ನವದೆಹಲಿ: ಬಿಹಾರ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವವರಿಗೆ ತನ್ನ ಪ್ರಣಾಳಿಕೆಯ ಮೂಲಕ ಉಚಿತ ಕೋವಿಡ್ -19 ಲಸಿಕೆ ನೀಡುವ ಭರವಸೆ ನೀಡಿದ್ದಕ್ಕಾಗಿ ಶಿವಸೇನೆ ಮುಖಂಡ ಸಂಜಯ್ ರೌತ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಇದು ಪಕ್ಷದ ತಾರತಮ್ಯದ ಸ್ವರೂಪವನ್ನು ತೋರಿಸುತ್ತದೆ ಎಂದು ಹೇಳಿದರು.
'ಈ ಹಿಂದೆ ನೀವು ನನಗೆ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ ಎನ್ನುತ್ತಿದ್ದರು, ಆದರೆ ಈಗ ನಮಗೆ ಮತ ನೀಡಿ, ನಾವು ನಿಮಗೆ ಲಸಿಕೆ ನೀಡುತ್ತೇವೆ ಎನ್ನುವಂತಾಗಿದೆ. ಬಿಜೆಪಿಗೆ ಮತ ಹಾಕುವವರಿಗೆ ಮಾತ್ರ ಲಸಿಕೆ ಸಿಗುತ್ತದೆ, ಇದು ಬಿಜೆಪಿಯ ತಾರತಮ್ಯದ ಸ್ವರೂಪವನ್ನು ತೋರಿಸುತ್ತದೆ 'ಎಂದು ಬಿಹಾರದ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಭರವಸೆಯ ಕುರಿತು ಸಂಜಯ್ ರೌತ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಕೊರೊನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ 'ಧಮ್ ನಿಮಗಿದೆಯೇ ಕಟೀಲ್ ಅವರೇ?-ಸಿದ್ಧು
'ಈ ರೀತಿಯ ಹೇಳಿಕೆ ಪ್ರಧಾನಿ ನರೇಂದ್ರ ಮೋದಿಗೆ ಅವಮಾನವನ್ನು ತರುತ್ತಿದೆ.ದೇಶವನ್ನು ವಿಭಜಿಸಲು ಸಿದ್ಧತೆಗಳು ನಡೆಯುತ್ತಿವೆಯೇ? ಈ ಮೊದಲು ಅವರು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದ್ದರು, ಮತ್ತು ಈಗ ಲಸಿಕೆ ಹೆಸರಿನಲ್ಲಿ ಅದೇ ನಡೆಯುತ್ತಿದೆ'ಎಂದು ರೌತ್ ವಾಗ್ದಾಳಿ ನಡೆಸಿದರು.
ಭಾರತೀಯ ಜನತಾ ಪಕ್ಷ (ಬಿಜೆಪಿ) ಗುರುವಾರ ಮೂರು ಹಂತದ ಬಿಹಾರ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು ಮತ್ತು ಐಸಿಎಂಆರ್‌ನಿಂದ ಕರೋನವೈರಸ್ ಲಸಿಕೆ ಅನುಮೋದನೆ ಪಡೆದ ನಂತರ ಬಿಹಾರದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತು.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಕೊರೋನಾ ನೆಪದಲ್ಲಿ ರಾಜ್ಯ ಬಿಜೆಪಿ ಸರ್ಕಾರದಿಂದ 10 ಸಾವಿರ ಕೋಟಿ ರೂ ಹಗರಣ- ಆಮ್ ಆದ್ಮಿ ಪಕ್ಷ
ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ನಡೆಯಲಿದ್ದು, ಮತ ಎಣಿಕೆ ನವೆಂಬರ್ 10 ರಂದು ನಡೆಯಲಿದೆ.