Duck-Dog Fight Viral Video: ಬಾತುಕೋಳಿ ಜೊತೆ ಕಾಲುಕೆರೆದು ಜಗಳಕ್ಕಿಳಿದ ನಾಯಿ, ಮುಂದೇನಾಯ್ತು ನೀವೇ ನೋಡಿ...

Duck-Dog Fight Viral Video: ಬಾತುಕೋಳಿ ಮತ್ತು ನಾಯಿಗಳ ಕಾದಾಟಕ್ಕೆ ಸಂಬಂಧಿಸಿದ ವಿಡಿಯೋ ಇದಾಗಿದ್ದು, ಈ ವಿಡಿಯೋ ನೋಡಿದರೆ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಿ. ಈ ತಮಾಷೆಯ ವೀಡಿಯೋವನ್ನು ಕೆಲವೇ ಸಮಯದಲ್ಲಿ ಸಾವಿರಾರು ಬಾರಿ ವೀಕ್ಷಿಸಲಾಗಿದೆ ಮತ್ತು ನೆಟಿಜನ್‌ಗಳು ಸಹ ಅದನ್ನು ಇಷ್ಟಪಟ್ಟಿದ್ದಾರೆ.

Written by - Yashaswini V | Last Updated : Mar 6, 2022, 09:43 AM IST
  • ಬಾತುಕೋಳಿ ಜೊತೆ ಕಾಲುಕೆರೆದು ಜಗಳಕ್ಕಿಳಿದ ನಾಯಿ!
  • ನಾಯಿ ಬೊಗಳುತ್ತಾ ಬಾತುಕೋಳಿಯನ್ನು ಛೇಡಿಸುತ್ತದೆ.
  • ಈ ದೃಶ್ಯವನ್ನು ನೋಡುವುದು ತುಂಬಾ ತಮಾಷೆಯಾಗಿ ಕಾಣುತ್ತದೆ.
Duck-Dog Fight Viral Video: ಬಾತುಕೋಳಿ ಜೊತೆ ಕಾಲುಕೆರೆದು ಜಗಳಕ್ಕಿಳಿದ ನಾಯಿ, ಮುಂದೇನಾಯ್ತು ನೀವೇ ನೋಡಿ... title=
Dog duck funny viral video

Duck-Dog Fight Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸದವರೇ ಇಲ್ಲ ಅಥವಾ ಸೋಶಿಯಲ್ ಮೀಡಿಯಾ ಬಳಸದವರ ಸಂಖ್ಯೆ ಅತಿ ವಿರಳ ಎಂದೇ ಹೇಳಬಹುದು. ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ,  ಹಲವು ವೈವಿದ್ಯಮಯ ವಿಡಿಯೋಗಳು ಕಂಡುಬರುತ್ತವೆ. ಇಲ್ಲಿ ಕೆಲವೊಮ್ಮೆ ವೈರಲ್ ಆಗುವ ವಿಡಿಯೋಗಳು ತುಂಬಾ ಭಾವುಕರನ್ನಾಗಿಸುತ್ತದೆ ಮತ್ತು ಕೆಲವೊಮ್ಮೆ ನಗುವನ್ನು ನಿಯಂತ್ರಿಸಲು ಸಾಧ್ಯವೇ ಆಗುವುದಿಲ್ಲ ಎಂಬಂತಹ ವಿಡಿಯೋಗಳು ಸಿಕ್ಕಾಬಟ್ಟೆ ವೈರಲ್ ಆಗುತ್ತವೆ. 

ಇದೀಗ ಅಂತಹ ತಮಾಷೆಯ ವಿಡಿಯೋ  (Funny Video) ಎಲ್ಲೆಡೆ ಸಖತ್ ವೈರಲ್ (Viral Video) ಆಗುತ್ತಿದೆ. ಬಾತುಕೋಳಿ ಮತ್ತು ನಾಯಿಗಳ ಕಾದಾಟಕ್ಕೆ ಸಂಬಂಧಿಸಿದ ವಿಡಿಯೋ ಇದಾಗಿದ್ದು, ಈ ವಿಡಿಯೋ ನೋಡಿದರೆ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಿ. ಈ ತಮಾಷೆಯ ವೀಡಿಯೋವನ್ನು ಕೆಲವೇ ಸಮಯದಲ್ಲಿ ಸಾವಿರಾರು ಬಾರಿ ವೀಕ್ಷಿಸಲಾಗಿದೆ ಮತ್ತು ನೆಟಿಜನ್‌ಗಳು ಸಹ ಅದನ್ನು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ- Monkeys Funny Video: ಮಂಗಗಳ ಕೈಗೆ ಸ್ಮಾರ್ಟ್‌ಫೋನ್‌ ಕೊಟ್ಟು ವಿಡಿಯೋ ತೋರಿಸಿದಾಗ ಹೇಗಿರುತ್ತೆ...! ನೋಡಿ ಈ ತಮಾಷೆಯ ವಿಡಿಯೋ

ಬಾತುಕೋಳಿ ಜೊತೆ ಕಾಲುಕೆರೆದು ಜಗಳಕ್ಕಿಳಿದ ನಾಯಿ, ಮುಂದೇನಾಯ್ತು ...
ಕೆಲವೇ ಸೆಕೆಂಡುಗಳ ಈ ವೈರಲ್ ವಿಡಿಯೋದಲ್ಲಿ ನಾಯಿಯೊಂದು ಕೆರೆ ಬಳಿ ಬಂದಾಗ ಬಾತುಕೋಳಿ ಅಲ್ಲಿ-ಇಲ್ಲಿ ನೋಡುತ್ತಾ ಆರಾಮವಾಗಿ ವಿಹರಿಸುತ್ತಿರುವುದು ಕಂಡು ಬರುತ್ತದೆ. ಇದನ್ನು ಕಂಡ ನಾಯಿ ಬೊಗಳುತ್ತಾ ಬಾತುಕೋಳಿಯನ್ನು ಛೇಡಿಸುತ್ತದೆ. ನೀರಿನಲ್ಲಿ ತೇಲುತ್ತಾ ಇದ್ದ ಬಾತುಕೋಳಿ ತಕ್ಷಣವೇ ದಡಕ್ಕೆ ಬಂದು ಕೊಕ್ಕಿನಿಂದ ನಾಯಿಮರಿಯನ್ನು ಹಿಡಿದು ನೀರಿಗೆ ಬಡಿದಿರುವುದನ್ನು ತಮಾಷೆಯ ವಿಡಿಯೋದಲ್ಲಿ (Funny Video) ಕಾಣಬಹುದು.

ಫ್ರೇಮ್‌ನಲ್ಲಿ ಈ ದೃಶ್ಯವನ್ನು ನೋಡುವುದು ತುಂಬಾ ತಮಾಷೆಯಾಗಿ ಕಾಣುತ್ತದೆ. ನಾಯಿಯು ನಿರಂತರವಾಗಿ ಬೊಗಳುವುದನ್ನು ನೋಡಬಹುದು. ಇದಕ್ಕೆ ಪ್ರತಿಕ್ರಿಯೆಯಾಗಿ ಬಾತುಕೋಳಿಯು  ಕ್ಷಣಮಾತ್ರದಲ್ಲಿ  ನಾಯಿಮರಿಯನ್ನು ಹತ್ತಿಕ್ಕಿ ಅದನ್ನು ನೀರಿನಲ್ಲಿ ಬಡಿಯುತ್ತದೆ. ಬಾತುಕೋಳಿ ಕೊಕ್ಕನ್ನು ಸಡಿಲಿಸುತ್ತಿದ್ದಂತೆ ಮತ್ತೆ ನಾಯಿ ಎದ್ದನೋ, ಬಿದ್ದನೋ ಎಂದು ದಡದ ಮೇಲೇರುತ್ತದೆ. 

ಈ ತಮಾಷೆಯ ವಿಡಿಯೋವನ್ನು ನೀವೂ ಒಮ್ಮೆ ವೀಕ್ಷಿಸಿ...

 
 
 
 

 
 
 
 
 
 
 
 
 
 
 

A post shared by طبیعت (@nature27_12)

ಇದನ್ನೂ ಓದಿ- Funny Viral Video: ಪತಿರಾಯನ ಚೇಷ್ಟೆ! ಅತ್ತೆ ತಲೆ ಮೇಲೆ ಮೊಟ್ಟೆ ಹೊಡೆದ ಸೊಸೆ!

ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದು ತಿಳಿದಿಲ್ಲ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಭಾರೀ ವೈರಲ್ ಆಗುತ್ತಿದೆ. ನೇಚರ್27_12 ಹೆಸರಿನ ಪುಟದಲ್ಲಿ ಈ ವೈರಲ್ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News