Weather forecast for Sept : ಈ ಇಡೀ ತಿಂಗಳು ಸುರಿಯಲಿದೆ ಭಾರೀ ವರ್ಷಧಾರೆ, ಹವಾಮಾನ ಇಲಾಖೆಯ ಮುನ್ಸೂಚನೆ

ಆಗಸ್ಟ್‌ನಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ 24 ರಷ್ಟು ಕಡಿಮೆ ಮಳೆಯಾಗಿದೆ, ಆದರೆ ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತಲೂ ಅಧಿಕ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು, ಐಎಂಡಿ ತನ್ನ ವರದಿಯಲ್ಲಿ ಹೇಳಿದೆ.

Written by - Ranjitha R K | Last Updated : Sep 1, 2021, 03:53 PM IST
  • ಆಗಸ್ಟ್‌ನಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ 24 ರಷ್ಟು ಕಡಿಮೆ ಮಳೆ
  • ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತಲೂ ಅಧಿಕ ಮಳೆಯಾಗುವ ಸಾಧ್ಯತೆ
  • ಸೆಪ್ಟೆಂಬರ್ ಮೊದಲ ದಿನ ದೆಹಲಿಯಲ್ಲಿ ಭಾರೀ ಮಳೆ
Weather forecast for Sept : ಈ ಇಡೀ ತಿಂಗಳು ಸುರಿಯಲಿದೆ ಭಾರೀ ವರ್ಷಧಾರೆ, ಹವಾಮಾನ ಇಲಾಖೆಯ ಮುನ್ಸೂಚನೆ   title=
Weather forecast for Sept (photo ANI)

ನವದೆಹಲಿ : ಆಗಸ್ಟ್ ತಿಂಗಳಲ್ಲಿ 24 ಶೇಕಡಾ ಕಡಿಮೆ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ. ಆದರೆ ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಸೆಪ್ಟೆಂಬರ್‌ನಲ್ಲಿ ಮಧ್ಯ ಭಾರತದ ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು, ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರಾ ಹೇಳಿದ್ದಾರೆ. 

 ಆಗಸ್ಟ್‌ನಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ 24 ರಷ್ಟು ಕಡಿಮೆ ಮಳೆಯಾಗಿದೆ, ಆದರೆ ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತಲೂ ಅಧಿಕ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು, ಐಎಂಡಿ ತನ್ನ ವರದಿಯಲ್ಲಿ ಹೇಳಿದೆ. ಉತ್ತರ ಮತ್ತು ಈಶಾನ್ಯ ಭಾರತ ಮತ್ತು ದಕ್ಷಿಣ ಭಾರತದ ದಕ್ಷಿಣ ಭಾಗಗಳಲ್ಲಿ ಸಾಮಾನ್ಯ ಅಥವಾ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಮೊಹಪಾತ್ರ ಹೇಳಿದ್ದಾರೆ. 

ಇದನ್ನೂ ಓದಿ : ಹೃದಯಾಘಾತದಿಂದ ಎಐಎಡಿಎಂಕೆ ನಾಯಕ ಓ.ಪನ್ನೀರಸೆಲ್ವಂ ಪತ್ನಿ ನಿಧನ

ಸೆಪ್ಟೆಂಬರ್ ಮೊದಲ ದಿನ ದೆಹಲಿಯಲ್ಲಿ (Delhi rain) ಭಾರೀ ಮಳೆ ಸುರಿದಿದೆ. ಹವಾಮಾನ ಇಲಾಖೆಯ ಪ್ರಕಾರ, ಕನಿಷ್ಠ 12 ವರ್ಷಗಳಲ್ಲಿ, ಸೆಪ್ಟೆಂಬರ್ ಒಂದು ಅಂದರೆ ಇಂದು ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಬುಧವಾರ ಬೆಳಿಗ್ಗೆ 8.30 ರವರೆಗೆ 24 ಗಂಟೆಗಳಲ್ಲಿ 112.1 ಮಿಮೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ರಾಷ್ಟ್ರೀಯ ರಾಜಧಾನಿಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ ಸರಾಸರಿ 125.1 ಮಿಮೀ ಮಳೆಯಾಗುತ್ತದೆ. ಅಂದರೆ ಈ ತಿಂಗಳ ಮೊದಲ ದಿನವೇ, ಇಡೀ ತಿಂಗಳಿನ ಶೇ .90 ರಷ್ಟು ಮಳೆಯಾಗಿದೆ.  

ಹವಾಮಾನ ಬದಲಾವಣೆಯಿಂದಾಗಿ ಮಾನ್ಸೂನ್ ಪ್ರವೃತ್ತಿ ಬದಲಾಗುತ್ತಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ 'ಸ್ಕೈಮೆಟ್ ವೆದರ್' ನ ಉಪಾಧ್ಯಕ್ಷ ಮಹೇಶ್ ಪಲಾವತ್ ಹೇಳಿದ್ದಾರೆ. "ಕಳೆದ ನಾಲ್ಕೈದು ವರ್ಷಗಳಲ್ಲಿ, ಮಳೆಗಾಲದ (Rain season) ದಿನಗಳ ಸಂಖ್ಯೆ ಕಡಿಮೆಯಾಗಿದೆ. ಕೆಟ್ಟ ಹವಾಮಾನದ ಪ್ರಮಾಣ ಹೆಚ್ಚಾಗಿದೆ. ನಾವು ಸಣ್ಣ ಮತ್ತು ತೀವ್ರವಾದ ಮಳೆಯನ್ನು ದಾಖಲಿಸುತ್ತಿದ್ದೇವೆ. ಕೆಲವೊಮ್ಮೆ ಕೇವಲ 24 ಗಂಟೆಗಳಲ್ಲಿ 100 ಮಿಮೀ ಮಳೆಯಾಗುತ್ತದೆ. ಮೊದಲು 10 ರಿಂದ 15 ದಿನಗಳಲ್ಲಿ ಈ ರೀತಿಯ ಮಳೆಯಾಗುತ್ತಿತ್ತು.

ಇದನ್ನೂ ಓದಿ : Rules Change In September: ಇಂದಿನಿಂದ ಅನೇಕ ನಿಯಮಗಳಲ್ಲಿ ಬದಲಾವಣೆ; ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ

"ಸಂಜೆಯವರೆಗೆ ಮಧ್ಯಂತರ ಮಳೆಯಾಗುವ ಸಾಧ್ಯತೆಯಿದ್ದು,  ನಂತರ ಮಳೆ ಕಡಿಮೆಯಾಗುತ್ತದೆ. ಸೆಪ್ಟೆಂಬರ್ 7 ರಿಂದ ಇನ್ನೊಂದು ಸುತ್ತಿನ ಮಳೆ ಆರಂಭವಾಗುವ ಸಾಧ್ಯತೆಯಿದ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News