ಯುಪಿಯಲ್ಲಿ ಬಿಎಸ್​ಪಿ-ಎಸ್​ಪಿ ಮೈತ್ರಿ; ಬಿಎಸ್​ಪಿ 37, ಎಸ್​ಪಿ 36 ಕ್ಷೇತ್ರಗಳಲ್ಲಿ ಸ್ಪರ್ಧೆ ಸಾಧ್ಯತೆ!

ಈ ಮೈತ್ರಿ ಪಕ್ಷಗಳು ಒಟ್ಟು 78 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.

Last Updated : Dec 19, 2018, 04:31 PM IST
ಯುಪಿಯಲ್ಲಿ ಬಿಎಸ್​ಪಿ-ಎಸ್​ಪಿ ಮೈತ್ರಿ; ಬಿಎಸ್​ಪಿ 37, ಎಸ್​ಪಿ 36 ಕ್ಷೇತ್ರಗಳಲ್ಲಿ ಸ್ಪರ್ಧೆ ಸಾಧ್ಯತೆ! title=

ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಉತ್ತರಪ್ರದೇಶದಲ್ಲಿ ಬಿಎಸ್​ಪಿ-ಎಸ್​ಪಿ ಮೈತ್ರಿ ಮಾಡಿಕೊಂಡಿವೆ. ಮೂಲಗಳ ಪ್ರಕಾರ, ರಾಜ್ಯದ 80 ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳಲ್ಲಿ ಬಿಎಸ್​ಪಿ ಸ್ಪರ್ಧಿಸಲಿದ್ದು, ಬಿಎಸ್​ಪಿ -37 ಮತ್ತು ಎಸ್​ಪಿ-36 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಈ ಮಹಾ ಮೈತ್ರಿಯಲ್ಲಿ ಅನೇಕ ಚಿಕ್ಕ ಪಕ್ಷಗಳನ್ನು ಸಹ ಸೇರಿಸಿಕೊಳ್ಳಲಾಗಿದ್ದು, ಆ ಪಕ್ಷಗಳು ಒಟ್ಟು 5 ಕ್ಷೇತ್ರಗಳಲ್ಲಿ ಸ್ಪರ್ಧೆಯಲ್ಲಿವೆ. ಈ ರೀತಿಯಾಗಿ ಮೈತ್ರಿ ಪಕ್ಷಗಳು ಒಟ್ಟು 78 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.

ಮೂಲಗಳ ಪ್ರಕಾರ, ಕಾಂಗ್ರೆಸ್ ಹಿರಿಯ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕ್ಷೇತ್ರಗಳಾದ ಅಮೇಥಿ ಮತ್ತು ರಾಯ್ಬರೇಲಿ ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ಬಿಟ್ಟು ಕೊಟ್ಟಿರುವ ಮಹಾ ಮೈತ್ರಿ ಪಕ್ಷಗಳು ಆ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಆದರೆ ಕಾಂಗ್ರೆಸ್ ಈ ಒಕ್ಕೂಟದ ಭಾಗವಾಗಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಮಹಾಮೈತ್ರಿಯ ಲೆಕ್ಕಾಚಾರ:
1. ಯುಪಿ ಬಿಜೆಪಿಯ ಮಿತ್ರ ಸುಹಲ್ದೇವ್ ಓಂ ಪ್ರಕಾಶ್ ರಾಜ್ಭಾರ್ ಅವರು ಭಾರತೀಯ ಸಮಾಜ ಪಕ್ಷ (ಎಸ್​ಬಿಎಸ್​ಪಿ) ಅಧ್ಯಕ್ಷರು ಕೂಡ ವಿರೋಧ ಪಕ್ಷಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಬಿಎಸ್​ಪಿ-ಎಸ್​ಪಿ ಪಕ್ಷಗಳು ಬಿಎಸ್​ಬಿಎಸ್​ಪಿಗೆ 1 ಸ್ಥಾನವನ್ನು ನೀಡಲಿದೆ. ಡಿಯೋರಿಯಾ ಜಿಲ್ಲೆಯ ಸೇಲಂಪುರ ಲೋಕಸಭಾ ಕ್ಷೇತ್ರವು SBSP ಗೆ ಬಿಟ್ಟುಕೊಡುವ ಸಾಧ್ಯತೆ ಇದೆ.

2. ಗೋರಖ್ಪುರ್ ಫುಲ್ಪುರ್ ಉಪ ಚುನಾವಣೆಯಲ್ಲಿ, ಸಮಾಜವಾದಿ ಪಕ್ಷವು ನಿಶಾದ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ ಮತ್ತು ನಿಶಾದ್ ಪಕ್ಷದ ಅಭ್ಯರ್ಥಿ ಪ್ರವೀಣ್ ನಿಶಾದ್ ಅವರನ್ನು ಎಸ್​ಪಿ ಅಭ್ಯರ್ಥಿಯಾಗಿ ನೇಮಕ ಮಾಡಿತು. ಅದರ ನಂತರ ಎಸ್​ಪಿ ಬಿಜೆಪಿಯನ್ನು ಯೋಗಿ ಅವರ ಜಿಲ್ಲೆಯಲ್ಲಿ ಸೋಲಿಸಿತು. ಎಸ್​ಪಿ-ಬಿಎಸ್​ಪಿ 2019 ರ ಚುನಾವಣೆಯಲ್ಲಿ ನಿಶಾದ್ಗೆ 1 ಸ್ಥಾನ ನೀಡಲಿದೆ. ಬೆನಾರಸ್ನ ಭಾಡೋಹಿ ಸ್ಥಾನವು ನಿಶಾದ್ ಪಕ್ಷಕ್ಕೆ ಹೋಗಬಹುದು.

3. ಎಸ್​ಪಿ-ಬಿಎಸ್​ಪಿ ಉತ್ತರ ಪ್ರದೇಶದ ಜನವಾಡಿ ಪಕ್ಷಕ್ಕೆ 1 ಸ್ಥಾನ ನೀಡಬಹುದೆಂಬ ನಿರೀಕ್ಷೆಯಿದೆ. ಸಂಜಯ್ ಚೌಹಾಣ್ ಅವರ ಜನವಾಡಿ ಪಕ್ಷದ ಪುರ್ವಂಚಲ್ನ ಹಲವಾರು ಜಿಲ್ಲೆಗಳಲ್ಲಿ ಚೌಹಾನ್ ಮತ ಬ್ಯಾಂಕಿನಲ್ಲಿ ವಿಶೇಷ ಪರಿಣಾಮ ಬೀರಲಿದೆ. ಆದರೆ ಈ ಪಕ್ಷದ ಅಭ್ಯರ್ಥಿ ಎಸ್​ಪಿಯ ಚುನಾವಣಾ ಚಿಹ್ನೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ರೀತಿಯಾಗಿ, ಎಸ್​ಪಿಯ 36 ಸ್ಥಾನಗಳಲ್ಲಿ ಅದನ್ನು ಸರಿಹೊಂದಿಸಲಾಗುತ್ತದೆ.

4. ಕೈರಾನಾ ಲೋಕಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಆರ್ಎಲ್ಡಿ ಮೈತ್ರಿ ಮಾಡಿಕೊಂಡಿತ್ತು. ಎಸ್​ಪಿಯ ತಬಸ್ಸುಮ್ ಬೇಗಂ ಅವರಿಗೆ ಆರ್ ಎಲ್ ಡಿ ತನ್ನ ಚಿಹ್ನೆಯೊಂದಿಗೆ ಟಿಕೆಟ್ ನೀಡಿತ್ತು. ಈ ಸ್ಥಾನವು ಆರ್ ಎಲ್ ಡಿ ಪಾಲಾಯಿತು. ಎಸ್​ಪಿ-ಬಿಎಸ್​ಪಿ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ RLD 3 ಸ್ಥಾನಗಳನ್ನು ನೀಡುವ ಸಾಧ್ಯತೆ ಇದೆ. ಮುಜಫರ್ನಗರ, ಬಾಗ್ಪಾತ್ ಮತ್ತು ಅಮ್ರೋಹಾ ಸ್ಥಾನಗಳು ಆರ್ಎಲ್ಡಿ ಕೋಟಾಕ್ಕೆ ಹೋಗಬಹುದು. ಚೌಧರಿ ಅಜಿತ್ ಸಿಂಗ್ ಅವರು ಮುಜಫರ್ನಗರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

5. ಬಿಎಸ್​ಪಿ 37 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಪಶ್ಚಿಮ ಯುಪಿಯಲ್ಲಿ ಹೆಚ್ಚಿನ ಸ್ಥಾನಗಳು ಬಿಎಸ್​ಪಿ ಪಾಲಾಗುವ ನಿರೀಕ್ಷೆಯಿದೆ.  ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಏಕೆಂದರೆ ಪ್ರಸ್ತುತ ಮಾಯಾವತಿ ಯಾವುದೇ ಸದನದ ಸದಸ್ಯರಾಗಿಲ್ಲ. ಸಹರಾನ್ಪುರ ಹಿಂಸಾಚಾರದ ನಂತರ ಮಾಯಾವತಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಮೂಲಗಳ ಪ್ರಕಾರ, ಬಿಎಸ್​ಪಿ ತನ್ನ ಕೋಟಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿ ನಡೆಸಿದೆ.

6. ಎಸ್​ಪಿ 36 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು ಉತ್ತರ ಪ್ರದೇಶದ ಕೇಂದ್ರ ಮತ್ತು ಪೂರ್ವ ಭಾಗಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎನ್ನಲಾಗಿದೆ. ಕಣಜ್ ಲೋಕಸಭಾ ಕ್ಷೇತ್ರದಿಂದ ಅಖಿಲೇಶ್ ಯಾದವ್ ಸ್ಪರ್ಧಿಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವ್ ಮೇನ್ಪುರಿಯಿಂದ ಸ್ಪರ್ಧಿಸಲಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಡಿಂಪಲ್ ಯಾದವ್ ಸ್ಪರ್ಧಿಸುವುದಿಲ್ಲ. 

7. ಹಲವು ಸ್ಥಳಗಳಲ್ಲಿ ರಾಹುಲ್ ಗಾಂಧಿಯವರನ್ನು ಈಗಾಗಲೇ ಪ್ರಧಾನಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಅಖಿಲೇಶ್-ಮಾಯಾವತಿಗೆ ಈ ಬಗ್ಗೆ ಅಸಮಾಧಾನ ಇದ್ದಂತಿದ್ದು, ಹಾಗಾಗಿಯೇ ಬಿಎಸ್​ಪಿ-ಎಸ್​ಪಿ ಮೈತ್ರಿಯಲ್ಲಿ ಕಾಂಗ್ರೆಸ್ ಅನ್ನು ಸೇರಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಇದರ ಹೊರತಾಗಿಯೂ ಇತ್ತೀಚಿಗೆ ನಡೆದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತಿಸ್ಗಢ ಚುನಾವಣೆಗಳಲ್ಲಿ ಎಸ್​ಪಿ ಹಾಗೂ ಬಿಎಸ್​ಪಿ ಪಕ್ಷಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ.

8. ಅಷ್ಟೇ ಅಲ್ಲ, ಉತ್ತರ ಪ್ರದೇಶದಲ್ಲಿ ಬಿಎಸ್​ಪಿ-ಎಸ್​ಪಿ ತಮ್ಮ ಮತ ಬ್ಯಾಂಕ್ ಅನ್ನು ಯಾವುದೇ ರೀತಿಯಲ್ಲೂ ಕಾಂಗ್ರೆಸ್ ಗೆ ಶಿಫ್ಟ್ ಮಾಡಲು ಅವಕಾಶ ನೀಡುವುದಿಲ್ಲ. ಏಕೆಂದರೆ ಈಗಿನ ಬಿಎಸ್​ಪಿ-ಎಸ್​ಪಿ ಮತ ಬ್ಯಾಂಕ್ 30 ವರ್ಷಗಳ ಹಿಂದೆ ಕಾಂಗ್ರೆಸ್ ಮತ ಬ್ಯಾಂಕ್ ಆಗಿತ್ತು. ಮಾಯಾವತಿಯ ದಲಿತ ಮತ ಬ್ಯಾಂಕ್ ಮತ್ತು ಅಖಿಲೇಶ್ ಯಾದವ್-ಮುಸ್ಲಿಂ ಮತ ಬ್ಯಾಂಕ್ ಹೊಂದಿದ್ದಾರೆ. ಮೂಲಗಳ ಪ್ರಕಾರ, ಮಹಾಮೈತ್ರಿಯ ಆರಂಭಿಕ ಚರ್ಚೆಯಲ್ಲಿ ಬಿಎಸ್​ಪಿ-ಎಸ್​ಪಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಗೆ 10 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಹೇಳಿತ್ತು. ಆದರೆ ಕಾಂಗ್ರೆಸ್ 25-30 ಸ್ಥಾನಗಳಿಗೆ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ.

9. ಉತ್ತರ ಪ್ರದೇಶದಲ್ಲಿ ಬಿಎಸ್​ಪಿ-ಎಸ್​ಪಿ ಕಾಂಗ್ರೆಸ್ ಜೊತೆಗಿದೆಯೋ, ಇಲ್ಲವೋ ಎಂಬುದು ಎರಡೂ ಪಕ್ಷಗಳ ಮೈತ್ರಿ ನಡುವೆ ಯಾವುದೇ ವ್ಯತ್ಯಾಸವನ್ನೂ ಉಂಟುಮಾಡುವುದಿಲ್ಲ. ಯುಪಿಯಲ್ಲಿ ಕಾಂಗ್ರೆಸ್ ತನ್ನ ಬಲವನ್ನು ಕಳೆದುಕೊಂಡಿದೆ. ಲೋಕಸಭೆಯ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ತನ್ನ ಹಿಡಿತವನ್ನು ಹೊಂದಿದೆ. ಅದೂ ಕೂಡ ಕುಟುಂಬಕ್ಕಷ್ಟೇ ಸೀಮಿತವಾಗಿದೆ. 2017 ರ ವಿಧಾನಸಭೆ ಚುನಾವಣೆಯಲ್ಲಿ, ಕಾಂಗ್ರೆಸ್ ಕೇವಲ 7 ವಿಧಾನಸಭೆ ಸ್ಥಾನಗಳನ್ನು ಗೆದ್ದುಕೊಂಡಿತು, ಅದು ಅನುಪ್ರಿಯ ಪಟೇಲ್ ಅವರ ಸ್ವಂತ ಪಕ್ಷಕ್ಕಿಂತ ಕಡಿಮೆಯಿತ್ತು. ಯುಪಿ ಯಲ್ಲಿ ಅವರ ಪಕ್ಷದ 9 ಶಾಸಕರು ಗೆದ್ದಿದ್ದಾರೆ.

10. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸಂಘಟನೆಯು ಬಹಳ ದುರ್ಬಲವಾಗಿದೆ. ಯುಪಿಯಲ್ಲಿ ಕಾಂಗ್ರೆಸ್ಗೆ ನೀಡಲಾಗುತ್ತಿರುವ ಸ್ಥಾನಗಳನ್ನು ಬಿಜೆಪಿಯ ಹೋರಾಟ ಸುಲಭವಾಗಲಿದೆ ಎಂದು ಬಿಎಸ್​ಪಿ-ಎಸ್​ಪಿ ಪಕ್ಷಗಳು ಭಾವಿಸಿವೆ. ವಾಸ್ತವವಾಗಿ, ಇಡೀ ಯುಪಿಎ ಯನ್ನು ನೋಡಿದರೆ ಉತ್ತರ ಪ್ರದೇಶದಲ್ಲಿ ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿಜಕ್ಕೂ ಕಾಂಗ್ರೆಸ್ ನಲ್ಲಿ 10 ಕ್ಕಿಂತ ಹೆಚ್ಚು ಅಭ್ಯರ್ಥಿಗಳಿಲ್ಲ. ಯುಪಿ ಯಲ್ಲಿ, 20% ಮುಸ್ಲಿಮರು, 21% ದಲಿತರು, 8% ಯಾದವ್, 5% ಕುರ್ಮಿ, 11% ಬ್ರಾಹ್ಮಣರು, 6% ಠಾಕೂರ್, 25% ಒಬಿಸಿ ಮತ ಬ್ಯಾಂಕ್ ಇದೆ. ಯುಪಿಯಲ್ಲಿ ಕಾಂಗ್ರೆಸ್ ಯಾವುದೇ ಮತ ಬ್ಯಾಂಕ್ ಹೊಂದಿಲ್ಲ. 

Trending News