ, ಸಮಿತಿಯ ಎಲ್ಲ ಸದಸ್ಯರ ಸಮ್ಮುಖದಲ್ಲಿ ಅವರು ನನ್ನ ವಸ್ತ್ರಾಪಹರಣ ನಡೆಸಿದ್ದಾರೆ' ಎಂದು ಆರೋಪಿಸಿದ್ದಾರೆ.

ಈ ಕುರಿತು ಮುಂದೆ ಹೇಳಿಕೊಂಡಿರುವ ಅವರು, “ಸಮಿತಿಯಲ್ಲಿ ನೈತಿಕತೆ ಉಳಿದಿಲ್ಲದ ಕಾರಣ ಸಮಿತಿಯನ್ನು ನೈತಿಕ ಸಮಿತಿ ಬದಲಿಗೆ ಬೇರೆ ಯಾವುದನ್ನಾದರೂ ಹೆಸರು ಇಡಬೇಕು ಎಂದಿದ್ದಾರೆ. ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಬದಲು, ಸ್ಪೀಕರ್ ನನ್ನನ್ನು ದುರುದ್ದೇಶಪೂರಿತ ಮತ್ತು ಸ್ಪಷ್ಟವಾಗಿ ಅವಮಾನಿಸುವ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ತನ್ನ ಪೂರ್ವಾಗ್ರಹವನ್ನು ಪ್ರದರ್ಶಿಸಿದ್ದಾರೆ. "ಈ ಸಮಯದಲ್ಲಿ, ಹಾಜರಿದ್ದ 11 ಸದಸ್ಯರಲ್ಲಿ ಐವರು ಅಧ್ಯಕ್ಷರ ನಾಚಿಕೆಗೇಡಿನ ನಡವಳಿಕೆಯನ್ನು ವಿರೋಧಿಸಿ ಹೊರನಡೆದಿದ್ದಾರೆ  ಎಂದು ಹೇಳಿದ್ದಾರೆ"

ಇದನ್ನೂ ಓದಿ-Viral Video: ಸಪ್ತಋಷಿ ಥೀಮ್ ಆಧರಿಸಿ ನಿರ್ಮಾಣಗೊಂಡ ಪಾರ್ಕ್ ನಲ್ಲಿ ಯುವ ಜೋಡಿಯ ಅಶ್ಲೀಲ ಕೃತ್ಯ!

ವಿನೋದ್ ಸೋಂಕರ್ ಹೇಳಿದ್ದೇನು?
ಮೊಯಿತ್ರಾ ಅವರ ಆರೋಪ ಮತ್ತು ವಿರೋಧ ಪಕ್ಷದ ಸಂಸದರ ಸಭಾತ್ಯಾಗದ ನಂತರ ವಿನೋದ್ ಸೋಂಕರ್ ಅವರು ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ್ದು. ‘ಉತ್ತರ ನೀಡುವ ಬದಲು ಮಹುವಾ ಮೊಯಿತ್ರಾ ಸಿಟ್ಟಿನಿಂದ ಅಸಂಸದೀಯ ಭಾಷೆ ಬಳಸಿದ್ದಾರೆ’ ಎಂದು ಮರು ಆರೋಪಿಸಿದ್ದಾರೆ.

ಇದನ್ನೂ ಓದಿ-ಸ್ಪೀಡ್ ಬ್ರೆಕರ್ ಮೇಲೆ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಹಾರಿದ ಇ-ರಿಕ್ಷಾ... ವಿಡಿಯೋ ನೋಡಿ!

ಇಡೀ ಪ್ರಕರಣ ಏನು?
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಮೊಯಿತ್ರಾ ಹಣ ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಇತ್ತೀಚೆಗೆ ಆರೋಪಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು, ಅದಾನಿ ಗ್ರೂಪ್‌ಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಎತ್ತುವ ಮೂಲಕ ಮೊಯಿತ್ರಾ ಪ್ರಧಾನಿ ಮೋದಿಯವರ ಇಮೇಜ್‌ಗೆ ಕಳಂಕ ತರಲು ಯತ್ನಿಸಿದ್ದರು. ಇದಾದ ಬಳಿಕ ದರ್ಶನ್ ಹಿರಾನಂದಾನಿ ಕೂಡ ಮೊಯಿತ್ರಾಗೆ ಹಣ ಮತ್ತು ಉಡುಗೊರೆ ನೀಡಿರುವುದಾಗಿ ಹೇಳಿಕೊಂಡಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News