ನವದೆಹಲಿ: ಕಾಂಗ್ರೆಸ್ ನಾಯಕತ್ವವು ಟೀಕೆಗೆ ಮುಕ್ತವಾಗಿಲ್ಲ ಎಂದು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಿಂದ ಹೊಸ ಪಕ್ಷವನ್ನು ಪ್ರಾರಂಭಿಸಲಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ಅವರ ಈ ಹೇಳಿಕೆ ಬಂದಿದೆ.ಕಳೆದ ವರ್ಷ ಪಕ್ಷದ ಸಂಘಟನೆಯಲ್ಲಿ ವ್ಯಾಪಕ ಸುಧಾರಣೆಗಳನ್ನು ಕೋರಿ ಕಳೆದ ವರ್ಷ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ 23 ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾದ ಆಜಾದ್ ರಾಗಿದ್ದರು.
ಇದನ್ನೂ ಓದಿ : ಕೋಳಿಯನ್ನು ದುರ್ಬಲ ಎಂದುಕೊಂಡು ಜಗಳಕ್ಕೆ ನಿಂತ ಬೆಕ್ಕು, ಆದರೆ ಆಗಿದ್ದೇನು ? ಫೈಟಿಂಗ್ ನ full video ಇಲ್ಲಿದೆ
"ಆದರೆ ರಾಜಕೀಯದಲ್ಲಿ ಮುಂದೆ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಜೀ ಅವರ ಕಾಲದಲ್ಲಿ, ವಿಷಯಗಳು ತಪ್ಪಾದಾಗ ಪ್ರಶ್ನಿಸಲು ನಮಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲಾಯಿತು.
'ಅವರು ಎಂದಿಗೂ ಟೀಕೆಗಳನ್ನು ಲೆಕ್ಕಿಸುವುದಿಲ್ಲ. ಅವರು ಅದನ್ನು ಆಕ್ರಮಣಕಾರಿಯಾಗಿ ನೋಡುವುದಿಲ್ಲ. ಇಂದು ನಾಯಕತ್ವವು ಅದನ್ನು ಆಕ್ರಮಣಕಾರಿಯಾಗಿ ನೋಡುತ್ತದೆ," ಎಂದು ಆಜಾದ್ ಹೇಳಿದರು.
ಇದನ್ನೂ ಓದಿ : ವಿಮಾನದಲ್ಲಿಯೇ ಅಮೇರಿಕಾ ಪ್ರಯಾಣಿಕನ ಸಾವು, ದೆಹಲಿಗೆ ಹಿಂತಿರುಗಿದ ಏರ್ ಇಂಡಿಯಾ
ಅವರು ಹೊಸ ಪಕ್ಷವನ್ನು ರಚಿಸುತ್ತಿದ್ದಾರೆ ಎಂಬ ಊಹಾಪೋಹದ ಬಗ್ಗೆ ಕೇಳಿದ ಪ್ರಶ್ನೆಗೆ, "ಇಲ್ಲ-ಇಲ್ಲ. ಕಳೆದ ಎರಡು ವರ್ಷಗಳಿಂದ ಜನರು ಮತ್ತು (ಕಾಂಗ್ರೆಸ್) ನಾಯಕತ್ವದ ನಡುವೆ ಸಂಪರ್ಕ ಕಡಿತಗೊಂಡಿದೆ" ಎಂದು ಉತ್ತರಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.