ರಾಜಸ್ತಾನ: ಲವ್ ಜಿಹಾದ್ ಕಾರಣಕ್ಕೆ ಮುಸ್ಲಿಂ ವ್ಯಕ್ತಿಯ ಬರ್ಬರ ಹತ್ಯೆ

      

Last Updated : Dec 7, 2017, 03:00 PM IST
ರಾಜಸ್ತಾನ: ಲವ್ ಜಿಹಾದ್ ಕಾರಣಕ್ಕೆ ಮುಸ್ಲಿಂ ವ್ಯಕ್ತಿಯ ಬರ್ಬರ ಹತ್ಯೆ title=

ರಾಜ್ ಸಮಂದ್: ಇಲ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಕೊಲೆ ಮಾಡಿದ ವ್ಯಕ್ತಿಯೇ ಈ ವಿಡಿಯೋವನ್ನು ರೀಕಾರ್ಡ್ ಮಾಡಿದ್ದು ಇಗ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಶಂಭುಲಾಲ್ ಎನ್ನುವ ವ್ಯಕ್ತಿ ಮುಸ್ಲಿಂ ಯುವಕನನ್ನು ಲವ್ ಜಿಹಾದ್ ಕಾರಣಕ್ಕಾಗಿ ಅವನನ್ನು ಕೊಡಲಿಯಿಂದ ಕೊಚ್ಚಿ ನಂತರ ಅವನಿಗೆ ಬೆಂಕಿ ಹಚ್ಚಿರುವ ಭೀಕರ ಘಟನೆ ರಾಜಸ್ತಾನದ ರಾಜ್ ಸಮಂದ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ರಾಜಸ್ತಾನ ಸರ್ಕಾರವು ಈಗಾಗಲೇ ವಿಶೇಷ ತನಿಖಾದಳವನ್ನು ರಚಿಸಿದ್ದು, ಈಗ ಅದು ಈ ಘಟನೆಯ ಕೊಮು ಹಿನ್ನಲೆಯ ಆಯಾಮವನ್ನು ತನಿಖೆ ನಡೆಸುತ್ತಿದೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಜಸ್ಥಾನದ ಗೃಹ ಮಂತ್ರಿ  ಗುಲಾಬ್ ಚಂದ್ ಕಟಾರಿಯ "ಈ ಘಟನೆ ನಿಜಕ್ಕೂ ಆಘಾತಕಾರಿ ಮತ್ತು ಭಯ ಬಿಳಿಸುವಂತಿದೆ, ಈಗಾಗಲೇ ಈ ಘಟನೆಗೆ ಸಂಬಂಧಿಸಿದ ವ್ಯಕ್ತಿಯನ್ನು ಬಂಧಿಸಿದ್ದು ಮತ್ತು ಎಸ್.ಐ .ಟಿ ತಂಡವು ತನಿಖೆಯನ್ನು ಕೈಗೊಂಡಿದೆ "ಎಂದರು. 
 
ಈ ಘಟನೆಯಲ್ಲಿ ಕೊಲೆಯಾದ ವ್ಯಕ್ತಿ  ಮೊಹಮ್ಮದ ಆಫ್ರಾಜುಲ್ ಎಂದು ಗುರುತಿಸಲಾಗಿದ್ದ್ದುಮೂಲತಃ ಪಶ್ಚಿಮ ಬಂಗಾಳದವನಾದ  ಇತ ಇಲ್ಲಿಗೆ ಕೆಲಸ ಮಾಡಲು ವಲಸೆ ಬಂದಿದ್ದನು ಎನ್ನಲಾಗಿದೆ.
  

Trending News