Railways: ದೇಶದಲ್ಲಿ ಎಲ್ಲಾ ಪ್ರಯಾಣಿಕ ರೈಲುಗಳನ್ನ ಮರು ಪ್ರಾರಂಭ ಮಾಡಿಲ್ಲ- ರೈಲ್ವೆ ಇಲಾಖೆ ಸ್ಪಷ್ಟ

ಭಾರತೀಯ ರೈಲ್ವೆ ಇಲಾಖೆಯು ಏಪ್ರಿಲ್​ನಿಂದ ದೇಶದಲ್ಲಿ ಎಲ್ಲಾ ರೈಲುಗಳ ಪ್ರಯಾಣವನ್ನ ಪುನಾರಂಭಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದ ಬೆನ್ನಲ್ಲೇ ಈ ಸ್ಪಷ್ಟನೆ

Last Updated : Feb 13, 2021, 05:34 PM IST
  • ದೇಶದಲ್ಲಿ ಎಲ್ಲಾ ಪ್ರಯಾಣಿಕ ರೈಲುಗಳನ್ನ ಮರು ಪ್ರಾರಂಭ ಮಾಡುವ ಬಗ್ಗೆ ಇಲ್ಲಿಯವರೆಗೆ ಯಾವುದೇ ದಿನಾಂಕವನ್ನ ನಿಗದಿ ಪಡಿಸಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆ ಸ್ಪಷ್ಟ
  • ಭಾರತೀಯ ರೈಲ್ವೆ ಇಲಾಖೆಯು ಏಪ್ರಿಲ್​ನಿಂದ ದೇಶದಲ್ಲಿ ಎಲ್ಲಾ ರೈಲುಗಳ ಪ್ರಯಾಣವನ್ನ ಪುನಾರಂಭಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದ ಬೆನ್ನಲ್ಲೇ ಈ ಸ್ಪಷ್ಟನೆ
  • ಎಲ್ಲಾ ಪ್ರಯಾಣಿಕ ರೈಲುಗಳನ್ನ ಪುನಾರಂಭ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ದಿಷ್ಟ ದಿನಾಂಕವನ್ನ ನಿಗದಿ ಮಾಡಲಾಗಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ
Railways: ದೇಶದಲ್ಲಿ ಎಲ್ಲಾ ಪ್ರಯಾಣಿಕ ರೈಲುಗಳನ್ನ ಮರು ಪ್ರಾರಂಭ ಮಾಡಿಲ್ಲ- ರೈಲ್ವೆ ಇಲಾಖೆ ಸ್ಪಷ್ಟ title=

ನವದೆಹಲಿ: ದೇಶದಲ್ಲಿ ಎಲ್ಲಾ ಪ್ರಯಾಣಿಕ ರೈಲುಗಳನ್ನ ಮರು ಪ್ರಾರಂಭ ಮಾಡುವ ಬಗ್ಗೆ ಇಲ್ಲಿಯವರೆಗೆ ಯಾವುದೇ ದಿನಾಂಕವನ್ನ ನಿಗದಿ ಪಡಿಸಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆ ಸ್ಪಷ್ಟ ಮಾಹಿತಿ ನೀಡಿದೆ. ಭಾರತೀಯ ರೈಲ್ವೆ ಇಲಾಖೆಯು ಏಪ್ರಿಲ್​ನಿಂದ ದೇಶದಲ್ಲಿ ಎಲ್ಲಾ ರೈಲುಗಳ ಪ್ರಯಾಣವನ್ನ ಪುನಾರಂಭಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದ ಬೆನ್ನಲ್ಲೇ ಈ ಸ್ಪಷ್ಟನೆಯನ್ನ ನೀಡಿದೆ.

ಕೊರೊನಾದಿಂದ ರಾಷ್ಟ್ರೀಯ ಲಾಕ್​ಡೌನ್​​ ಜಾರಿಯಾದ ಬಳಿಕ ಮಾರ್ಚ್​ನಿಂದ ಪ್ರಯಾಣಿಕರ ರೈಲು(Passenger Train)ಗಳನ್ನ ಬಂದ್​ ಮಾಡಲಾಗಿತ್ತು. ಈಗೀಗ ಒಂದೊಂದೆ ರೈಲುಗಳ ಪ್ರಯಾಣಕ್ಕೆ ಭಾರತೀಯ ರೈಲು ಇಲಾಖೆ ಹಸಿರು ನಿಶಾನೆ ತೋರುತ್ತಿದೆ.

Modi Government ಈ ಯೋಜನೆಯಿಂದ ರೈತರಿಗೆ ಸಿಗಲಿದೆ ಈ ಸೌಲಭ್ಯ

ಏಪ್ರಿಲ್​ ತಿಂಗಳ ನಿರ್ದಿಷ್ಟ ದಿನಾಂಕದಿಂದ ಪೂರ್ಣ ಪ್ರಮಾಣದಲ್ಲಿ ರೈಲು(Railways) ಸೇವೆಗಳನ್ನ ದೇಶದಲ್ಲಿ ಪುನಾರಂಭಿಸುವ ಬಗ್ಗೆ ಮಾಧ್ಯಮಗಳಲ್ಲಿ ಹಲವಾರು ವರದಿ ಬಂದಿದೆ. ಹೀಗಾಗಿ ಈ ಸ್ಪಷ್ಟನೆಯನ್ನ ನೀಡುತ್ತಿದ್ದೇವೆ. ಎಲ್ಲಾ ಪ್ರಯಾಣಿಕ ರೈಲುಗಳನ್ನ ಪುನಾರಂಭ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ದಿಷ್ಟ ದಿನಾಂಕವನ್ನ ನಿಗದಿ ಮಾಡಲಾಗಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Motor Insurance ಕುರಿತು ಮಹತ್ವದ ಸುದ್ದಿ ಪ್ರಕಟ!

ರೈಲು ಸೇವೆಯನ್ನ ಕ್ರಮೇಣವಾಗಿ ಹೆಚ್ಚಿಸಲಾಗುತ್ತಿದೆ. ಈಗಾಗಲೇ 65 ಪ್ರತಿಶತಕ್ಕೂ ಹೆಚ್ಚು ರೈಲುಗಳು ಓಡಾಡುತ್ತಿವೆ. ಜನವರಿ ತಿಂಗಳಲ್ಲೇ 250ಕ್ಕೂ ಅಧಿಕ ರೈಲುಗಳನ್ನ ಸೇರಿಸಲಾಗಿದೆ. ಕ್ರಮೇಣವಾಗಿ ರೈಲು ಸೇವೆಯನ್ನ ಹೆಚ್ಚಿಸಲಾಗುವುದು. ರೈಲು ಸೇವೆ ಕುರಿತಂತೆ ಪ್ರಕಟಣೆ ಮೂಲಕ ವರದಿ ನೀಡಲಾಗುತ್ತದೆ. ಅಲ್ಲಿಯವರೆಗೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡದಿರಿ ಎಂದು ಭಾರತೀಯ ರೈಲ್ವೆ ಇಲಾಖೆ ಮನವಿ ಮಾಡಿದೆ.

Senior Citizen: ಕೇಂದ್ರ ಸರ್ಕಾರದಿಂದ 75 ವರ್ಷ ಮೇಲ್ಪಟ್ಟವರಿಗೆ ಬಿಗ್ ಶಾಕ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News