ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ 3 ದಿನಗಳ ಅಮೆರಿಕ ಪ್ರವಾಸ ಶನಿವಾರ ಮುಕ್ತಾಯಗೊಂಡಿದ್ದು, ಭಯೋತ್ಪಾದನೆ ವಿರುದ್ಧ ಬಲವಾದ ಸಂದೇಶವನ್ನು ರವಾನಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ಎದುರಿಸುವುದು ಸೇರಿದಂತೆ ಇತರ ಪ್ರಮುಖ ವಿಷಯಗಳ ಬಗ್ಗೆ ವಿಶ್ವದ ಪ್ರಮುಖ ನಾಯಕರು ಮಹತ್ವದ ಚರ್ಚೆ ನಡೆಸಿದ್ದಾರೆ. 76ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಲಸಿಕೆಗಳ ತಯಾರಿಕೆಯಲ್ಲಿಭಾರತ ಮುಂಚೂಣಿಯಲ್ಲಿರುವ ಬಗ್ಗೆ ವಿಶ್ವಕ್ಕೆ ಮಣದಟ್ಟು ಮಾಡಿದ್ದಾರೆ. ಇದೇ ವೇಳೆ ಅನೇಕ ವಿಷಯಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.
ಈ ಮಧ್ಯೆ ಪ್ರಧಾನಿ ಮೋದಿಯವರ ಭೇಟಿ ಸಮಯದಲ್ಲಿ ಅಮೆರಿಕವು ಕಂಚಿನ ನಟರಾಜ ವಿಗ್ರಹ(Bronze Nataraja Statue) ಸೇರಿ ಒಟ್ಟು 157 ಮೌಲ್ಯಯುತ ಕಲಾಕೃತಿ ಮತ್ತು ಪುರಾತನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ. ಕಳ್ಳತನ, ಅಕ್ರಮ ವ್ಯಾಪಾರ ಮತ್ತು ಸಾಂಸ್ಕೃತಿಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಬದ್ಧರಾಗಿರುವುದಾಗಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡೆನ್(Joe Biden) ತಿಳಿಸಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿಯವರಿಗೆ ಅಮೆರಿಕ ವಿಶೇಷ ಉಡುಗೊರೆಗಳನ್ನು ಹಸ್ತಾಂತರಿಸುವ ಮೂಲಕ ಸರ್ಪೈಸ್ ನೀಡಿದೆ. ಅತ್ಯಮೂಲ್ಯ ಪುರಾತನ ವಸ್ತುಗಳೊಂದಿಗೆ ಪ್ರಧಾನಿ ಮೋದಿವರು ಭಾರತಕ್ಕೆ ವಾಪಸ್ ಆಗಲಿದ್ದಾರೆ.
Hon'ble PM Shri @narendramodi ji to bring home 157 artefacts.
#ModiInAmerica pic.twitter.com/vkWKJvWsMV
— Harsh Sanghavi (@sanghaviharsh) September 25, 2021
ಇದನ್ನೂ ಓದಿ: ಸೆಪ್ಟೆಂಬರ್ 28 ಕ್ಕೆ ಕಾಂಗ್ರೆಸ್ ಪಕ್ಷ ಸೇರಲಿರುವ ಕನ್ನಯ್ಯ ಕುಮಾರ್, ಜಿಗ್ನೇಶ್ ಮೇವಾನಿ
ಅಮೆರಿಕದಿಂದ ಬೆಲೆಕಟ್ಟಲಾಗದ ಪುರಾತನ ವಸ್ತು(Precious Indian Antiques)ಗಳು ಉಡುಗೊರೆ ಸಿಕ್ಕಿರುವುದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 12ನೇ ಶತಮಾನದ ತಾಮ್ರದ ನಟರಾಜನ ವಿಗ್ರಹ, 10ನೇ ಶತಮಾನದ ರೇವಾಂತ ಕಲ್ಲಿನ ವಿಗ್ರಹ, 11 ಮತ್ತು 14ನೇ ಶತಮಾನದ ಅಪರೂಪದ ಪುರಾತತ್ವ ವಸ್ತುಗಳ ಕಲಾಕೃತಿಗಳು, ಟೆರಾಕೋಟಾ ಹೂದಾನಿ ಜೊತೆಗೆ 45 ಪ್ರಾಚೀನ ವಸ್ತುಗಳನ್ನು ಅಮೆರಿಕವು ಭಾರತಕ್ಕೆ ಹಸ್ತಾಂತರಿಸಿದೆ. ಈ ಪ್ರಾಚೀನ ವಸ್ತುಗಳು ಹೆಚ್ಚಾಗಿ 11 ರಿಂದ 14ನೇ ಶತಮಾನದ ಅವಧಿಗೆ ಸೇರಿವೆ ಎಂದು ತಿಳಿದುಬಂದಿದೆ.
157 ಕಲಾಕೃತಿಗಳ ಪೈಕಿ ಅರ್ಧದಷ್ಟು ಕಲಾಕೃತಿಗಳು (71) ಸಾಂಸ್ಕೃತಿಕವಾದರೆ, ಉಳಿದ ಅರ್ಧವು ಹಿಂದೂ(Hinduism) ಧರ್ಮ(60), ಬೌದ್ಧ ಧರ್ಮ (16) ಮತ್ತು ಜೈನ ಧರ್ಮ (9) ಕ್ಕೆ ಸಂಬಂಧಿಸಿದ ಪ್ರತಿಮೆಗಳನ್ನು ಒಳಗೊಂಡಿದೆ. ಕಂಚಿನ ವಿಗೃಹಗಳಾದ ಲಕ್ಷ್ಮಿ ನಾರಾಯಣ, ಬುದ್ಧ, ವಿಷ್ಣು, ಶಿವ ಪಾರ್ವತಿ ಮತ್ತು 24 ಜೈನ ತೀರ್ಥಂಕರರು, ಕಂಕಲಮೂರ್ತಿ, ಬ್ರಾಹ್ಮಿ ಮತ್ತು ನಂದಿಕೇಶನ ಪ್ರಸಿದ್ಧ ಭಂಗಿಗಳ ಅಲಂಕೃತ ಪ್ರತಿಮೆಗಳನ್ನು ಹೊಂದಿವೆ. ಇದಲ್ಲದೆ ಇನ್ನೂ ಅನೇಕ ದೇವತೆಗಳು ಮತ್ತು ದೈವಿಕ ಪ್ರತಿಮೆಗಳಿವೆ. ಈ ಪ್ರತಿಮೆಗಳು ಮತ್ತು ಐತಿಹಾಸಿಕ ಪುರಾತನ ವಸ್ತುಗಳನ್ನು ಲೋಹ, ಕಲ್ಲು ಮತ್ತು ಟೆರಾಕೋಟಾದಲ್ಲಿ ಮಾಡಲಾಗಿದೆ.
Homecoming of Indian treasures!
157 Indian antiquities were returned by the Government of USA to the Government of India during the visit of PM @narendramodi to USA. pic.twitter.com/sEYUGF8Umf
— Arindam Bagchi (@MEAIndia) September 25, 2021
ಇದನ್ನೂ ಓದಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಕಟ್ಟಡ ಕಾರ್ಮಿಕನ ಮಗಳು
ಇದರ ಹೊತರಾಗಿ ಹಿಂದೂಧರ್ಮದ ಧಾರ್ಮಿಕ ಶಿಲ್ಪಗಳನ್ನು ಒಳಗೊಂಡಿರುವ (3 ತಲೆಯ ಬ್ರಹ್ಮ( Three Headed Brahma), ಸೂರ್ಯ ಚಾಲನೆಯ ರಥ, ವಿಷ್ಣು, ದಕ್ಷಿಣಾಮೂರ್ತಿ ಶಿವ, ನೃತ್ಯ ಗಣೇಶ ಇತ್ಯಾದಿ), ಬೌದ್ಧ ಧರ್ಮದ (ಸ್ಥಾಯಿ ಬುದ್ಧ, ಬೋಧಿಸತ್ವ ಮಜುಶ್ರೀ, ತಾರಾ) ಮತ್ತು ಜೈನ ಧರ್ಮದ (ಜೈನ ತೀರ್ಥಂಕರ, ಪದ್ಮಾಸನ ತೀರ್ಥಂಕರ, ಜೈನ) ಹಾಗೂ ಇತರ ಕಲಾಕೃತಿ(ನಿರಾಕಾರ ದಂಪತಿಗಳು, ಚೌರಿ ಹೊತ್ತವರು, ಡ್ರಮ್ ಬಾರಿಸುವ ಮಹಿಳೆ ಇತ್ಯಾದಿ)ಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಈ ಅಮೂಲ್ಯ ಕಲಾಕೃತಿಗಳು ಇನ್ನುಮುಂದೆ ಭಾರತದ ಸಂಗ್ರಹಾಲಯದಲ್ಲಿ ಇರಲಿದೆ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.