SCO ಸಭೆಯಲ್ಲಿ ಭಾರತದ ತಪ್ಪಾದ ನಕ್ಷೆ ತೋರಿಸಿದ ಪಾಕಿಸ್ತಾನಕ್ಕೆ ರಷ್ಯಾದ ಎಚ್ಚರಿಕೆ

ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸದಸ್ಯರ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮಂಗಳವಾರ ರಷ್ಯಾದಲ್ಲಿ ಭೇಟಿಯಾದರು. ಈ ಸಭೆಯಲ್ಲಿ ಪಾಕಿಸ್ತಾನ ತನ್ನ ಹೊಸ ನಕ್ಷೆಯನ್ನು ಪ್ರಸ್ತುತಪಡಿಸಿತು, ಇದನ್ನು ಭಾರತವು ಕಾಲ್ಪನಿಕ ಎಂದು ಕರೆಯಿತು. ಪಾಕಿಸ್ತಾನ ಸರ್ಕಾರ ಇತ್ತೀಚೆಗೆ ಈ ನಕ್ಷೆಯನ್ನು ಅನುಮೋದಿಸಿದೆ. ಭಾರತದ ಎನ್‌ಎಸ್‌ಎ ಅಜಿತ್ ದೋವಲ್ ಇದನ್ನು ವಿರೋಧಿಸಿ ಸಭೆಯಿಂದ ಹೊರಹೋಗಲು ನಿರ್ಧರಿಸಿದರು.

Last Updated : Sep 16, 2020, 02:45 PM IST
  • ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸದಸ್ಯರ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮಂಗಳವಾರ ರಷ್ಯಾದಲ್ಲಿ ಭೇಟಿಯಾದರು.
  • ಈ ಸಭೆಯಲ್ಲಿ ಪಾಕಿಸ್ತಾನ ತನ್ನ ಹೊಸ ನಕ್ಷೆಯನ್ನು ಪ್ರಸ್ತುತಪಡಿಸಿತು, ಇದನ್ನು ಭಾರತವು ಕಾಲ್ಪನಿಕ ಎಂದು ಕರೆಯಿತು.
  • ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ತನ್ನ ಹೊಸ ನಕ್ಷೆಯನ್ನು ಆಗಸ್ಟ್ ಆರಂಭದಲ್ಲಿ ಬಿಡುಗಡೆ ಮಾಡಿತು.
SCO ಸಭೆಯಲ್ಲಿ ಭಾರತದ ತಪ್ಪಾದ ನಕ್ಷೆ ತೋರಿಸಿದ ಪಾಕಿಸ್ತಾನಕ್ಕೆ ರಷ್ಯಾದ ಎಚ್ಚರಿಕೆ title=

ನವದೆಹಲಿ: ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ತೊಂದರೆ ಅನುಭವಿಸಿದೆ. ವಾಸ್ತವವಾಗಿ ರಷ್ಯಾ (Russia) ದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಭೆಯಲ್ಲಿ ಪಾಕಿಸ್ತಾನ ಭಾರತದ ತಪ್ಪು ನಕ್ಷೆಯನ್ನು ಬಳಸಿದೆ. ಅದರ ನಂತರ ರಷ್ಯಾ ಪಾಕಿಸ್ತಾನ (Pakistan)ಕ್ಕೆ ಎಚ್ಚರಿಕೆ ನೀಡಿತು. ಪಾಕಿಸ್ತಾನದ ಈ ಕ್ರಮಕ್ಕೆ ಭಾರತ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಶಾಂಘೈ ಸಹಕಾರ ಸಂಸ್ಥೆ (SCO) ಸದಸ್ಯರ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮಂಗಳವಾರ ರಷ್ಯಾದಲ್ಲಿ ಭೇಟಿಯಾದರು. ಈ ಸಭೆಯಲ್ಲಿ ಪಾಕಿಸ್ತಾನ ತನ್ನ ಹೊಸ ನಕ್ಷೆಯನ್ನು ಪ್ರಸ್ತುತಪಡಿಸಿತು, ಇದನ್ನು ಭಾರತವು ಕಾಲ್ಪನಿಕ ಎಂದು ಕರೆಯಿತು. ಪಾಕಿಸ್ತಾನ ಸರ್ಕಾರ ಇತ್ತೀಚೆಗೆ ಈ ನಕ್ಷೆಯನ್ನು ಅನುಮೋದಿಸಿದೆ. ಭಾರತದ ಎನ್‌ಎಸ್‌ಎ ಅಜಿತ್ ದೋವಲ್ (Ajit Doval) ಇದನ್ನು ವಿರೋಧಿಸಿ ಸಭೆಯಿಂದ ಹೊರಹೋಗಲು ನಿರ್ಧರಿಸಿದರು.

Exclusive: ಚೀನಾದೊಂದಿಗಿನ ಗಡಿ ವಿವಾದದ ಮಧ್ಯೆ 400 ಉಗ್ರರನ್ನು ಭಾರತದೊಳಗೆ ನುಸುಳಿಸಲು ಪಾಕ್ ಯತ್ನ

ಈ ನಿಟ್ಟಿನಲ್ಲಿ ಭಾರತದ ವಿದೇಶಾಂಗ ಸಚಿವಾಲಯವು ಈ ಸಭೆಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಉದ್ದೇಶಪೂರ್ವಕವಾಗಿ ಒಂದು ಕಾಲ್ಪನಿಕ ನಕ್ಷೆಯನ್ನು ಮಂಡಿಸಿದ್ದು, ಇದನ್ನು ಪಾಕಿಸ್ತಾನ ಇಂದು ಉತ್ತೇಜಿಸುತ್ತಿದೆ. ಪಾಕಿಸ್ತಾನದಿಂದ ಸಭೆಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ ಮತ್ತು ಆತಿಥೇಯರನ್ನು ಸಂಪರ್ಕಿಸಿದ ನಂತರ ಭಾರತ ಸಭೆಯಿಂದ ಹೊರಬಂದಿತು.

ಭಾರತಕ್ಕೆ ರಷ್ಯಾ ಭರವಸೆ:
ಈ ಘಟನೆಯ ನಂತರ ಪಾಕಿಸ್ತಾನದ ಇಂತಹ ಕೃತ್ಯವನ್ನು ಬೆಂಬಲಿಸುವುದಿಲ್ಲ ಎಂದು ರಷ್ಯಾ ಭಾರತಕ್ಕೆ ಭರವಸೆ ನೀಡಿದೆ. ಇದು ಭಾರತ ಮತ್ತು ರಷ್ಯಾ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆಶಿಸುತ್ತಿದೆ ಎಂದು ರಷ್ಯಾ ಹೇಳಿದೆ.

ಪಾಕಿಸ್ತಾನದ ಮಾಜಿ ಗೃಹ ಸಚಿವ ರೆಹಮಾನ್ ಮಲಿಕ್ ವಿರುದ್ಧ ಅತ್ಯಾಚಾರ ಆರೋಪ

ಪಾಕಿಸ್ತಾನದ ನಡೆ:-
ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ತನ್ನ ಹೊಸ ನಕ್ಷೆಯನ್ನು ಆಗಸ್ಟ್ ಆರಂಭದಲ್ಲಿ ಬಿಡುಗಡೆ ಮಾಡಿತು. ಇದರಲ್ಲಿ ಪಾಕಿಸ್ತಾನ ಮತ್ತು ಲಡಾಖ್‌ನ ಸಿಯಾಚಿನ್ ಮತ್ತು ಜಮ್ಮು ಕಾಶ್ಮೀರ, ಜುನಾಗಢ್ ಮತ್ತು ಗುಜರಾತ್‌ನ ಸರ್ ಕ್ರೀಕ್ ಕೂಡ ತಮ್ಮದೇ ಎಂದು ಘೋಷಿಸಲಾಯಿತು. ಪಾಕಿಸ್ತಾನದ ಈ ಕ್ರಮವನ್ನು ಭಾರತ ಸ್ಪಷ್ಟವಾಗಿ ನಿರಾಕರಿಸಿತು ಮತ್ತು ಇದನ್ನು ಮೂರ್ಖತನ ಎಂದು ಬಣ್ಣಿಸಿತು.

Trending News