ಮಗನ ನಿಶ್ಚಿತಾರ್ಥ ವೇಳೆ ಕುಟುಂಬದ ಜೊತೆ ಡಾನ್ಸ್‌ ಮಾಡಿದ ಅಂಭಾನಿ..! ವಿಡಿಯೋ ನೋಡಿ

ನಿನ್ನೆ ಮುಖೇಶ್‌ ಅಂಬಾನಿ, ನೀತಾ ಅಂಬಾನಿ ಕಿರಿಯ ಪುತ್ರ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಇದೀಗ ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನೀತಾ ಹಾಗು ಮುಖೇಶ್‌ ಅಂಬಾನಿ ಮಕ್ಕಳು ಹಾಗು ಸೊಸೆಯಂದಿರ ಜೊತೆ ಹೆಜ್ಜೆಹಾಕಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

Written by - Krishna N K | Last Updated : Jan 20, 2023, 02:47 PM IST
  • ನಿನ್ನೆ ಮುಖೇಶ್‌ ಅಂಬಾನಿ, ನೀತಾ ಅಂಬಾನಿ ಕಿರಿಯ ಪುತ್ರನ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ.
  • ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರು ಪರಸ್ಪರ ಉಂಗುರ ಬದಲಾಯಿಸಿಕೊಂಡರು.
  • ವಧು-ವರರನ್ನು ವೇದಿಕೆ ಮೇಲೆ ಕರೆತರಲು ಸ್ವತಃ ಮುಖೇಶ್‌ ಅಂಬಾನಿ ಹಾಗೂ ನಿತಾ ಅಂಬಾನಿ ನೃತ್ಯ ಮಾಡಿದರು.
ಮಗನ ನಿಶ್ಚಿತಾರ್ಥ ವೇಳೆ ಕುಟುಂಬದ ಜೊತೆ ಡಾನ್ಸ್‌ ಮಾಡಿದ ಅಂಭಾನಿ..! ವಿಡಿಯೋ ನೋಡಿ title=

Nita Mukesh Ambani dance : ನಿನ್ನೆ ಮುಖೇಶ್‌ ಅಂಬಾನಿ, ನೀತಾ ಅಂಬಾನಿ ಕಿರಿಯ ಪುತ್ರ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಇದೀಗ ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನೀತಾ ಹಾಗು ಮುಖೇಶ್‌ ಅಂಬಾನಿ ಮಕ್ಕಳು ಹಾಗು ಸೊಸೆಯಂದಿರ ಜೊತೆ ಹೆಜ್ಜೆಹಾಕಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಗುರುವಾರ ಎನ್ಕೋರ್ ಹೆಲ್ತ್‌ಕೇರ್ ಸಿಇಒ ವೀರೆನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಅಂಬಾನಿ ಮುಂಬೈ ನಿವಾಸ ಆಂಟಿಲಿಯಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ರಾಧಿಕಾ ಮರ್ಚೆಂಟ್ ಚಿನ್ನದಿಂದ ಅಲಂಕರಿಸಿದ ಲೆಹೆಂಗಾವನ್ನು ಧರಿಸಿದ್ದರು. ಈ ಹಿಂದೆ ಅವರು ಮೆಹೆಂದಿ ಸಮಾರಂಭಕ್ಕಾಗಿ ಫ್ಯೂಶಿಯಾ-ಪಿಂಕ್ ಖೋಸ್ಲಾ ಲೆಹೆಂಗಾವನ್ನು ಧರಿಸಿದ್ದರು. ಅನಂತ್ ಅಂಬಾನಿ ನೇವಿ ಬ್ಲೂ ಕುರ್ತಾ-ಪೈಜಾಮ ಸೆಟ್ ಧರಿಸಿದ್ದರು.

ಇದನ್ನೂ ಓದಿ: Rishab Shetty : ರಿಷಬ್‌ ಶೆಟ್ಟಿ ಪಂಜುರ್ಲಿ ದೈವದ ಹರಕೆ ತೀರಿಸಿದ ಕ್ಷಣ.! ಮೈನವಿರೇಳಿಸುವ ವಿಡಿಯೋ ನೋಡಿ

ಮದುವೆಯ ಪೂರ್ವ ಸಮಾರಂಭ ʼಗೋಲ್ ಧನʼ ಮತ್ತು 'ಚುನರಿ ವಿಧಿ' ಯನ್ನು ಕುಟುಂಬ ದೇವಸ್ಥಾನದಲ್ಲಿ ನಡೆಸಿತು. ನಂತರ ದಂಪತಿಗಳು ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಂಡರು. ಈ ವೇಳೆ ವಧು-ವರರನ್ನು ವೇದಿಕೆ ಮೇಲೆ ಕರೆತರಲು ಸ್ವತಃ ಮಕ್ಕಳು ಹಾಗೂ ಅಳಿಯ, ಸೊಸೆಯಂದಿರ ಜೊತೆ ಮುಖೇಶ್‌ ಅಂಬಾನಿ ಹಾಗೂ ನಿತಾ ಅಂಬಾನಿ ನೃತ್ಯ ಮಾಡಿದರು. ಈ ವೇಳೆ ಅಮ್ಮ ಅಪ್ಪನ ಡಾನ್ಸ್‌ ನೋಡಿ ಅನಂತ್‌ ಫುಲ್‌ ಖುಷಿಯಾಗಿದ್ದರು. ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕಳೆದ ತಿಂಗಳು ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನದಲ್ಲಿ ದಂಪತಿಗಳ 'ರೋಕಾ' ಸಮಾರಂಭ ನಡೆದಿತ್ತು. ಅನಂತ್ ಅಂಬಾನಿ ಯುನೈಟೆಡ್ ಸ್ಟೇಟ್ಸ್ನ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ್ದಾರೆ. ರಾಧಿಕಾ ಮರ್ಚೆಂಟ್ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಮುಗಿಸಿದ್ದಾರೆ. ಪ್ರಸ್ತುತ ಅವರು ಬೋರ್ಡ್ ಆಫ್ ಎನ್ಕೋರ್ ಹೆಲ್ತ್‌ಕೇರ್‌ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಧಿಕಾ ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು.

 

 

Trending News