Ramadan 2022: ರಂಜಾನ್ ಮಾಸ ಆರಂಭ, ಪ್ರಧಾನಿ ಮೋದಿ ಸೇರಿ ಗಣ್ಯರ ಶುಭಾಶಯ

ರಂಜಾನ್ ‘ಚಾಂದ್’ (ಚಂದ್ರ) ಶನಿವಾರ ಕಾಣಿಸಿಕೊಂಡಿದ್ದು, ಭಾನುವಾರ ಮೊದಲ ‘ರೋಜಾ’ ಆಚರಿಸಲಾಗುವುದು. ರಂಜಾನ್ ಆಚರಣೆಯನ್ನು ಇಸ್ಲಾಂನ 5 ಸ್ತಂಭಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

Written by - Zee Kannada News Desk | Last Updated : Apr 3, 2022, 07:45 AM IST
  • ರಂಜಾನ್ ಚಂದ್ರ ಶನಿವಾರ ಕಾಣಿಸಿಕೊಂಡಿದ್ದು, ಭಾನುವಾರ ಮೊದಲ ‘ರೋಜಾ’ ಆಚರಿಸಲಾಗುವುದು
  • ರಂಜಾನ್ ಆಚರಣೆಯನ್ನು ಇಸ್ಲಾಂನ 5 ಸ್ತಂಭಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ
  • ರಂಜಾನ್ ಮಾಸಾರಂಭದ ಪ್ರಯುಕ್ತ ಪ್ರಧಾನಿ ಮೋದಿ ಸೇರಿ ಗಣ‍್ಯರು ಶುಭಾಶಯ ತಿಳಿಸಿದ್ದಾರೆ
Ramadan 2022: ರಂಜಾನ್ ಮಾಸ ಆರಂಭ, ಪ್ರಧಾನಿ ಮೋದಿ ಸೇರಿ ಗಣ್ಯರ ಶುಭಾಶಯ title=
ರಂಜಾನ್ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ನವದೆಹಲಿ: ರಂಜಾನ್ ಮಾಸಾರಂಭ(Beginning of Ramzan)ದ ಪ್ರಯುಕ್ತ ಪ್ರಧಾನಿ ಮೋದಿ(Narendra Modi), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಸೇರಿದಂತೆ ಅನೇಕ ಗಣ್ಯರು ಟ್ವೀಟ್​ ಮೂಲಕ ಸಮಸ್ತ ಮುಸ್ಲಿಂ ಬಾಂಧವರಿಗೆ ಶುಭಾಶಯ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ‘ಸಮಸ್ತ ಮುಸ್ಲಿಮರಿಗೆ ಪವಿತ್ರ ರಂಜಾನ್ ಹಬ್ಬ(Ramadan 2022)ದ ಶುಭಾಶಯಗಳು. ಈ ಪವಿತ್ರ ತಿಂಗಳು ಬಡವರ ಸೇವೆ ಮಾಡಲು ಜನರನ್ನು ಪ್ರೇರೇಪಿಸಲಿ. ನಮ್ಮ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರೋನಾದ ಈ ಹೊಸ ರೂಪಾಂತರವು ಒಮಿಕ್ರಾನ್‌ನಿಂದ ಎಷ್ಟು ಅಪಾಯಕಾರಿ ? WHO ಹೇಳಿದ್ದೇನು ?

‘ರಂಜಾನ್ ಶುಭಾಶಯಗಳು. ಈ ಪವಿತ್ರ ಮಾಸವು ಎಲ್ಲರಿಗೂ ಉತ್ತಮ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ತರಲಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ(Ramzan Greetings).

1 ತಿಂಗಳ ಉಪವಾಸ

ಮುಸ್ಲಿಂ ಸಮುದಾಯದ ಪವಿತ್ರ ಮಾಸವಾದ ರಂಜಾನ್ ಆರಂಭವಾಗಿದೆ. ಈ 1 ತಿಂಗಳಲ್ಲಿ ಮುಸ್ಲಿಂ ಸಮುದಾಯದ ಜನರು ಉಪವಾಸ(Fasting in Islam)ವನ್ನು ಆಚರಿಸುತ್ತಾರೆ ಮತ್ತು ಅಲ್ಲಾನನ್ನು ಪೂಜಿಸುತ್ತಾರೆ. ಇಸ್ಲಾಮಿಕ್ ತಿಂಗಳ ಪ್ರಕಾರ ರಂಜಾನ್ 9ನೇ ತಿಂಗಳಲ್ಲಿ ಬರುತ್ತದೆ. ಈ ಬಾರಿ ರಂಜಾನ್ ಏಪ್ರಿಲ್ 2ರ ಶನಿವಾರದಿಂದ ಆರಂಭವಾಗಿದೆ. ಈ ವಿಶೇಷ ಸಂದರ್ಭದಲ್ಲಿ 29-30 ದಿನಗಳವರೆಗೆ ಉಪವಾಸವನ್ನು ಮಾಡಲಾಗುತ್ತದೆ. ತದನಂತರ ಈದ್-ಉಲ್-ಫಿತರ್ ಆಚರಣೆಯೊಂದಿಗೆ ರಂಜಾನ್(Ramadan) ಕೊನೆಗೊಳ್ಳುತ್ತದೆ.

ಇದನ್ನೂ ಓದಿ: Petrol-diesel price: ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ, 13 ದಿನಗಳಲ್ಲಿ 11 ಬಾರಿ ಏರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News