ಮಧ್ಯಪ್ರದೇಶದಲ್ಲಿ ಅಧಿಕಾರದ ತವಕ, ಬಿಜೆಪಿಯಲ್ಲಿ ತಿಕ್ಕಾಟ

ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಇಬ್ಬರು ರಾಜ್ಯ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ಬೆಳಕಿಗೆ ಬಂದ ನಂತರ ಬಿಜೆಪಿಗೆ ನಾಟಕೀಯ ತಿರುವು ನೀಡಿದೆ.ಜ್ಯೋತಿರಾದಿತ್ಯ ಸಿಂಧಿಯಾ ಈಗ ಬಿಜೆಪಿಗೆ ಸೇರುತ್ತಿರುವುದರಿಂದಾಗಿ ಅಧಿಕಾರದ ಹಂಬಲದಲ್ಲಿರುವ ಬಿಜೆಪಿ ನಾಯಕರ ನಡುವೆ ತಿಕ್ಕಾಟ ಆರಂಭವಾಗಿದೆ.

Last Updated : Mar 11, 2020, 03:35 PM IST
 ಮಧ್ಯಪ್ರದೇಶದಲ್ಲಿ ಅಧಿಕಾರದ ತವಕ, ಬಿಜೆಪಿಯಲ್ಲಿ ತಿಕ್ಕಾಟ  title=
file photo

ನವದೆಹಲಿ: ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಇಬ್ಬರು ರಾಜ್ಯ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ಬೆಳಕಿಗೆ ಬಂದ ನಂತರ ಬಿಜೆಪಿಗೆ ನಾಟಕೀಯ ತಿರುವು ನೀಡಿದೆ.ಜ್ಯೋತಿರಾದಿತ್ಯ ಸಿಂಧಿಯಾ ಈಗ ಬಿಜೆಪಿಗೆ ಸೇರುತ್ತಿರುವುದರಿಂದಾಗಿ ಅಧಿಕಾರದ ಹಂಬಲದಲ್ಲಿರುವ ಬಿಜೆಪಿ ನಾಯಕರ ನಡುವೆ ತಿಕ್ಕಾಟ ಆರಂಭವಾಗಿದೆ.

ಜ್ಯೋತಿರಾದಿತ್ಯ ಸಿಂಧಿಯಾ ಅವರು 21 ಶಾಸಕರ ಜೊತೆಗೆ ಕಾಂಗ್ರೆಸ್ ನಿಂದ ನಿರ್ಗಮಿಸಿದ್ದರಿಂದಾಗಿ, ಬಹುಮತ ಕೊರತೆ ಅನುಭವಿಸುತ್ತಿರುವ ಕಮಲ್ ನಾಥ್ ಅವರ 15 ತಿಂಗಳ ಕಾಂಗ್ರೆಸ್ ಸರ್ಕಾರ ಪತನಕ್ಕೆ ಸಿದ್ಧವಾಗಿದೆ.ಆದರೆ, ಶಾಸಕ ನರೋತ್ತಮ್ ಮಿಶ್ರಾ ಮತ್ತು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಬೆಂಬಲಿಗರ ನಡುವೆ ತಿಕ್ಕಾಟ ಆರಂಭವಾಗಿದ್ದು, ಈ ಇಬ್ಬರೂ ನಾಯಕರು ಕಮಲ್ ನಾಥ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳಿಗೆ ಪೂರಕವಾಗಿದ್ದರು ಎನ್ನಲಾಗಿದೆ.

ಸುದ್ದಿ ಮೂಲಗಳ ಪ್ರಕಾರ, ಮಿಶ್ರಾ ಅವರನ್ನು ಬೆಂಬಲಿಸುವ ಘೋಷಣೆಗಳನ್ನು ಮಂಗಳವಾರ ಕೂಗಲಾಯಿತು ಮತ್ತು ಕಾಂಗ್ರೆಸ್ ಸರ್ಕಾರವನ್ನು ಸುತ್ತುವರೆದಿರುವ ಗೊಂದಲದಲ್ಲಿ ಚೌಹಾನ್ ಅವರ ಪಾತ್ರದ ಬಗ್ಗೆ ಪ್ರಶ್ನೆಗಳು ಕೇಳಿಬಂದಿವೆ ಎನ್ನಲಾಗಿದೆ.ಮಿಶ್ರಾ ಮತ್ತು ಚೌಹಾನ್ ಇಬ್ಬರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ಪಾತ್ರವನ್ನು ಪದೇ ಪದೇ ನಿರಾಕರಿಸಿದ್ದಾರೆ, ಇದು ಕೇವಲ ಕಾಂಗ್ರೆಸ್ ನ ಆಂತರಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಕಳೆದ ವಾರ ಮೂಲಗಳು ನರೋತ್ತಮ್ ಮಿಶ್ರಾ ಮತ್ತು ಶಿವರಾಜ್ ಸಿಂಗ್ ಚೌಹಾನ್ ಅವರು ಮಧ್ಯಪ್ರದೇಶ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು ರೂಪಿಸಿದ್ದಾರೆ ಎಂದು ತಿಳಿಸಿದ್ದಾರೆ. ಹೋಳಿ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವುದು ನಾಯಕರ ಉದ್ದೇಶವಾಗಿತ್ತು, ಈ ಹಿನ್ನಲೆಯಲ್ಲಿ ಈಗ ಈ ಆಪರೇಶನ್ ಗೆ ರಂಗಪಂಚಮಿ ಎಂದು ಹೆಸರಿಸಲಾಗಿದೆ.

ಇನ್ನೊಂದೆಡೆ ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ' ನಾನು ಯಾವತ್ತೂ ಆರೋಪಗಳನ್ನು ಮಾಡಿಲ್ಲ (ಆದರೆ) ಶಿವರಾಜ್ ಸಿಂಗ್ ಚೌಹಾನ್ ಮತ್ತು ನರೋತ್ತಮ್ ಮಿಶ್ರಾ ಇಬ್ಬರೂ ಮುಖ್ಯಮಂತ್ರಿಯಾಗುವ ಬಗ್ಗೆ ವಿವಾದವನ್ನು ಹೊಂದಿದ್ದರು. ಈಗ ಒಬ್ಬರು ಮುಖ್ಯಮಂತ್ರಿಯಾಗುತ್ತಾರೆ, ಇನ್ನೊಬ್ಬರು ಉಪಮುಖ್ಯಮಂತ್ರಿ ಎಂದು ನಿರ್ಧರಿಸಲಾಗಿದೆ" ಎಂದರು.ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಈ ಹಿಂದೆ ಮೂರು ಅವಧಿಗೆ ಸೇವೆ ಸಲ್ಲಿಸಿದ ಶಿವರಾಜ್ ಸಿಂಗ್ ಚೌಹಾನ್, ಕಾಂಗ್ರೆಸ್ ಅನ್ನು ಉರುಳಿಸುವಲ್ಲಿ ಬಿಜೆಪಿ ಯಶಸ್ವಿಯಾದರೆ ಮತ್ತೆ ಸಿಎಂ ಹುದ್ದೆ ಅಲಂಕರಿಸಲು ಸಲಹೆ ನೀಡಲಾಗಿದೆ ಎನ್ನಲಾಗಿದೆ.

ಇಬ್ಬರು ಮಂತ್ರಿಗಳು ಸೇರಿದಂತೆ ಈ ಹತ್ತು ಶಾಸಕರು ಬಿಜೆಪಿಗೆ ಸೇರಲು ಮನಸ್ಸಿಲ್ಲವೆಂದು ಸೂಚಿಸಿದ್ದಾರೆ .ಮೂಲಗಳ ಪ್ರಕಾರ, ಶಾಸಕರು ತಾವು ಕರ್ನಾಟಕದ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದು, ಇಂದು ಬಿಜೆಪಿಗೆ ಸೇರ್ಪಡೆಗೊಂಡಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕಾಂಗ್ರೆಸ್ ಜೊತೆಗಿನ ಆಂತರಿಕ ಹೋರಾಟದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹೋಳಿ ದಿನದಂದು ರಾಜ್ಯದ ಕಮಲ್ ನಾಥ್ ಸರ್ಕಾರವು ನಾಲ್ಕು ಬಾರಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರ ರಾಜೀನಾಮೆಯಿಂದ ಆಘಾತಕ್ಕೊಳಗಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ ಸಿಂಧಿಯಾ ಅವರು ಬಿಜೆಪಿಗೆ ಸೇರಿಕೊಂಡು ಕೇಂದ್ರ ಸಚಿವ ಸಂಪುಟ ಮತ್ತು ರಾಜ್ಯಸಭಾ ಹುದ್ದೆಯನ್ನು ಪಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.

 

Trending News