Viral News: ನೆಟಿಜನ್ಸ್ ತಲೆಬಿಸಿ ಮಾಡಿರುವ ಮಸಾಲೆ ದೋಸೆ ಐಸ್ ಕ್ರೀಂ ರೋಲ್..!

ವಿಶೇಷವೆಂದರೆ ಈ ಖಾದ್ಯವನ್ನು ನಿಮ್ಮ ನೆಚ್ಚಿನ ಐಸ್ ಕ್ರೀಂನಿಂದ ತಯಾರಿಸಲಾಗುತ್ತದೆ, ಈ ಖಾದ್ಯವನ್ನು ನೋಡಿದ ಜನರು ಕೋಪಗೊಳ್ಳುತ್ತಿದ್ದಾರೆ.

Written by - Puttaraj K Alur | Last Updated : Jan 19, 2022, 01:37 PM IST
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ವಿಚಿತ್ರ ಕಾಂಬಿನೇಷನ್ ಹೊಂದಿರುವ ಡಿಶ್
  • ಮಾಸಾಲೆ ದೋಸೆ ಐಸ್ ಕ್ರೀಂ ರೋಲ್ ನೋಡಿದ ಜನರು ತಲೆ ಚಚ್ಚಿಕೊಳ್ಳುತ್ತಿದ್ದಾರೆ
  • ಮಾಸಾಲೆ ದೋಸೆ ಜೊತೆಗೆ ಐಸ್ ಕ್ರೀಂ ಮಿಶ್ರಣ ಮಾಡಿ ರೋಲ್ ಮಾಡಲಾಗಿದೆ
Viral News: ನೆಟಿಜನ್ಸ್ ತಲೆಬಿಸಿ ಮಾಡಿರುವ ಮಸಾಲೆ ದೋಸೆ ಐಸ್ ಕ್ರೀಂ ರೋಲ್..! title=
ಮಾಸಾಲೆ ದೋಸೆ ಐಸ್ ಕ್ರೀಂ ರೋಲ್

ನವದೆಹಲಿ: ರುಚಿಕರವಾದ ಆಹಾರವನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ. ಕೆಲ ಜನರು ರುಚಿಕರವಾದ ಆಹಾರ ಸೇವಿಸಲು ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗುತ್ತಾರೆ. ನಾವು ಒಳ್ಳೆಯ ಆಹಾರ ಸೇವಿಸಿದರೆ ನಮ್ಮ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ. ಅದೇ ರೀತಿ ಕೆಟ್ಟದ್ದನ್ನು ತಿಂದರೆ ಬಾಯಿಯ ರುಚಿಯ ಜೊತೆಗೆ ಆ ದಿನವೂ ಹಾಳಾಗುತ್ತದೆ. ಇಂದು ನಾವು ನಿಮಗೆ ಅಂತಹ ವಿಚಿತ್ರ ಆಹಾರ(Weird Food Combination)ವನ್ನು ತೋರಿಸಲಿದ್ದೇವೆ. ಈ ವಿಡಿಯೋ ನೋಡಿದರೆ ನೀವೂ ಕೂಡ ಒಂದುಕ್ಷಣ ದಂಗಾಗುತ್ತೀರಿ. ಅಷ್ಟು ವಿಚಿತ್ರವಾಗಿದೆ ಈ ಡಿಶ್.

ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ ಮಸಾಲೆ ದೋಸೆ ಐಸ್ ಕ್ರೀಂ ರೋಲ್!

ಹೌದು, ಇತ್ತೀಚಿನ ದಿನಗಳಲ್ಲಿ ತುಂಬಾ ವಿಚಿತ್ರವಾದ ಕಾಂಬಿನೇಷನ್ ಹೊಂದಿರುವ ಡಿಶ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಖಾದ್ಯವನ್ನು ನೋಡಿದ ಜನರು ಕೋಪಗೊಳ್ಳುತ್ತಿದ್ದಾರೆ. ವಿಶೇಷವೆಂದರೆ ಈ ಖಾದ್ಯವನ್ನು ನಿಮ್ಮ ನೆಚ್ಚಿನ ಐಸ್ ಕ್ರೀಂನಿಂದ ತಯಾರಿಸಲಾಗುತ್ತದೆ. ಈ ವಿಚಿತ್ರ ಸಂಯೋಜನೆಯ ಖಾದ್ಯದ ಹೆಸರು ‘ಮಸಾಲೆ ದೋಸೆ ಐಸ್ ಕ್ರೀಂ ರೋಲ್’(Masala Dosa IceCream Roll). ಇಲ್ಲಿ ಅಂಗಡಿಯವನು ಮಸಾಲೆ ದೋಸೆ ಮತ್ತು ಐಸ್ ಕ್ರೀಂನೊಂದಿಗೆ ಬೆರೆಸಿ ಈ ಖಾದ್ಯವನ್ನು ತಯಾರಿಸಿದ್ದಾನೆ.

ಇದನ್ನೂ ಓದಿ: PM Kisan ನಿಯಮದಲ್ಲಿ ಬದಲಾವಣೆ , ಈ ದಾಖಲೆ ಇಲ್ಲದಿದ್ದರೆ ಖಾತೆ ಸೇರುವುದಿಲ್ಲ ಹಣ

ಮಾಸಾಲೆ ದೋಸೆ ಜೊತೆಗೆ ಐಸ್ ಕ್ರೀಂ ಮಿಶ್ರಣ

‘ದಿ ಗ್ರೇಟ್ ಇಂಡಿಯನ್ ಪೂಡಿ’ ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಚಿತ್ರ ಖಾದ್ಯ(Masala Dosa IceCream)ವನ್ನು ತಯಾರಿಸುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾ ತುಂಬಾ ಹರಿದಾಡಿದ್ದು, ಲಕ್ಷಾಂತರ ಜನರ ಗಮನ ಸೆಳೆದಿದೆ. ಅನೇಕರು ಹೀಗೂ ಡಿಶ್ ತಯಾರಿಸುತ್ತಾರಾ ಅಂತಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅನೇಕರು ಊಟದ ಬಳಿಕ ರುಚಿ ರುಚಿಯಾದ ಐಸ್ ಕ್ರೀಂ ತಿನ್ನಲು ಇಷ್ಟಪಟ್ಟರೆ, ಇಲ್ಲಿ ಮಾಸಾಲೆ ದೋಸೆ ಜೊತೆಗೆ ಐಸ್ ಕ್ರೀಂ ಮಿಶ್ರಣ ಮಾಡಿ ರೋಲ್ ಮಾಡಲಾಗಿದೆ.

ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಈ ಖಾದ್ಯ ನೋಡಿ ಜನ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಸದ್ಯ ಸಖತ್ ವೈರಲ್ ಆಗಿರುವ ಈ ವಿಡಿಯೋವನ್ನು 20 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಮೊದಲಿಗೆ ಮಸಾಲೆ ದೋಸೆ(Masala Dosa)ಯನ್ನು ಟೇಬಲ್ ಮೇಲೆ ಚೂರು ಚೂರಾಗಿ ಕತ್ತರಿಸುವ ವ್ಯಕ್ತಿ ಬಳಿಕ ಅದಕ್ಕೆ ಐಸ್ ‍ಕ್ರೀಂ(Ice Cream) ಹಾಕಿ ಮಿಶ್ರಣ ಮಾಡುತ್ತಾನೆ. ಬಳಿಕ ರೋಲ್ ಗಳನ್ನಾಗಿ ಕತ್ತರಿಸಿ ಅದಕ್ಕೆ ಆಲೂಗಡ್ಡೆ ಪಲ್ಯ ಮತ್ತು ಚಟ್ನಿ ಜೊತೆಗೆ ಗ್ರಾಹಕರಿಗೆ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ನೋಡಿದ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ TATA ಕಾರು ಖರೀದಿಸುವ ಕೊನೆಯ ಅವಕಾಶ, ತಪ್ಪಿದರೆ ಪಡಬೇಕಾಗುತ್ತದೆ ಪಶ್ಚಾತಾಪ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News