Good News: ಸೆಪ್ಟೆಂಬರ್ 30ರವರೆಗೆ ಈ ಯೋಜನೆಯನ್ನು ವಿಸ್ತರಿಸಲು PM Modi ಸಚಿವ ಸಂಪುಟ ನಿರ್ಧಾರ

Garib Anna Kalyana Yojana Updates - ಪ್ರಧಾನಿ ಮೋದಿ ಕರೆದ ಸಚಿವ ಸಂಪುಟ ಸಭೆಯಲ್ಲಿ ಗರೀಬ್ ಅನ್ನ ಕಲ್ಯಾಣ ಯೋಜನೆಯನ್ನು ಮುಂದಿನ 6 ತಿಂಗಳವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯು ಸೆಪ್ಟೆಂಬರ್ 30 ರವರೆಗೆ ಜಾರಿಯಲ್ಲಿರುತ್ತದೆ ಎಂದು ಸಂಪುಟ ಸಭೆಯಲ್ಲಿ (Cabinet Meeting In Delhi) ನಿರ್ಧರಿಸಲಾಗಿದೆ.  

Written by - Nitin Tabib | Last Updated : Mar 26, 2022, 07:39 PM IST
  • ಸಂಪುಟ ಸಭೆ ಕರೆದ PM Modi
  • ಗರೀಬ್ ಕಲ್ಯಾಣ್ ಯೋಜನೆಯನ್ನು ಅವಧಿ ವಿಸ್ತರಣೆ
  • ಸೆಪ್ಟೆಂಬರ್ 30ರವರೆಗೆ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು
Good News: ಸೆಪ್ಟೆಂಬರ್ 30ರವರೆಗೆ ಈ ಯೋಜನೆಯನ್ನು ವಿಸ್ತರಿಸಲು PM Modi ಸಚಿವ ಸಂಪುಟ ನಿರ್ಧಾರ title=
PM Garib Kalyan Yojana Latest News

ನವದೆಹಲಿ: PM Garib Kalyan Yojana Latest News - ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ ಸಂಜೆ ಮಹತ್ವದ ಸಂಪುಟ ಸಭೆ (PM Modi Cabinet Meeting) ಕರೆದಿದ್ದಾರೆ. ಸಂಜೆ 4.30ಕ್ಕೆ ಈ ಸಭೆ ಕರೆಯಲಾಗಿತ್ತು. ಸಾಮಾನ್ಯವಾಗಿ ಇಂತಹ ಸಭೆಗಳು ಬುಧವಾರ ನಡೆಯುತ್ತವೆ, ಆದರೆ ಈ ಸಭೆಯನ್ನು ಶನಿವಾರದಂದು ಯಾವ ಉದ್ದೇಶಕ್ಕಾಗಿ ಕರೆಯಲಾಗಿದೆ, ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಸಭೆಯಲ್ಲಿ (Modi, Cabinet Meeting) ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ.

ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ
ಈ ಸಂಪುಟ ಸಭೆಯಲ್ಲಿ ಗರೀಬ್ ಅನ್ನ ಕಲ್ಯಾಣ ಯೋಜನೆಯನ್ನು ಮುಂದಿನ 6 ತಿಂಗಳವರೆಗೆ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಯೋಜನೆಯು ಸೆಪ್ಟೆಂಬರ್ 30 ರವರೆಗೆ ಜಾರಿಯಲ್ಲಿರುತ್ತದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಮೊದಲು ಈ ಯೋಜನೆಯು ಮಾರ್ಚ್ 31 ಕ್ಕೆ ಕೊನೆಗೊಳ್ಳಬೇಕಿತ್ತು.

ಇದನ್ನೂ ಓದಿ-Uttar Pradesh Assembly: ಪ್ರತಿಪಕ್ಷದ ನಾಯಕನಾಗಲಿರುವ ಅಖಿಲೇಶ್ ಯಾದವ್..!

ಲಕ್ನೋದಲ್ಲಿ ಸಂಪೂರ್ಣ ಕ್ಯಾಬಿನೆಟ್
ಉತ್ತರ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಪೂರ್ಣಗೊಳ್ಳಲಿರುವ ಹಿನ್ನೆಲೆ ಶುಕ್ರವಾರ ಬಹುತೇಕ ಕ್ಯಾಬಿನೆಟ್ ಲಖನೌನಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿ, ಅಲ್ಲಿಂದ ಹಿಂದಿರುಗಿದ ನಂತರ, ಪ್ರಧಾನಿ ಮೋದಿ ಮರುದಿನವೇ ಈ ಸಭೆಯನ್ನು ಕರೆದಿದ್ದರು.

ಇದನ್ನೂ ಓದಿ-ವಾಹನ ಸವಾರರೆ ಗಮನಿಸಿ : ನಿಮ್ಮ ಜೊತೆಗೆ DL ಕೊಂಡೊಯ್ಯುವ ಅಗತ್ಯವಿಲ್ಲ! ಏಕೆ? ಇಲ್ಲಿ ನೋಡಿ

ಸಂಸತ್ ಅಧಿವೇಶನದ ನಡುವೆ ಇಂತಹ ಚರ್ಚೆ
ಪ್ರಸ್ತುತ ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ, ಸರ್ಕಾರದ ಈ ಸಚಿವ ಸಂಪುಟ ಸಭೆ (PM Ministers Meeting) ಭಾರಿ ಮಹತ್ವ ಪಡೆದುಕೊಂಡಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News