ಪಂಚರಾಜ್ಯ ಫಲಿತಾಂಶ: 1.74 ಲಕ್ಷ ಇವಿಎಂನಲ್ಲಿರುವ 8,500 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ..!

ಐದು ರಾಜ್ಯಗಳ 8,500 ಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯ 1.74 ಲಕ್ಷ ಇವಿಎಂಗಳಲ್ಲಿ ಅಡಗಿರುವ ಭವಿಷ್ಯ ಇಂದು ನಿರ್ಧಾರವಾಗಲಿದೆ.12 ಗಂಟೆ ವೇಳೆಗೆ ಚುನಾವಣಾ ಫಲಿತಾಂಶ ಫಲಿತಾಂಶದ ಚಿತ್ರಣ ಹೊರಬಿಳಲಿದೆ ಎಂದು ಹೇಳಲಾಗುತ್ತಿದೆ.

Last Updated : Dec 11, 2018, 07:21 AM IST
ಪಂಚರಾಜ್ಯ ಫಲಿತಾಂಶ: 1.74 ಲಕ್ಷ ಇವಿಎಂನಲ್ಲಿರುವ 8,500 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ..! title=

ನವದೆಹಲಿ: ಐದು ರಾಜ್ಯಗಳ 8,500 ಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯ 1.74 ಲಕ್ಷ ಇವಿಎಂಗಳಲ್ಲಿ ಅಡಗಿರುವ ಭವಿಷ್ಯ ಇಂದು ನಿರ್ಧಾರವಾಗಲಿದೆ.12 ಗಂಟೆ ವೇಳೆಗೆ ಚುನಾವಣಾ ಫಲಿತಾಂಶ ಫಲಿತಾಂಶದ ಚಿತ್ರಣ ಹೊರಬಿಳಲಿದೆ ಎಂದು ಹೇಳಲಾಗುತ್ತಿದೆ.

ಎಲೆಕ್ಟ್ರಾನಿಕ್ ಮತದಾನದ ಯಂತ್ರಗಳು  ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ಮಿಜೋರಾಂ ಮತ್ತು ತೆಲಂಗಾಣ ರಾಜ್ಯಗಳಲ್ಲಿ 670ಕ್ಕೂ ಹೆಚ್ಚಿನ ಕೊಠಡಿಗಳಲ್ಲಿ ಸಂಗ್ರಹಿಸಲ್ಪಟ್ಟಿವೆ.

ಇತ್ತಿಚೆಗಷ್ಟೇ ನಡೆದ ಐದು ರಾಜ್ಯಗಳಲ್ಲಿ ಮತದಾನ ಕೇಂದ್ರಗಳಲ್ಲಿ ಒಟ್ಟು 1,74,724 ಇವಿಎಂಗಳನ್ನು ಬಳಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಅದರಲ್ಲಿ ಮಧ್ಯಪ್ರದೇಶವೊಂದರಲ್ಲಿಯೇ 2,907 ಅಭ್ಯರ್ಥಿಗಳು ಗರಿಷ್ಠ 65,367 ಯಂತ್ರಗಳನ್ನು ಬಳಸಲಾಗಿದೆ.ಈ ಐದು ರಾಜ್ಯಗಳು ಮುಂಬರುವ 2019 ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿರುವುದರಿಂದ ಈಗ ಈ ಚುನಾವಣೆ ಫಲಿತಾಂಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ.

ರಾಜಸ್ತಾನ,ಮಧ್ಯಪ್ರದೇಶ ಮತ್ತು ಚತ್ತೀಸ್ ಘಡ್ ವಿಧಾನಸಭಾ ಫಲಿತಾಂಶವು ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿ ನಿರ್ಣಾಯಕವಾಗಿದೆ.ಈ ರಾಜ್ಯಗಳಲ್ಲಿ ಬರುವ ಫಲಿತಾಂಶವು ಲೋಕಸಭಾ ಚುನಾವಣೆಯಲ್ಲಿನ ಬಿಜೆಪಿ ಸಮೀಕರಣವನ್ನೇ ಬದಲಿದೆ ಎನ್ನುವ ಮಾತು ಈಗ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
 

Trending News