ನವದೆಹಲಿ: ಕಾಂಗ್ರೆಸ್ ಪಕ್ಷ ಈಗ ತನ್ನ ಸೋಶಿಯಲ್ ಮೀಡಿಯಾ ಮುಖ್ಯಸ್ಥರನ್ನಾಗಿ ರೋಹನ್ ಗುಪ್ತಾರನ್ನು ನೇಮಕ ಮಾಡಿದೆ.
ಈ ಹಿಂದೆ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥರಾಗಿ ಗಮನ ಸೆಳೆದಿದ್ದ ರಮ್ಯಾಗೆ ಪಕ್ಷ ಕೊಕ್ ನೀಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹರಿತ ಟ್ವೀಟ್ ಮೂಲಕ ಗಮನ ಸೆಳೆದಿದ್ದ ರಮ್ಯಾ ಇತ್ತೀಚಿನ ದಿನಗಳಲ್ಲಿ ಹೊರಗಡೆ ಕಾಣಿಸಿಕೊಂಡಿಲ್ಲ, ಈಗ ಅವರ ಟ್ವಿಟ್ಟರ್ ಖಾತೆ ಕೂಡ ಚಾಲ್ತಿಯಲ್ಲಿ ಇಲ್ಲ.
INC COMMINIQUE
Appointment of Shri. Rohan Gupta as Chairman of Social Media Department, AICC with immediate effect. pic.twitter.com/SwHN9efvi9
— INC Sandesh (@INCSandesh) September 28, 2019
ಈ ಹಿನ್ನಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ರಮ್ಯಾ ಅವರು ಕ್ರಿಯಾಶೀಲವಾಗಿ ಕಾಣಿಸಿಕೊಳ್ಳದ ಹಿನ್ನಲೆಯಲ್ಲಿ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗವನ್ನು ನಿರ್ವಹಿಸುವ ವ್ಯಕ್ತಿಯೊಬ್ಬರ ಅಗತ್ಯವಿತ್ತು, ಆದ್ದರಿಂದ ಈಗ ಕಾಂಗ್ರೆಸ್ ಪಕ್ಷ ರೋಹನ್ ಗುಪ್ತಾ ಅವರಿಗೆ ಮಣೆ ಹಾಕಿದೆ.
ಮೂಲತಃ ಗುಜರಾತಿನವರಾದ ರೋಹನ್ ಗುಪ್ತಾ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮದ ಜವಾದ್ಬಾರಿಯನ್ನು ಹೊತ್ತು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಹಿನ್ನಲೆಯಲ್ಲಿ ಅವರ ಈ ಅನುಭವಕ್ಕೆ ಮನ್ನಣೆ ನೀಡಿ ಕಾಂಗ್ರೆಸ್ ಅವರನ್ನು ಪಕ್ಷದ ಸೋಶಿಯಲ್ ಮೀಡಿಯಾದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.