ಮೊಬೈಲ್‌ನಿಂದ ರೇಷನ್ ಕಾರ್ಡ್‌ಗಾಗಿ ಈ ರೀತಿ ಸಲ್ಲಿಸಿ ಅರ್ಜಿ

ನೀವು ಇನ್ನೂ ಪಡಿತರ ಚೀಟಿ ಹೊಂದಿಲ್ಲದಿದ್ದರೆ, ನೀವು ಈಗ ಅದನ್ನು ಆನ್‌ಲೈನ್‌ನಲ್ಲಿ  (Apply online for ration card)ತಯಾರಿಸಬಹುದು. 

Written by - Yashaswini V | Last Updated : Jun 6, 2020, 10:05 AM IST
ಮೊಬೈಲ್‌ನಿಂದ ರೇಷನ್ ಕಾರ್ಡ್‌ಗಾಗಿ ಈ ರೀತಿ ಸಲ್ಲಿಸಿ ಅರ್ಜಿ  title=

ನವದೆಹಲಿ: ಆಧಾರ್ ಮತ್ತು ಪ್ಯಾನ್ ಕಾರ್ಡಿನಂತೆ ರೇಷನ್ ಕಾರ್ಡ್ (Ration Card) ಕೂಡ ದೇಶದ ನಾಗರಿಕರಿಗೆ ಒಂದು ಪ್ರಮುಖ ದಾಖಲೆಯಾಗಿದೆ. ಈ ಕಾರ್ಡ್ ಸಹಾಯದಿಂದ ಸಾರ್ವಜನಿಕರಿಗೆ ಪಡಿತರ ಸಿಗುತ್ತದೆ. ಮತ್ತೊಂದೆಡೆ ಇದು ಗುರುತಿನ ಚೀಟಿಯಾಗಿಯೂ ಕಾರ್ಯನಿರ್ವಹಿಸುತ್ತದೆ. 

ಏತನ್ಮಧ್ಯೆ ಜೂನ್ 1ರಿಂದ 'ಒನ್ ನೇಷನ್ ಒನ್ ರೇಷನ್ ಕಾರ್ಡ್' (One Nation One Ration Card) ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯದ ಪಡಿತರ ಚೀಟಿ ಹೊಂದಿರುವವರು ಇತರೆ ರಾಜ್ಯದಲ್ಲೂ ಪಡಿತರವನ್ನು ಪಡೆಯಬಹುದು. ಉದಾಹರಣೆಗೆ ಕರ್ನಾಟಕದ ಪಡಿತರ ಚೀಟಿ ಪಡೆದಿರುವವರು ಪಂಜಾಬ್ ನಲ್ಲಿಯೂ ಪಡಿತರವನ್ನು ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಇನ್ನೂ ಪಡಿತರ ಚೀಟಿ ಮಾಡಿಸದಿದ್ದರೆ, ಮೊಬೈಲ್ ಮೂಲಕ ನೀವು ಸುಲಭವಾಗಿ ಪಡಿತರ ಚೀಟಿ ಹೇಗೆ ಪಡೆಯಬಹುದು ಎಂದು ನಾವು ನಿಮಗೆ ತಿಳಿಸುತ್ತೇವೆ.

ನೀವೂ ಸಹ ಪಡಿತರ ಚೀಟಿ ಹೊಂದಿಲ್ಲವೇ, ಹಾಗಿದ್ದರೆ ಆನ್‌ಲೈನ್‌ನಲ್ಲಿ ಈ ರೀತಿಯಲ್ಲಿ ಅರ್ಜಿ ಸಲ್ಲಿಸಿ

ನೀವು ಇನ್ನೂ ಪಡಿತರ ಚೀಟಿ ಹೊಂದಿಲ್ಲದಿದ್ದರೆ, ನೀವು ಈಗ ಅದನ್ನು ಆನ್‌ಲೈನ್‌ನಲ್ಲಿ  (Apply online for ration card) ತಯಾರಿಸಬಹುದು. ಇದಕ್ಕಾಗಿ ವೆಬ್‌ಸೈಟ್ ಅನ್ನು ಎಲ್ಲಾ ರಾಜ್ಯಗಳು ಪ್ರಾರಂಭಿಸಿವೆ. ಯಾವುದೇ ರಾಜ್ಯದ ಸ್ಥಳೀಯರ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ರೇಷನ್ ಕಾರ್ಡ್ ಅನ್ನು ಎರಡು ಪ್ರಕಾರಗಳಿಂದ ಮಾಡಲಾಗಿದೆ.

ಇದಕ್ಕಾಗಿ ವೆಬ್‌ಸೈಟ್ ಅನ್ನು ಎಲ್ಲಾ ರಾಜ್ಯಗಳು ಪ್ರಾರಂಭಿಸಿವೆ. ಯಾವುದೇ ರಾಜ್ಯದ ಸ್ಥಳೀಯರ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ರೇಷನ್ ಕಾರ್ಡ್ ಅನ್ನು ಎರಡು ಪ್ರಕಾರಗಳಿಂದ ಮಾಡಲಾಗಿದೆ.

ಈ ಸಮಯದಲ್ಲಿ ದೇಶದಲ್ಲಿ ಎರಡು ವರ್ಗದ ಪಡಿತರ ಚೀಟಿಗಳಿವೆ. ಒಂದು ಬಿಪಿಎಲ್ ವರ್ಗ ಮತ್ತು ಇನ್ನೊಂದು ಎಪಿಎಲ್ ವರ್ಗ. ಆದಾಯದ ಪ್ರಕಾರ ನೀವು ಯಾವ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನೀವು ಆಯ್ಕೆ ಮಾಡಬಹುದು.

ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಘೋಷಣೆ: ಪಡಿತರ ಚೀಟಿ ಇಲ್ಲದಿದ್ದರೂ ಸಿಗಲಿದೆ ಸೌಲಭ್ಯ

ನೀವು ಮೊದಲು ನಿಮ್ಮ ರಾಜ್ಯದ ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕು. ಪಡಿತರ ಚೀಟಿ ಮಾಡಲು ಆಧಾರ್ ಕಾರ್ಡ್ (Aadhaar Card), ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅನ್ನು ಐಡಿ ಪುರಾವೆಯಾಗಿ ನೀಡಬಹುದು. ಈ ಕಾರ್ಡ್ ಇಲ್ಲದಿದ್ದರೆ ಸರ್ಕಾರ ನೀಡುವ ಯಾವುದೇ ಐ-ಕಾರ್ಡ್, ಹೆಲ್ತ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ನೀಡಬಹುದು.

ನೀವು ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಜೊತೆಗೆ ಐದರಿಂದ 45 ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಿದ ನಂತರ ಅದನ್ನು ಕ್ಷೇತ್ರ ಪರಿಶೀಲನೆಗಾಗಿ ಕಳುಹಿಸಲಾಗುತ್ತದೆ. ಅಧಿಕಾರಿ ಫಾರ್ಮ್‌ನಲ್ಲಿ ಭರ್ತಿ ಮಾಡಿದ ಮಾಹಿತಿಯನ್ನು ಪರಿಶೀಲಿಸಿ ಅದನ್ನು ದೃಢಪಡಿಸುತ್ತಾರೆ.

ಮೊಟ್ಟ ಮೊದಲ ಬಾರಿಗೆ ಪ್ರಾರಂಭವಾಗಿದೆ 'ಒಂದು ದೇಶ, ಒಂದು ಪಡಿತರ ಚೀಟಿ' ಯೋಜನೆ; ಇದರ ಲಾಭ ಏನು ಗೊತ್ತಾ?

ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ. ವಿಚಾರಣೆ ವೇಳೆ ಯಾವುದೇ ತೊಂದರೆ ಇಲ್ಲದಿದ್ದರೆ 30 ದಿನಗಳಲ್ಲಿ ಪಡಿತರ ಚೀಟಿ ನೀಡಲಾಗುತ್ತದೆ. ಇದಲ್ಲದೆ ಅರ್ಜಿದಾರರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಸಾಮಾನ್ಯ ಸೇವಾ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಸಬಹುದು.

ಪಡಿತರ ಚೀಟಿ ಸೌಲಭ್ಯವನ್ನು ನೀಡಲು ಎಲ್ಲಾ ರಾಜ್ಯಗಳು ಪೋರ್ಟಲ್‌ಗಳನ್ನು ಸ್ಥಾಪಿಸಿವೆ. ದೇಶಾದ್ಯಂತ ಸರ್ಕಾರವು ಲಾಕ್ ಡೌನ್ ಸಮಯದಲ್ಲಿ 80 ಮಿಲಿಯನ್ ಬಡವರಿಗೆ ಉಚಿತ ಪಡಿತರವನ್ನು ನೀಡುತ್ತಿದೆ. ಏಪ್ರಿಲ್, ಮೇ, ಜೂನ್ ಮೂರು ತಿಂಗಳುಗಳಿಗೆ 5 ಕೆಜಿ ಹೆಚ್ಚುವರಿ ಪಡಿತರವನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ. ಈ ಗುಣಮಟ್ಟದ ಪಡಿತರ ಪ್ರಸ್ತುತ ಮಿತಿಗಿಂತ ಹೆಚ್ಚಾಗಿದೆ.
 

Trending News