ನವದೆಹಲಿ: ರಿಲಯನ್ಸ್ ಫೌಂಡೇಶನ್ ಮುಖ್ಯಸ್ಥೆ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕಿ ನೀತಾ ಅಂಬಾನಿ ಶೀಘ್ರದಲ್ಲೇ ಮಹಿಳಾ ಅಧ್ಯಯನ ವಿಚಾರವಾಗಿ ಕಲಿಸಲಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರವು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಲು ಪ್ರಸ್ತಾಪವನ್ನು ಕಳುಹಿಸಿದೆ.ಈ ಪ್ರಸ್ತಾಪಕ್ಕೆ ಅವರು ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ.ಬನಾರಸ್ ನ ಸಾಮಾಜಿಕ ವಿಜ್ಞಾನ ವಿಭಾಗವು ಮಾರ್ಚ್ 12 ರಂದು ಈ ಪ್ರಸ್ತಾಪವನ್ನು ನೀಡಿತ್ತು.ಈ ಪ್ರಸ್ತಾವನೆಯಲ್ಲಿ, ಬನಾರಸ್ ಮತ್ತು ಪೂರ್ವಾಂಚಲ್ ಪ್ರದೇಶದ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸಲು ವಿಶ್ವವಿದ್ಯಾಲಯಕ್ಕೆ ಸೇರಲು ಅವರನ್ನು ಕೋರಲಾಗಿದೆ.
ಇದನ್ನೂ ಓದಿ: ಅಜ್ಜನಾದ ಸಂಭ್ರಮದಲ್ಲಿ ಮುಕೇಶ್ ಅಂಬಾನಿ..!
ನೀತಾ ಅಂಬಾನಿ (Nita Ambani) ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರ ಪತ್ನಿ. ಅವರು ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಕಾಂ ಮಾಡಿದ್ದಾರೆ ಮತ್ತು 2014 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ರಿಲಯನ್ಸ್ ಫೌಂಡೇಶನ್ ನ್ನು 2010 ರಲ್ಲಿ ಪ್ರಾರಂಭಿಸಿದರು.
ಇದನ್ನೂ ಓದಿ: 'ನಾವು ಹುಡುಗಿ ಮನೆಯವರು, ಏನಾದರೂ ಕೊರತೆ ಇದ್ದರೆ...' ಎಂದು ಮುಕೇಶ್ ಅಂಬಾನಿ ಹೇಳಿದಾಗ!
ನೀತಾ ಅಂಬಾನಿ ಮಹಿಳಾ ಉದ್ಯಮಿಯಾದ ಕಾರಣ ಅವರನ್ನು ಮಹಿಳಾ ಅಧ್ಯಯನಕ್ಕಾಗಿ ಸಂದರ್ಶಕ ಪ್ರಾಧ್ಯಾಪಕರಾಗಿ ಬೋಧಿಸಲು ಆಹ್ವಾನಿಸಲಾಗಿದೆ.
ಪ್ರಸ್ತಾವನೆಯ ಪ್ರಕಾರ ರಿಲಯನ್ಸ್ ಫೌಂಡೇಶನ್ ಪೂರ್ವ ಯುಪಿಯಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುತ್ತದೆ. ಉಪನ್ಯಾಸ ನೀಡುವುದರ ಜೊತೆಗೆ ಮಹಿಳೆಯರಿಗೂ ತರಬೇತಿ ನೀಡಲಾಗುವುದು.ಹೊಸ ಶಿಕ್ಷಣ ನೀತಿಯ ಪ್ರಕಾರ, ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಜೋಡಿಸುವುದು ಶಿಕ್ಷಣ ಸಂಸ್ಥೆಗಳ ಉದ್ದೇಶವಾಗಿದೆ, ಇದನ್ನು ನೀತಾ ಅಂಬಾನಿಯ ವ್ಯವಹಾರ ಅನುಭವಗಳ ಮೂಲಕ ಸಾಧಿಸಬಹುದು.”ಎಂದು ಮಹಿಳಾ ಕೇಂದ್ರದ ಸಂಯೋಜಕರಾದ ಪ್ರೊ.ನಿಧಿ ಶರ್ಮಾ ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನದಂದು ನೀತಾ ಅಂಬಾನಿ ಮಹಿಳೆಯರನ್ನು ಸಬಲೀಕರಣಗೊಳಿಸಲು 'ಹರ್ ಸರ್ಕಲ್ 'ಎಂಬ ಅಂತರ್ಜಾಲ ಮಾಧ್ಯಮ ವೇದಿಕೆಯನ್ನು ಪ್ರಾರಂಭಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.