ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹಮದ್ ಪಟೇಲ್ ಐಸಿಯುಗೆ ದಾಖಲು

ಕಾಂಗ್ರೆಸ್ಸಿನ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರು ಗುರುಗ್ರಾಮ್ ನಲ್ಲಿರುವ ಮೆಡಂತಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದಾರೆ. 

Last Updated : Nov 15, 2020, 05:23 PM IST
  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹಮದ್ ಪಟೇಲ್ ಐಸಿಯುಗೆ ದಾಖಲು

ನವದೆಹಲಿ: ಕಾಂಗ್ರೆಸ್ಸಿನ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರು ಗುರುಗ್ರಾಮ್ ನಲ್ಲಿರುವ ಮೆಡಂತಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದಾರೆ. 

ಈ ವಿಷಯವನ್ನು ಪಟೇಲ್ ಅವರ ಮಗ,ಫೈಸಲ್ ತನ್ನ ತಂದೆಯ ವೈದ್ಯಕೀಯ ಸ್ಥಿತಿಯ ಬಗ್ಗೆ ತಿಳಿಸಿದ್ದಾನೆ. ಪಟೇಲ್ ಅವರು ವೈದ್ಯಕೀಯ ವೀಕ್ಷಣೆಯಲ್ಲಿ ಮುಂದುವರಿಯುತ್ತಿರುವುದರಿಂದ ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ಕುಟುಂಬ ಹೇಳಿದೆ.

ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಗೆ ಕೊರೊನಾ ಧೃಢ

'ಈ ಹ್ಯಾಂಡಲ್‌ನಿಂದ ನಾವು ನಿಮಗೆ ನವೀಕರಣಗಳನ್ನು ಒದಗಿಸುತ್ತೇವೆ. ಅವರ ಶೀಘ್ರ ಚೇತರಿಕೆಗಾಗಿ ನಾವು ಪ್ರಾರ್ಥಿಸಬೇಕೆಂದು ನಾವು ವಿನಂತಿಸುತ್ತೇವೆ ”ಎಂದು ರಾಜ್ಯಸಭಾ ಸದಸ್ಯರ ಕುಟುಂಬ ಟ್ವಿಟ್ಟರ್ ಹ್ಯಾಂಡಲ್ @mfaisalpatel ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಅಕ್ಟೋಬರ್ 1 ರಂದು ಪಟೇಲ್ ಅವರಿಗೆ ಕೊರೊನಾ ಧೃಢಪಟ್ಟಿತ್ತು, ತದನಂತರ ಅವರು ಸ್ವಯಂ ಪ್ರತ್ಯೇಕತೆಗೆ ಹೋಗಿದ್ದರು, ಅಷ್ಟೇ ಅಲ್ಲದೆ ತಮ್ಮ ಸಂಪರ್ಕಕ್ಕೆ ಬಂದಿರುವುವರೆಲ್ಲರೂ ಕೂಡ  ಸ್ವಯಂ ಪ್ರತ್ಯೇಕತೆಗೆ ಒಳಗಾಗಲು ಕೋರಿದ್ದರು.

 

More Stories

Trending News