Narendra Modi's speech in Parliament: ಗುರುವಾರ(ಫೆ.8) ರಾಜ್ಯಸಭೆಯಲ್ಲಿ ನಿವೃತ್ತಿಯಾಗುತ್ತಿರುವ ಸದಸ್ಯರಿಗೆ ವಿದಾಯ ಹೇಳುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿಗೆ ಮತ್ತು ದೇಶಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕೊಡುಗೆಯನ್ನು ಶ್ಲಾಘಿಸಿದರು.
ರಾಜ್ಯಸಭೆಯ ನಿವೃತ್ತ ಸದಸ್ಯರ ಬೀಳ್ಕೊಡುಗೆ ಸಂದರ್ಭದಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, "ನಾನು ಇಂದು ಡಾ. ಮನಮೋಹನ್ ಸಿಂಗ್ ಅವರನ್ನು ಸ್ಮರಿಸಬಯಸುತ್ತೇನೆ. ಅವರು ನಾಯಕರಾಗಿ ಮತ್ತು ವಿರೋಧ ಪಕ್ಷದಲ್ಲಿ ಸದನದಲ್ಲಿ, ಅವರ ಅಮೂಲ್ಯ ಚಿಂತನೆಗಳೊಂದಿಗೆ, ಅಪಾರ ಕೊಡುಗೆ ನೀಡಿದ್ದಾರೆ. ಇಷ್ಟು ದಿನ ಅವರು ಈ ಸದನ ಮತ್ತು ದೇಶಕ್ಕೆ ಮಾರ್ಗದರ್ಶನ ನೀಡಿದ ರೀತಿ ಎಲ್ಲರಿಗೂ ಮಾದರಿ" ಎಂದು ಹೇಳಿದರು.
ಇದನ್ನೂ ಓದಿ- Modi Government 3.0:ಮೂರನೇ ಅವಧಿಗೂ ಬಿಜೆಪಿ : ಇದೇ ನಮ್ಮ ಗ್ಯಾರಂಟಿ ಎಂದ ಪ್ರಧಾನಿ ಮೋದಿ
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಕರ್ತವ್ಯ ನಿಷ್ಠೆಯ ಬಗ್ಗೆ ಮೆಚ್ಚಿಗೆಯ ಮಾತುಗಳನ್ನಾಡಿದ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ವಿರುದ್ಧದ ವಿಶ್ವಾಸ ಮತಯಾಚನೆಯ ವೇಳೆ ಹಳೆ ಸಂಸತ್ತಿನ ಕಟ್ಟಡದಲ್ಲಿ, ಎದುರಾಳಿ ಪಕ್ಷ ಗೆಲ್ಲುತ್ತದೆ ಎಂದು ತಿಳಿದಿದ್ದರೂ ಸಹ ಪ್ರಜಾಪ್ರಭುತ್ವವನ್ನು ಬಳಪಡಿಸಲು ಡಾ. ಮನಮೋಹನ್ ಸಿಂಗ್ ಅವರು ಗಾಲಿ ಕುರ್ಚಿಯಲ್ಲಿ ಬಂದು ರಾಜ್ಯಸಭೆಯಲ್ಲಿ ಮತ ಚಲಾಯಿಸಿದರು. ಇದು ಒಬ್ಬ ಸದಸ್ಯ ತನ್ನ ಕರ್ತವ್ಯಗಳ ಬಗ್ಗೆ ಎಷ್ಟು ಜವಾಬ್ದಾರನಾಗಿದ್ದಾನೆ ಎನ್ನುವುದಕ್ಕೆ ಉದಾಹರಣೆ ಎಂದು ಅವರ ಕರ್ತವ್ಯ ಪ್ರಜ್ಞೆಯನ್ನು ಸ್ಮರಿಸಿದರು.
Prime Minister Narendra Modi says, "I remember in the other House, during the voting, it was known that the treasury bench would win but Dr Manmohan Singh came on his wheelchair & cast his vote. This an example of a member being alert of his duties" pic.twitter.com/sjSAusQoji
— ANI (@ANI) February 8, 2024
ರಾಜ್ಯಸಭೆಯ ಅರವತ್ತೆಂಟು ಸದಸ್ಯರು ತಮ್ಮ ಅವಧಿಯನ್ನು ಪೂರ್ಣಗೊಳಿಸಿ ಫೆಬ್ರವರಿ ಮತ್ತು ಮೇ ನಡುವೆ ನಿವೃತ್ತರಾಗುತ್ತಿದ್ದಾರೆ. ಇವರೆಲ್ಲರಿಗೂ ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿ, ನಿವೃತ್ತ ಸಂಸದರ ಅನುಭವವು ದೇಶಕ್ಕೆ ಪ್ರಯೋಜನವನ್ನು ನೀಡುತ್ತದೆ, ಹೊಸ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದರು.
ಇದನ್ನೂ ಓದಿ- ಜನರ ಪ್ರಾಣಕ್ಕೆ ಅಪಾಯ ತರಲಿದೆ ದೆಹಲಿಯ ಪ್ರಗತಿ ಮೈದಾನದ ಸುರಂಗ ಮಾರ್ಗ! L&T ಗೆ PWD ಸೂಚನೆ
ಕಾಂಗ್ರೆಸ್ ಕಪ್ಪು ಪತ್ರದ ಬಗ್ಗೆ ವ್ಯಂಗ್ಯ:
ಈ ಸಂದರ್ಭದಲ್ಲಿ ತಮ್ಮ ಸರ್ಕಾರದ ವಿರುದ್ಧ 'ಕಪ್ಪು ಪತ್ರ' ಬಿಡುಗಡೆ ಮಾಡಿರುವ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರದ ವಿರುದ್ಧ "ಕಪ್ಪು ಕಾಗದ" ಹೊರತಂದಿದ್ದಕ್ಕಾಗಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರಲ್ಲದೆ, ಒಳ್ಳೆಯ ಕೆಲಸದ ಮಧ್ಯೆ ಅದನ್ನು(ಕಪ್ಪು ಪತ್ರವನ್ನು) "ಕಾಲಾ ಟೀಕಾ" (ಕೆಟ್ಟ ದೃಷ್ಟಿ ಬೀಳದಂತೆ ಇಡುವ ದೃಷ್ಟಿ ಬೊಟ್ಟು) ಎಂದು ಬಣ್ಣಿಸಿದರು.
"Kaala Teeka": PM Modi responds to Congress' Black Paper highlighting 'failures' of BJP govt since 2014
Read @ANI Story | https://t.co/n0nafqFWzv #PMModi #congress #BudgetSession2024 pic.twitter.com/unVyNGVyuS
— ANI Digital (@ani_digital) February 8, 2024
.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.