ನವದೆಹಲಿ: ಸದ್ಯ ಸುರಕ್ಷಿತ ಹೂಡಿಕೆಗಾಗಿ ಕೇವಲ ಚಿನ್ನ ಒಂದೇ ಬಲವಾದ ಆಪ್ಶನ್ ಆಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ. ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 52,000 ರೂ.ಗೆ ದಾಟುವ ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ 10 ಗ್ರಾಂ 49 ಸಾವಿರ ದಾಟಿದೆ.
ಇಂತಹ ಪರಿಸ್ಥಿತಿಯಲ್ಲಿ, 49,000 ಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಉತ್ತಮ ಅವಕಾಶ ನಿಮ್ಮ ಬಳಿ ಇದೆ. ಸಾವೆರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ, ನೀವು ಪ್ರತಿ ಗ್ರಾಂ ಚಿನ್ನದ ಮೇಲೆ 4852 ರೂ.ಹೂಡಿಕೆ ಮಾಡಬಹುದು. ಸಾವೆರಿನ್ ಚಿನ್ನದ ಬಾಂಡ್ ಯೋಜನೆಯಲ್ಲಿ ಚಿನ್ನವನ್ನು ಖರೀದಿಸುವ ದೊಡ್ಡ ಅನುಕೂಲವೆಂದರೆ ಇಲ್ಲಿ ನೀವು ತೆರಿಗೆ ರಿಯಾಯಿತಿಯನ್ನು ಸಹ ಪಡೆಯಬಹುದು.
ಆದರೆ, ನೆನಪಿಡಿ ಗೋಲ್ಡ್ ಬಾಂಡ್ ಸ್ಕೀಮ್ ಅಡಿ ಚಿನ್ನ ಖರೀದಿಸಲು ನಿಮ್ಮ ಬಳಿ ಕೇವಲ ಒಂದು ನಿನ ಮಾತ್ರ ಬಾಕಿ ಉಳಿದಿದೆ. ಈ ಯೋಜನೆ ಜುಲೈ 10 ರವರೆಗೆ ಮಾತ್ರ ಓಪನ್ ಇರಲಿದೆ.
Sovereign Gold Bond ಸ್ಕೀಮ್ ನ ಈ ವರ್ಷ ಇದು ನಾಲ್ಕನೇ ಸೀರಿಸ್ ಆಗಿದೆ. ಈ ಸೀರಿಸ್ ನಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 4,852 ರೂ. ನಿಗದಿಪಡಿಸಲಾಗಿದೆ. ಭಾರತ ಸರ್ಕಾರದ ವತಿಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಬಾಂಡ್ ಗಳನ್ನು ಜಾರಿಗೊಳಿಸುತ್ತದೆ. ಈ ಸ್ಕೀಮ್ ನಲ್ಲಿ ಚಿನ್ನ ಖರೀದಿಸುವ ವೇಳೆ ನೀವು ಡಿಜಿಟಲ್ ಪೇಮೆಂಟ್ ಮೂಲಕ ಹಣ ಪಾವತಿಸಿದರೆ ನಿಮಗೆ ಪ್ರತಿ ಗ್ರಾಂ ಚಿನ್ನ ಖರೀದಿಯ ಮೇಲೆ ರೂ. 50 ಹಾಗೂ ಪತಿ 10ಗ್ರಾಂ ಚಿನ್ನ ಖರೀದಿಯ ಮೇಲೆ ರೂ.500 ರಿಯಾಯಿತಿ ಸಿಗಲಿದೆ. ಅಂದರೆ ಡಿಜಿಟಲ್ ಪೇಮೆಂಟ್ ಮೂಲಕ ಹಣ ಪಾವತಿಸಿ ಒಂದು ಗ್ರಾಂ ಚಿನ್ನ ಖರೀದಿಸಿದರೆ, ಅದು ನಿಮಗೆ ರೂ.4,802ಕ್ಕೆ ಸಿಗಲಿದೆ.
ಈ ಬಾಂಡ್ ಗಳನ್ನು ಎಲ್ಲಿಂದ ಖರೀದಿಸಬೇಕು?
ಗೋಲ್ಡ್ ಬಾಂಡ್ ನ ಮಾರಾಟ ಬ್ಯಾಂಕ್, ಭಾರತೀಯ ಸ್ಟಾಕ್ ಹೋಲ್ಡಿಂಗ್ ನಿಗಮ ಲಿಮಿಟೆಡ್ (SHCIL) ಹಾಗೂ ಕೆಲ ಆಯ್ದ ಅಂಚೆ ಕಚೇರಿ ಮತ್ತು ಮಾನ್ಯತೆ ಪಡೆದ ಷೇರು ಮಾರುಕಟ್ಟೆಗಳಾಗಿರುವ ರಾಷ್ಟ್ರೀಯ ಷೇರು ಮಾರುಕಟ್ಟೆ ಹಾಗೂ ಬಾಂಬೆ ಸ್ಟಾಕ್ ಎಕ್ಸ್ಚೆಂಜ್ ಗಳ ಮೂಲಕ ನಡೆಸಲಾಗುತ್ತಿದೆ.
ಲಿಮಿಟ್ ಮೊದಲೇ ನಿರ್ಧರಿಸಲಾಗಿದೆ
ಸಾವೆರಿನ್ ಗೋಲ್ಡ್ ಬೋನ್ಬ್ದ್ ಸ್ಕೀಮ್ ಅಡಿಯಲ್ಲಿ ಚಿನ್ನ ಖರೀದಿಸಲು ಕೆಲ ನಿಯಮಗಳನ್ನು ವಿಧಿಸಲಾಗಿದೆ. ಈ ಸ್ಕೀಮ್ ಅಡಿಯಲ್ಲಿ ಯಾವುದೇ ವ್ಯಕ್ತಿ ಅಥವಾ ವ್ಯಾಪಾರಿ ವರ್ಷದಲ್ಲಿ ಅತ್ಯಧಿಕ ಅಂದರೆ 500 ಗ್ರಾಂ ಮೌಲ್ಯದ ಚಿನ್ನದ ಬಾಂಡ್ ಖರೆದಿಸಬಹುದಾಗಿದೆ. ಇನ್ನೊಂದೆಡೆ ಕನಿಷ್ಠ ಚಿನ್ನ ಖರೀದಿಯ ಲಿಮಿಟ್ 1 ಗ್ರಾಂ ಇದೆ. ಈ ಯೋಜನೆಯ ಇನ್ನೊಂದು ವಿಶೇಷತೆ ಎಂದರೆ, ಈ ಯೋಜನೆಯಡಿ ನೀವು ಚಿನ್ನ ಖರೀದಿಸಿದರೆ ನಿಮಗೆ ವಾರ್ಷಿಕವಾಗಿ ಶೇ.2.5ರಷ್ಟು ಬಡ್ಡಿ ಕೂಡ ಸಿಗುತ್ತದೆ. ಲೋಹದ ಚಿನ್ನ ಬೇಡಿಕೆಯಲ್ಲಿ ಇಳಿಕೆ ಮಾಡಲು ಭಾರತ ಸರ್ಕಾರ 2015ರಲ್ಲಿ ಸಾವೆರಿನ್ ಗೋಲ್ಡ್ ಬಾಂಡ್ ಸ್ಕೀಮ್ ಬಿಡುಗಡೆ ಮಾಡಿತ್ತು.