Dance Video Viral: ಚುನಾವಣಾ ಸೀಸನ್‌ನಲ್ಲಿ ಫಿಟ್‌ನೆಸ್‌ಗೆ ಫೇಮಸ್ ಆಗುತ್ತಿರುವ ಅಭ್ಯರ್ಥಿ..!

ಎಸ್‌ಪಿ ಅಭ್ಯರ್ಥಿ ಚಂದ್ರಾವತಿ ವರ್ಮಾ ಅವರ ಡ್ಯಾನ್ಸ್ ಮತ್ತು ಫಿಟ್‌ನೆಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪಕ್ಷವು ಅವರಿಗೆ ಹಮೀರ್‌ಪುರ ರಥ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಇದೇ ಮೊದಲ ಬಾರಿಗೆ ಚುನಾವಣಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ಚಂದ್ರಾವತಿ ವರ್ಮಾ ತಮ್ಮದೇ ಜಿಮ್ ಕೂಡ ನಡೆಸುತ್ತಿದ್ದಾರೆ.

Written by - Zee Kannada News Desk | Last Updated : Feb 4, 2022, 05:15 PM IST
  • ಉತ್ತರಪ್ರದೇಶ ಚುನಾವಣಾ ಕಣದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸೋಷಿಯಲ್ ಮೀಡಿಯಾ ಸ್ಟಾರ್ಸ್
  • ಚುನಾವಣಾ ಸೀಸನ್‌ನಲ್ಲಿ ಫಿಟ್‌ನೆಸ್‌ಗೆ ಫೇಮಸ್ ಆಗುತ್ತಿರುವ ಎಸ್‌ಪಿ ಅಭ್ಯರ್ಥಿ ಚಂದ್ರಾವತಿ ವರ್ಮಾ
  • ಚಂದ್ರಾವತಿಯವರ ಫಿಟ್ನೇಸ್ ಮತ್ತು ಡ್ಯಾನ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್
Dance Video Viral: ಚುನಾವಣಾ ಸೀಸನ್‌ನಲ್ಲಿ ಫಿಟ್‌ನೆಸ್‌ಗೆ ಫೇಮಸ್ ಆಗುತ್ತಿರುವ ಅಭ್ಯರ್ಥಿ..!   title=
ಫಿಟ್‌ನೆಸ್‌ಗೆ ಫೇಮಸ್ ಆಗುತ್ತಿರುವ ಎಸ್‌ಪಿ ಅಭ್ಯರ್ಥಿ ಚಂದ್ರಾವತಿ ವರ್ಮಾ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಪ್ರಾಬಲ್ಯ ಹೊಂದಿರುವ ಹಲವು ಮುಖಗಳು ಕಣದಲ್ಲಿವೆ. ಮೀರತ್‌ನ ಹಸ್ತಿನಾಪುರದಿಂದ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸುತ್ತಿರುವ ನಟಿ ಅರ್ಚನಾ ಗೌತಮ್ ನಂತರ ಇದೀಗ ಸಮಾಜವಾದಿ ಪಕ್ಷದ (SP) ಅಭ್ಯರ್ಥಿ ಚಂದ್ರಾವತಿ ವರ್ಮಾ ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಅರ್ಚನಾ ಗೌತಮ್ ಅವರ ಬಿಕಿನಿ ಫೋಟೋಗಳು ವೈರಲ್ ಆಗುತ್ತಿದ್ದರೆ, ಗೌತಮ್ ಅವರ ಡ್ಯಾನ್ಸ್ ಮತ್ತು ಫಿಟ್ನೆಸ್ ವಿಡಿಯೋ(Viral Video)ಗಳು ಸಖತ್ ಸೌಂಡ್ ಮಾಡುತ್ತಿವೆ. ವರ್ಮಾ ಅವರು ಹಮೀರ್‌ಪುರ ರಥ ಮೀಸಲು ಕ್ಷೇತ್ರ(UP Assembly Election)ದಿಂದ ಕಣಕ್ಕಿಳಿದಿದ್ದಾರೆ.

ಫಿಟ್ನೆಸ್ ತರಬೇತುದಾರರಾಗಿರುವ ಚಂದ್ರಾವತಿ

ಸೋಶಿಯಲ್ ಮೀಡಿಯಾದಲ್ಲಿ ಚಂದ್ರಾವತಿ ವರ್ಮಾ(Chandravati Verma Dance Video)ರ ಡ್ಯಾನ್ಸ್ ಜೊತೆಗೆ ವ್ಯಾಯಾಮ ಮಾಡುತ್ತಿರುವ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ಅವರು ತಮ್ಮ ಪತಿಯೊಂದಿಗೆ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದು. ಅವರ ಫಿಟ್ನೆಸ್ ಸ್ಥಳೀಯ ಜನರನ್ನು ತುಂಬಾ ಪ್ರಭಾವಿಸಿದೆ. ಅಕ್ಟೋಬರ್ 2, 1993ರಂದು ಜನಿಸಿದ ಚಂದ್ರಾವತಿ ವರ್ಮಾ ಅವರು ಬಿ.ಪಿ.ಎಡ್ ಮಾಡಿದ್ದಾರೆ. ಅವರು ದೀರ್ಘಕಾಲದವರೆಗೆ ಫಿಟ್ನೆಸ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ ತಮ್ಮದೇ ಆದ ಸ್ವಂತ ಜಿಮ್ ಅನ್ನು ಸಹ ನಡೆಸುತ್ತಿದ್ದಾರೆ.

ಇದನ್ನೂ ಓದಿ: Pune: ನಿರ್ಮಾಣದ ಹಂತದ ಕಟ್ಟಡ ಕುಸಿದು 7 ಮಂದಿ ದುರ್ಮರಣ, ಹಲವರಿಗೆ ಗಾಯ

ಮೊದಲ ಬಾರಿಗೆ ಅದೃಷ್ಟ ಪರೀಕ್ಷೆ

ಚಂದ್ರಾವತಿ ವರ್ಮಾ(Chandravati Verma) ಅವರು ಕಳೆದ ಕೆಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಹೈದರಾಬಾದ್‌ನಲ್ಲಿ ನೆಲೆಸಿದ್ದ ಇವರು ಮದುವೆಯಾದ ನಂತರ ಕಳೆದ ವರ್ಷವೇ ಇಲ್ಲಿಗೆ ಬಂದಿದ್ದರು. ಲೋಧಿ ಪ್ರಾಬಲ್ಯವಿರುವ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಚಂದ್ರಾವತಿ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಅವರ ಪತಿ ರಜಪೂತರಾಗಿದ್ದಾರೆ. ಚಂದ್ರಾವತಿ ಅವರ ಪತಿ ಕೂಡ ಫಿಟ್ನೆಸ್ ಟ್ರೈನರ್ ಆಗಿದ್ದಾರೆ. ಅನೇಕ ವಿಡಿಯೋಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವರ್ಮಾ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದು, ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಇವರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೆಲ್ಲುವ ಭರವಸೆಯಲ್ಲಿರುವ ಅಖಿಲೇಶ್ ಯಾದವ್

ಹಮೀರ್‌ಪುರ ರಥ ಕ್ಷೇತ್ರದಿಂದ ಕಾಂಗ್ರೆಸ್ ತೊರೆದಿರುವ ಮಾಜಿ ಶಾಸಕ ಗಯಾದಿನ್ ಅನುರಾಗಿ(Gayadin Anuragi) ಅವರನ್ನು ಕಣಕ್ಕಿಳಿಸಲು ಎಸ್‌ಪಿ ನಿರ್ಧರಿಸಿತ್ತು. ಆದರೆ ಅಭ್ಯರ್ಥಿ ಘೋಷಣೆಯಾದಾಗ ಚಂದ್ರಾವತಿ ವರ್ಮಾ ಅವರ ಹೆಸರನ್ನು ಕಂಡು ಹೆಚ್ಚಿನ ಜನರು ಆಶ್ಚರ್ಯಚಕಿತರಾದರು. ವರ್ಮಾ ಅವರಿಗೆ ಟಿಕೆಟ್ ಕೊಡಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಚಂದ್ರಾವತಿ ವರ್ಮಾ ಅವರು ಇಲ್ಲಿ ಜಯಭೇರಿ ಭಾರಿಸಲಿದ್ದಾರೆ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭರವಸೆ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಮತದಾರ ಯಾರಿಗೆ ವಿಜಯಮಾಲೆ ಹಾಕುತ್ತಾನೋ ಕಾದು ನೋಡಬೇಕಿದೆ.

ಇದನ್ನೂ ಓದಿ: Central Government Jobs: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆ ಖಾಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News