ಜೈಪುರ: ರಾಜಸ್ಥಾನದಲ್ಲಿ ನೀರಿನ ಅಭಾವವಿದ್ದರೂ, ಬಣ್ಣಗಳ ಉತ್ಸವಕ್ಕೆ ಹೆಚ್ಚಿನ ನೀರು ವ್ಯರ್ಥವಾಗುತ್ತಿದೆ. ಹೋಳಿ ದಿನದಂದು ಜೈಪುರದಲ್ಲಿ ಜಲ ವಿಭಾಗವು ಹೆಚ್ಚುವರಿ ನೀರನ್ನು ಸರಬರಾಜು ಮಾಡುತ್ತದೆ. ಹೆಚ್ಚುವರಿ ನೀರನ್ನು ಸರಿಯಾಗಿ ಬಳಸಿಕೊಳ್ಳುವ ಜವಾಬ್ದಾರಿ ಎಲ್ಲರಿಗೂ ಇದೇ. ಹಾಗಾಗಿ ನೀರನ್ನು ವ್ಯರ್ಥ ಮಾಡದೆ ಕೇವಲ ಬಣ್ಣಗಳಿಂದ ಹೋಳಿ ಆಚರಿಸುವಂತೆ ರಾಜಸ್ಥಾನ ಜಲ ವಿಭಾಗ ಜನತೆಯಲ್ಲಿ ಮನವಿ ಮಾಡಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ ಪಿಂಕ್ ಸಿಟಿಯಲ್ಲಿ ಹೋಳಿ ಆಚರಣೆ ನಡೆಸಲಾಗುತ್ತದೆ. ಆದರೆ ಈ ಬಾರಿ ಹೋಳಿಯಲ್ಲಿ ನೀವು ನೀರಿನ ವಿಶೇಷ ಆರೈಕೆಯ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿರುವುದು ಅವಶ್ಯಕವಾಗಿದೆ ಎಂದು ಜಲ ವಿಭಾಗ ತಿಳಿಸಿದೆ.
ನೀರಿನ ಕೊರತೆಯ ಹೊರತಾಗಿಯೂ, ಹೋಳಿ ದಿನದಂದು ನಿಮಗೆ ನೀರಿನ ಹೆಚ್ಚುವರಿ ನೀರಿನ ಪೂರೈಕೆ ಮಾಡಲಾಗುತ್ತದೆ. ಆದರೆ ಈ ಸಮಯದಲ್ಲಿ ನೀವು ನೀರಿನ ಬಗ್ಗೆ ಹೆಚ್ಚು ಜವಾಬ್ದಾರಿಯನ್ನು ಹೊಂದಿರುತ್ತೀರಿ. ಹೋಳಿ ವೇಳೆ ನೀರನ್ನು ಎರಚಾಡದೆ, ಕೇವಲ ಬಣ್ಣ ಹಚ್ಚುವ ಮೂಲಕ ನಿಮ್ಮ ಜವಾಬ್ದಾರಿ ತೋರಬೇಕಿದೆ. ಕಾರಣ ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಅಧಿಕವಾಗಲಿದೆ ಎಂದು ಜಲ ವಿಭಾಗ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.