ಭೋಪಾಲ್: ಮಧ್ಯಪ್ರದೇಶದ ಝಾಬುವಾ ಜಿಲ್ಲೆಯ ಥಾಂಡ್ಲಾ ಸಮೀಪ ಮೂಲಕ ಹಾದುಹೋಗುವ ವೇಳೆ ರೈಲ್ವೇ ಕ್ರಾಸಿಂಗ್ ಬಳಿ ಗೂಡ್ಸ್ ಟ್ರಕ್ ಗೆ ಹಜ್ರತ್ ನಿಜಾಮುದ್ದೀನ್-ತ್ರಿವೆಂಡ್ರಮ್ ರಾಜಧಾನಿ ಎಕ್ಸ್ಪ್ರೆಸ್ ರೈಲು ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಟ್ರಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.
ಗುರುವಾರ ಬೆಳಗ್ಗೆ ಹಜ್ರತ್ ನಿಜಾಮುದ್ದೀನ್-ತ್ರಿವೆಂಡ್ರಮ್ ರಾಜಧಾನಿ ಎಕ್ಸ್ಪ್ರೆಸ್ನ B7 ಮತ್ತು B8 ಕೋಚ್ ಗಳು ಹಳಿತಪ್ಪಿವೆ. ಆದಾಗ್ಯೂ, ಯಾವುದೇ ಪ್ರಯಾಣಿಕರಿಗೆ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.
Madhya Pradesh: Truck rammed into a manned level crossing b/w Godhra & Ratlam & hit Trivandrum Rajdhani train.2 coaches derailed. Truck also damaged, driver critically injured. No injuries reported to any passenger. The crossing was closed for road traffic at the time of incident pic.twitter.com/rOcU6GM90C
— ANI (@ANI) October 18, 2018
ಎಲ್ಲಾ ಪ್ರಯಾಣಿಕರನ್ನು ಇತರ ಕೋಚ್ ಗಳಿಗೆ ಸ್ಥಳಾಂತರಿಸಲಾಗಿದೆ. ಈ ಘಟನೆಯು ಸುಮಾರು 6.44 ರ ವೇಳೆಗೆ ಸಂಭವಿಸಿದೆ ಎಂದು ರೈಲ್ವೆ ಸಚಿವಾಲಯದ ಮಾಧ್ಯಮ ಮತ್ತು ಸಾಂಸ್ಥಿಕ ಸಂವಹನ ನಿರ್ದೇಶಕ ರಾಜೇಶ್ ದತ್ ಬಾಜ್ಪೈ ಹೇಳಿದರು.