close

News WrapGet Handpicked Stories from our editors directly to your mailbox

35 ವರ್ಷಗಳಿಂದ ಈ ವ್ಯಕ್ತಿ ಹಣವನ್ನೇ ಮುಟ್ಟಿಲ್ಲ!

35 ವರ್ಷದ ಕಮಲ್ ಎಂಬಾತ ಎಂದೂ ಕೂಡ ಹಣವನ್ನೇ ಮುಟ್ಟಿಲ್ಲ. ಈತ ದುಡ್ಡನ್ನು ನೋಡಲೂ ಇಷ್ಟ ಪಡುವುದಿಲ್ಲ.  

Updated: Sep 18, 2019 , 04:41 PM IST
35 ವರ್ಷಗಳಿಂದ ಈ ವ್ಯಕ್ತಿ ಹಣವನ್ನೇ ಮುಟ್ಟಿಲ್ಲ!
Representational Image

ನವದೆಹಲಿ: ಇಂದಿನ ಕಾಲದಲ್ಲಿ, ಹಣವಿಲ್ಲದೆ ನಾವು ಏನನ್ನೂ ಯೋಚಿಸಲು ಸಾಧ್ಯವಿಲ್ಲ. ಸಣ್ಣ ವಿಷಯಗಳಿಗೂ ಸಹ ನಮಗೆ ಹಣ ಅತ್ಯಗತ್ಯ. ಇಂದಿನ ಕಾಲದಲ್ಲಿ, ಹಣವು ಮನುಷ್ಯನ ಮೊದಲ ಅವಶ್ಯಕತೆಯಾಗಿದೆ, ಆದರೆ ಮಧ್ಯಪ್ರದೇಶದ ಬಾರ್ವಾನಿಯ ಸೆಂಧ್ವಾದಲ್ಲಿ, ಹಣವನ್ನು ನೋಡುವುದನ್ನು ದ್ವೇಷಿಸುವ ವ್ಯಕ್ತಿಯಿದ್ದಾರೆ. ಹಣಕ್ಕೆ ಈತ ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ. ಮಾತ್ರವಲ್ಲ, ಹಣ ನೋಡಿದರೇ ಸಾಕು ಈತನಿಗೆ ಕೋಪ ಬರುತ್ತದೆ. ಬಾರ್ವಾನಿ ನಿವಾಸಿ ಕಮಲ್, ಹಣವನ್ನು ನೋಡಿ ಕೋಪಗೊಳ್ಳುತ್ತಾನೆ. ಇದರ ಹೊರತಾಗಿಯೂ, ಈತ ಹಣ್ಣಿನ ವ್ಯಾಪಾರ ಮಾಡುತ್ತಿದ್ದು, ಅದರಲ್ಲಿ ಯಶಸ್ವಿಯಾಗಿದ್ದಾರೆ.

35 ವರ್ಷದ ಕಮಲ್ ಎಂಬಾತ ಎಂದೂ ಕೂಡ ಹಣವನ್ನೇ ಮುಟ್ಟಿಲ್ಲ. ದುಡ್ಡನ್ನು ನೋಡಿದರೇ ಗೊಂದಲಕ್ಕೊಳಗಾಗುವ ಈತ ದುಡ್ಡನ್ನು ನೋಡಲೂ ಇಷ್ಟ ಪಡುವುದಿಲ್ಲ ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿ ಕಮಲ್ ಸಾಕಷ್ಟು ತೊಂದರೆ ಎದುರಿಸಿದ್ದಾರೆ. ಆದರೂ ಅವರಿಗೆ ಹಣವನ್ನು ಮುಟ್ಟಬೇಕೆಂದು ಅನಿಸುವುದಿಲ್ಲ. ಕಮಲ್ ಅವರಿಗೆ ವಿವಾಹವಾಗಿ 15 ವರ್ಷಗಳು ಕಳೆದಿವೆ. ಆದರೆ ಪತಿಗೆ ಹಣ ಇಷ್ಟವಾಗದ ಕಾರಣ ಆಕೆ ಕೂಡ ತನ್ನ ಬಳಿ ಒಂದು ಪೈಸೆಯನ್ನೂ ಇಟ್ಟುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಕಮಲ್ ಬಾಲ್ಯದಿಂದಲೂ ಇದೇ ರೀತಿ ಇದ್ದಾರೆ ಎಂದು ಕಮಲ್ ಅವರ ಸ್ನೇಹಿತರು ಹೇಳುತ್ತಾರೆ. ಆತ ಬಾಲ್ಯದಲ್ಲಿದ್ದಾಗಲೂ ಯಾರಾದರೂ ಆತನಿಗೆ ಹಣ ನೀಡಿದರೆ ಅವರನ್ನೇ ಹೊಡೆಯುತ್ತಿದ್ದನು. ಕಮಲ್ ತನ್ನ ಹಣ್ಣಿನ ಅಂಗಡಿಯಲ್ಲಿ ಒಬ್ಬ ಹುಡುಗನನ್ನು ಇಟ್ಟುಕೊಂಡಿದ್ದಾನೆ. ಆ ಹುಡುಗ ಕಮಲ್ ಅವರ ಹಣದ ವ್ಯವಹಾರವನ್ನು ನೋಡಿಕೊಳ್ಳುತ್ತಾನೆ ಎಂದು ಸ್ನೇಹಿತರೊಬ್ಬರು ತಿಳಿಸಿದ್ದಾರೆ. 

ಕಮಲ್ ಅವರ ಅತ್ತಿಗೆ ಮಾತನಾಡಿ ನಾನು 24 ವರ್ಷಗಳಿಂದ ಅವನನ್ನು ನೋಡುತ್ತಿದ್ದೇನೆ. ಕಮಲ್ ಎಂದೂ ದುಡ್ಡನ್ನು ಮುಟ್ಟಿದವನಲ್ಲ. ನಾವು ಈ ಬಗ್ಗೆ ಪಂಡಿತ್‌ಜಿಯನ್ನು ಕೇಳಿದೆವು. ಕಮಲ್ ಹಿಂದಿನ ಜನ್ಮದಲ್ಲಿ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದರು. ಆದ್ದರಿಂದ ಅವರು ಹಣವನ್ನು ಮುಟ್ಟುವುದಿಲ್ಲ ಎಂದವರು ಹೇಳಿರುವುದಾಗಿ ಅವರು ತಿಳಿಸಿದರು.