ಸೆಪ್ಟೆಂಬರ್‌ 1 ರಿಂದ ಸಾರ್ವಜನಿಕರ ಜೀವನದ ಮೇಲೆ ಪರಿಣಾಮ ಬೀರುವ 4 ಪ್ರಮುಖ ಬದಲಾವಣೆಗಳು

ಎಲ್‌ಪಿಜಿ ದರ ಮತ್ತು ವಿಮಾನ ಪ್ರಯಾಣ ದರವನ್ನು ಹೆಚ್ಚಿಸುವ ಸಾಧ್ಯತೆಯೂ ಹೆಚ್ಚಾಗಿದೆ.

Written by - Yashaswini V | Last Updated : Aug 28, 2020, 07:39 AM IST
  • ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನ ಪ್ರಯಾಣ ದುಬಾರಿ
  • ಎಲ್‌ಪಿಜಿ (LPG) ಸಿಲಿಂಡರ್‌ನ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ
  • ದೆಹಲಿಯಲ್ಲಿ ಮೆಟ್ರೋ ಸೇವೆ ಪ್ರಾರಂಭವಾಗಬಹುದು.
ಸೆಪ್ಟೆಂಬರ್‌ 1 ರಿಂದ ಸಾರ್ವಜನಿಕರ ಜೀವನದ ಮೇಲೆ ಪರಿಣಾಮ ಬೀರುವ 4 ಪ್ರಮುಖ ಬದಲಾವಣೆಗಳು  title=

ನವದೆಹಲಿ: ಅನ್ಲಾಕ್ -4 ಸೆಪ್ಟೆಂಬರ್ 1, 2020 ರಿಂದ ಪ್ರಾರಂಭವಾಗಲಿದೆ. ಲಾಕ್‌ಡೌನ್‌ (Lockdown) ನಂತರ ಕೇಂದ್ರ ಸರ್ಕಾರ ನಿಧಾನವಾಗಿ ಅನ್ಲಾಕ್ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಸೆಪ್ಟೆಂಬರ್ 1 ರಿಂದ ಬರುವ ಬದಲಾವಣೆಗಳಲ್ಲಿ ಶಾಲೆಗಳನ್ನು ತೆರೆಯುವುದರಿಂದ ಹಿಡಿದು ಮೆಟ್ರೋ ರೈಲುಗಳನ್ನು ಓಡಿಸುವವರೆಗೆ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೇ. ಎಲ್‌ಪಿಜಿ ದರ ಮತ್ತು ವಿಮಾನ ಪ್ರಯಾಣ ದರವನ್ನು ಹೆಚ್ಚಿಸುವ ಸಾಧ್ಯತೆಯೂ ಹೆಚ್ಚಾಗಿದೆ.

1. ದುಬಾರಿಯಾಗಲಿದೆ ವಿಮಾನ ಪ್ರಯಾಣ:
ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನ ಪ್ರಯಾಣ ದುಬಾರಿಯಾಗಲಿದೆ. ವಾಸ್ತವವಾಗಿ ನಾಗರಿಕ ವಿಮಾನಯಾನ ಸಚಿವಾಲಯವು 2020ರ ಸೆಪ್ಟೆಂಬರ್ 1 ರಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರಿಂದ ಹೆಚ್ಚಿನ ವಾಯುಯಾನ ಭದ್ರತಾ ಶುಲ್ಕವನ್ನು (ಎಎಸ್ಎಫ್) ವಿಧಿಸಲು ನಿರ್ಧರಿಸಿದೆ. ಇದು ವಿಮಾನ ಪ್ರಯಾಣವನ್ನು ದುಬಾರಿಯನ್ನಾಗಿ ಮಾಡುತ್ತದೆ. ಡಿಜಿಸಿಎ (DGCA) ಪ್ರಕಾರ ಮುಂದಿನ ತಿಂಗಳಿನಿಂದ ದೇಶೀಯ ವಾಯು ಪ್ರಯಾಣಿಕರು ಎಎಸ್ಎಫ್ ಆಗಿ 150 ರೂ. ಬದಲಿಗೆ 160 ರೂ. ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರು ಸೆಪ್ಟೆಂಬರ್ 1 ರಿಂದ 4.85 ಡಾಲರ್ ಬದಲು ಎಎಸ್ಎಫ್ ಆಗಿ 5.2 ಡಾಲರ್ ಪಾವತಿಸಬೇಕಾಗುತ್ತದೆ.

2. ಎಲ್‌ಪಿಜಿ ಸಿಲಿಂಡರ್‌:
ಎಲ್‌ಪಿಜಿ (LPG) ಸಿಲಿಂಡರ್‌ನ ಬೆಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಪ್ರತಿ ತಿಂಗಳ ಮೊದಲ ದಿನಾಂಕದಂದು ಸಿಲಿಂಡರ್‌ನ ಬೆಲೆ ಬದಲಾಗುತ್ತದೆ. ಪೆಟ್ರೋಲ್ ಬೆಲೆ ಹೆಚ್ಚಳದಿಂದಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಎಲ್‌ಪಿಜಿ ಸಿಲಿಂಡರ್‌ ದರ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.

3. ದೆಹಲಿ ಮೆಟ್ರೋ
ದೆಹಲಿಯಲ್ಲಿ ಮೆಟ್ರೋ (Delhi Metro) ಸೇವೆ ಪ್ರಾರಂಭವಾಗಬಹುದು. ವಾಸ್ತವವಾಗಿ ದೆಹಲಿ ಜನತೆಯ ಜೀವನಾಡಿ ಆಗಿರುವ ಮೆಟ್ರೊವನ್ನು ಚಲಾಯಿಸಲು ಅವಕಾಶ ನೀಡುವಂತೆ  ಸಾರ್ವಜನಿಕರು ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ. ಡಿಎಂಆರ್‌ಸಿ (DMRC) ಸಹ ಎಲ್ಲಾ ಸಿದ್ಧತೆಗಳನ್ನು ಮಾಡಿದೆ. ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಬಂದ ಕೂಡಲೇ ಮೆಟ್ರೋ ಸೇವೆ ಪ್ರಾರಂಭವಾಗಲಿದೆ.

4. ಶಾಲಾ ಕಾಲೇಜು
ಶಾಲೆಗಳು ಮತ್ತು ಕಾಲೇಜುಗಳನ್ನು ಸೆಪ್ಟೆಂಬರ್‌ನಲ್ಲಿ ತೆರೆಯುವ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಬಹುದು. ಆದರೆ, ದೆಹಲಿ, ಯುಪಿ ಸೇರಿದಂತೆ ಇತರ ರಾಜ್ಯಗಳು ಇದಕ್ಕೆ ಸಿದ್ಧವಾಗಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ತಮ್ಮ ರಾಜ್ಯದ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚುವಂತೆ ಅವರು ಕೋರಿದ್ದಾರೆ.
 

Trending News