ನವದೆಹಲಿ: ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಂದಿನ 15 ದಿನಗಳಲ್ಲಿ ತಮ್ಮದೇ ಪಕ್ಷವನ್ನು ರಚಿಸಬಹುದು ಎಂದು ಮೂಲಗಳು ಜೀ ನ್ಯೂಸ್ ಗೆ ತಿಳಿಸಿವೆ.
ರೈತರ ಸಮಸ್ಯೆಯ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ನಂತರ ಒಂದು ವೇಳೆ ಯಾವುದೇ ಪರಿಹಾರ ಕ್ರಮ ಕಂಡುಕೊಂಡರೆ, ಆ ಪಕ್ಷವು ಆ ವಿಷಯದ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತದೆ.ಈ ಹಿನ್ನಲೆಯಲ್ಲಿ ಅಮರಿಂದರ್ ಸಿಂಗ್ (Captain Amarinder Singh) ಅವರಿಗೆ ಬಿಜೆಪಿ ಸೇರುವುದು ಕೂಡ ಒಂದು ಆಯ್ಕೆಯಾಗಬಹುದಾಗಿದೆ.
ಇದನ್ನೂ ಓದಿ: ಎನ್ ಡಿಎ ಒಕ್ಕೂಟ ಸೇರಲು ಕ್ಯಾಪ್ಟನ್ ಅಮರೀಂದರ್ ಸಿಂಗ್ ಗೆ ಅಹ್ವಾನವಿತ್ತ ರಾಮದಾಸ್ ಅಠವಾಲೆ
ಇನ್ನೊಂದೆಡೆಗೆ ನವಜೋತ್ ಸಿಂಗ್ ಅವರಿಂದ ರಾಷ್ಟ್ರಕ್ಕೆ ಬೆದರಿಕೆ ಎನ್ನುವುದರ ಮೂಲಕ ಅದನ್ನೇ ಪ್ರಮುಖ ಸಮಸ್ಯೆಯನ್ನಾಗಿ ಆಮರಿಂದರ್ ಮಾಡಲಿದ್ದಾರೆ ಎನ್ನುವ ಭೀತಿ ಈಗ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದೆ.ಜೊತೆಗೆ ಅನೇಕ ಶಾಸಕರು ಮತ್ತು ಸಂಸದರು ಸಹಿತ ಅವರ ಜೊತೆಗೆ ಹೋಗಬಹುದು ಎನ್ನಲಾಗುತ್ತಿದೆ.ಆದ್ದರಿಂದ ಈ ಪರಿಸ್ಥಿತಿಯಲ್ಲಿ ಪಂಜಾಬ್ ಗೆಲ್ಲಲು ಕಾಂಗ್ರೆಸ್ ಪಕ್ಷಕ್ಕೆ ಕಷ್ಟಕರವಾಗಲಿದೆ, ಇದಕ್ಕಾಗಿಯೇ ಹರೀಶ್ ರಾವತ್ ಅವರು ಸೋನಿಯಾ ಗಾಂಧಿ ಅವರನ್ನು ಬೆಂಬಲಿಸುವಂತೆ ಸಲಹೆ ನೀಡುತ್ತಿದ್ದಾರೆ.
ಇದನ್ನೂ ಓದಿ: Punjab Politics Latest Update: ಪಂಜಾಬ್ ಕಾಂಗ್ರೆಸ್ ಗೆ ಬಿಗ್ ಶಾಕ್!, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ
ಸಿದ್ದು ರಾಜೀನಾಮೆ ನಂತರ, ಪಂಜಾಬ್ ಕಾಂಗ್ರೆಸ್ ನಾಯಕರು ಹೈಕಮಾಂಡ್ ನಿಂದ ಸಿದ್ದು ಬದಲಿಸಿ ಬೇರೆಯವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.ಸುನೀಲ್ ಜಖರ್ ಮತ್ತು ಮನೀಶ್ ತಿವಾರಿ ಸೇರಿದಂತೆ ಅನೇಕ ಹಿರಿಯ ನಾಯಕರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಸಿದ್ದು ಪದಚ್ಯುತಿಯ ಪರವಾಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷವು ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್ ಸಿಎಂ ಮಾಡಿದ್ದೇಕೆ?
ವಾಸ್ತವವಾಗಿ, ಸಿದ್ದುಗೆ ಈಗ ಯಾವುದೇ ಆಯ್ಕೆ ಉಳಿದಿಲ್ಲ,ಮೂಲಗಳ ಪ್ರಕಾರ, ಆಮ್ ಆದ್ಮಿ ಪಕ್ಷ (ಎಎಪಿ) ಯಾವುದೇ ತೊಂದರೆ ತೆಗೆದುಕೊಳ್ಳಲು ಬಯಸುವುದಿಲ್ಲ.ಸಿದ್ದು ಬಿಜೆಪಿ ಮತ್ತು ಅಕಾಲಿದಳ ಸೇರುವ ಪ್ರಶ್ನೆಯೇ ಇಲ್ಲ. ಹೀಗಾಗಿ ಈಗ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಇರುವುದು ಅನಿವಾರ್ಯವಾದ ಆಯ್ಕೆಯಾಗಿದೆ.
ಜಿ -23 ನಾಯಕರ ಬೇಡಿಕೆಯ ಮೇಲೆ ಕಾಂಗ್ರೆಸ್ ಸಿಡಬ್ಲ್ಯೂಸಿ ಸಭೆ ಕರೆಯಲಿದೆ. ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಿಡಬ್ಲ್ಯೂಸಿ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು ಎಂದು ಕಳೆದ ವಾರ ಸೂಚಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.