ಡಿಎಂಕೆ ಮುಖ್ಯಸ್ಥ ಕರುಣಾನಿಧಿಯವರ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ

     

Last Updated : Jul 31, 2018, 06:04 PM IST
ಡಿಎಂಕೆ ಮುಖ್ಯಸ್ಥ ಕರುಣಾನಿಧಿಯವರ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ title=
Photo courtesy: ANI

ಚೆನ್ನೈ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥ ಎಂ. ಕರುಣಾನಿಧಿ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದರು.

ಕರಣಾನಿಧಿಯವರನ್ನು ಭೇಟಿ ಮಾಡಿದ ನಂತರ ಸುದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ "ನಾನು ಕರುಣಾನಿಧಿ ಜಿ ಅವರನ್ನು ಭೇಟಿ ಮಾಡಲು ಬಂದಿದ್ದೇನೆ , ಅವರು ನಿಜಕ್ಕೂ ಕಠಿಣ ವ್ಯಕ್ತಿ, ನಾನು ಅವರನ್ನು ಭೇಟಿಯಾಗಿದ್ದೇನೆ ಅವರ ಆರೋಗ್ಯ ಸ್ಥಿರವಾಗಿದೆ, ಸೋನಿಯಾಜಿ ಅವರು ಸಹಿತ ಕುಟುಂಬಕ್ಕೆ ಹಾರೈಸಿದ್ದಾರೆ ಎಂದು ಗಾಂಧಿ ಮಾಧ್ಯಮಗಳಿಗೆ ತಿಳಿಸಿದರು.

ಈ ಹಿಂದಿನ ದಿನ, ಮಲೇಷಿಯಾದ ಭಾರತೀಯ ಕಾಂಗ್ರೆಸ್ ಪ್ರತಿನಿಧಿಗಳು ಕರುಣಾನಿಧಿಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.ಅಲ್ಲದೆ ಶ್ರೀಲಂಕಾದ ಅಧ್ಯಕ್ಷ ಮೈಥಿಪ್ರಲಾ ಸಿರಿಸೇನಾ ಪ್ರತಿನಿಧಿಗಳು ಸಹಿತ ಭೇಟಿ ಮಾಡಿದ್ದರು.ಈ ವಾರದ ಪ್ರಾರಂಭದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕಾವೇರಿ ಆಸ್ಪತ್ರೆಯಲ್ಲಿ ಕರುಣಾನಿಧಿ ಅವರನ್ನು ಭೇಟಿ ಮಾಡಿ ಬೇಗ ಚೇತರಿಸಿಕೊಳ್ಳಲಿ ಎಂದು ಅವರು ಹಾರಿಸಿದ್ದರು.

ಜುಲೈ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರುಣಾನಿಧಿಯ ಅನಾರೋಗ್ಯದ ಕುರಿತು ವಿಚಾರಣೆ ನಡೆಸಿ ಶೀಘ್ರ ಚೇತರಿಕೆಕೊಳ್ಳಲಿ ಎಂದು ಪ್ರಾರ್ಥಿಸಿದ್ದರು. ಅಲ್ಲದೆ  ಪ್ರಧಾನಿ ಕರುಣಾನಿಧಿಯವರ ಮಗ ಎಂ.ಕೆ. ಸ್ಟಾಲಿನ್ ಮತ್ತು ಮಗಳು ಕಣಿಮೊಝಿ ಅವರೊಂದಿಗೆ ಕೂಡ ದೂರವಾಣಿಯಲ್ಲಿ ಮಾತನಾಡಿದರು.

ಕಳೆದ ವಾರ ತನ್ನ ರಕ್ತದೊತ್ತಡದಲ್ಲಿ ಕುಸಿತ ಕಂಡ ನಂತರ ಕರುಣಾನಿಧಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

Trending News