ಹೈದರಾಬಾದ್ : ಕೊರೊನಾವೈರಸ್ ಪ್ರಕರಣಗಳು ಕಡಿಮೆಯಾಗುತ್ತಿರುವ ಮಧ್ಯೆ, ಕ್ರಮೇಣ ಎಲ್ಲಾ ರಾಜ್ಯಗಳು ಅನ್ಲಾಕ್ ಪ್ರಕ್ರಿಯೆ ಆರಂಭಿಸಿವೆ. ಇಂದಿನಿಂದ ಅಂದರೆ ಭಾನುವಾರದಿಂದ ತೆಲಂಗಾಣದಲ್ಲಿ ಲಾಕ್‌ಡೌನ್ ಕೊನೆಗೊಂಡಿದೆ. ಇದರೊಂದಿಗೆ ಶಾಲಾ ಕಾಲೇಜುಗಳನ್ನುಮತ್ತೆ ಆರಂಭಿಸುವ ನಿರ್ಧಾರಕ್ಕೆ ಬಂದಿದೆ.
ಶಾಲಾ ಕಾಲೇಜು ಪುನರಾರಂಭಕ್ಕೆ ಸರ್ಕಾರ ನಿರ್ಧಾರ :
ಕರೋನವೈರಸ್ (Coronavirus) ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಇದೀಗ, ಜುಲೈ 1 ರಿಂದ ರಾಜ್ಯದಲ್ಲಿ ಲಾಕ್ ಡೌನ್ ಕೊನೆಗೊಳಿಸಲು ತೆಲಂಗಾಣ ಸರ್ಕಾರ (Telangana Govt) ನಿರ್ಧರಿಸಿದೆ. ಇದರೊಂದಿಗೆ, ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಕೂಡಾ ಸರ್ಕಾರ ನಿರ್ಧರಿಸಿದೆ. ಕರೋನಾ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಲಾಕ್‌ಡೌನ್ (Lockdown) ಜಾರಿಯಲ್ಲಿತ್ತು.
ಇದನ್ನೂ ಓದಿ : ನೂತನ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಕಳವಳಕಾರಿ-ಏಮ್ಸ್ ಮುಖ್ಯಸ್ಥ
ಅಧಿಕೃತ ಪ್ರಕಟಣೆ:
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, ರಾಜ್ಯ ಕ್ಯಾಬಿನೆಟ್ ನಲ್ಲಿ ಈ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ತಿಳಿಸಲಾಗಿದೆ. ಅಲ್ಲದೆ, ಲಾಕ್ ಡೌನ್ (lockdown) ಸಮಯದಲ್ಲಿ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ರಾಜ್ಯದಲ್ಲಿ COVID-19 ಪ್ರಕರಣಗಳು ಕಡಿಮೆಯಾಗಿರುವ ಬಗ್ಗೆ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ವರದಿ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸೂಚನೆ ನೀಡಿದ ಶಿಕ್ಷಣ ಇಲಾಖೆ :
ನೆರೆಯ ರಾಜ್ಯಗಳಲ್ಲೂ ಕರೋನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ತೆಲಂಗಾಣ ಕ್ಯಾಬಿನೆಟ್ (Telangana Cabinet) ಹೇಳಿದೆ. ಜೂನ್ 8 ರಂದು ರಾಜ್ಯದ ಲಾಕ್ ಡೌನ್ ಅನ್ನು ಇನ್ನೂ 10 ದಿನಗಳವರೆಗೆ ವಿಸ್ತರಿಸಲು ಕ್ಯಾಬಿನೆಟ್ ನಿರ್ಧರಿಸಿತ್ತು. ಶಿಕ್ಷಣ ಇಲಾಖೆಯು ಜುಲೈ 1 ರಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಸೂಚನೆಗಳನ್ನು ನೀಡಿದೆ. ಅಂದರೆ ಜುಲೈ ಒಂದರಿಂದ ಆಫ್ ಲೈನ್ ತರಗತಿಗಳು ನಡೆಯಲಿವೆ.
ಇದನ್ನೂ ಓದಿ : Ministry of Education: ಮನೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿ, ಪೋಷಕರಿಗೆ ಶಿಕ್ಷಣ ಸಚಿವಾಲಯದ ಮಾರ್ಗಸೂಚಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.