Madhya Pradesh Weired Marriage - ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ (Ujjain) 82 ವರ್ಷದ ವ್ಯಕ್ತಿಯೊಬ್ಬ ತನಗಿಂತ 46 ವರ್ಷ ಕಿರಿಯ ವಿಧವೆ ಮಹಿಳೆಗೆ ತನ್ನ ಹೃದಯ ಕೊಟ್ಟಿದ್ದಾನೆ. ವೃದ್ಧರು PWD ನಿವೃತ್ತ ಅಧಿಕಾರಿಯಾಗಿದ್ದು ನೋಡಿಕೊಳ್ಳಲು ಯಾರು ಇಲ್ಲ. ಮಹಿಳೆ ವಿಧವೆಯಾಗಿದ್ದು ಮತ್ತು ಆಕೆಗೆ ಒಬ್ಬ ಮಗನೂ ಇದ್ದಾನೆ.
ಸುದೀರ್ಘ ಸ್ನೇಹದ ನಂತರ ಮದುವೆ
ಸುದೀರ್ಘ ಸ್ನೇಹದ ನಂತರ, ಇಬ್ಬರೂ ಶುಕ್ರವಾರ ಕೋರ್ಟ್ ಮ್ಯಾರೇಜ್ (Court Marriage) ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಮತ್ತು ಪರಸ್ಪರ ಆಸರೆಯಾಗಿದ್ದಾರೆ. ಇವರಿಬ್ಬರೂ ವಿವಾಹವಾಗಲಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಶುಕ್ರವಾರ ಮಧ್ಯಾಹ್ನ ನ್ಯಾಯಾಲಯದ ಆವರಣದಲ್ಲಿ ಈ ಅಪೂರ್ವ (Weired News) ಮದುವೆಯನ್ನು ವೀಕ್ಷಿಸಲು ಹಾಗೂ ಫೋಟೋ-ವಿಡಿಯೋ ಮಾಡಲು ಜನಸಾಗರವೇ ಹರಿದುಬಂದಿತ್ತು.ಆದರೆ ನೆರೆದಿದ್ದ ಜನಸ್ತೋಮ ಹಾಗೂ ಮಾಧ್ಯಮದವರನ್ನು ನೋಡಿ ಇಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಗುಂಪನ್ನು ಕಂಡು ಕುಪಿತರಾದ ದಂಪತಿ
ನಮ್ಮನ್ನು ಮನರಂಜನೆಯ ಸಾಧನವೆಂದು ಪರಿಗಣಿಸಬೇಡಿ ಎಂದು ವೃದ್ಧರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಅರ್ಜಿ ಸಲ್ಲಿಸಿ ಮದುವೆ ಮಾಡಿಕೊಂಡಿದ್ದೇವೆ. ನನಗೆ 28 ಸಾವಿರ ಪಿಂಚಣಿ ಬರುತ್ತಿದ್ದು, ಒಬ್ಬರಿಗೊಬ್ಬರು ಆಸರೆಯಾಗಿದ್ದೇವೆ ಎಂದು ಹೇಳಿದ್ದಾರೆ.
1999ರಲ್ಲಿ ಪಿಡಬ್ಲ್ಯುಡಿ ವಿಭಾಗದ ಮುಖ್ಯ ಹುದ್ದೆಯಲ್ಲಿದ್ದು ನಿವೃತ್ತರಾದ 82ರ ಹರೆಯದ ಅವರು ನಗರದ ವಲ್ಲಭ ನಗರದಲ್ಲಿ ವಾಸವಾಗಿದ್ದಾರೆ. ಹೆಂಡತಿ ಮಕ್ಕಳಿಲ್ಲದ ಇವರು ಒಂಟಿಯಾಗಿ ದೀರ್ಘಕಾಲ ಬದುಕುತ್ತಿದ್ದು, 28 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ-Viral Video: ಬಿಸಿ ಮಾಡುತ್ತಲೇ ಚುಯಿಂಗ್ ಗಮ್ ಆಗಿ ಮಾರ್ಪಟ್ಟ ಹಾಲು
ಎಡಿಎಂ ಸಮ್ಮುಖದಲ್ಲಿ ವಿವಾಹ
ನಗರದ ಶಾಸ್ತ್ರಿನಗರ ನಿವಾಸಿ 36 ವರ್ಷದ ಮಹಿಳೆಯೊಂದಿಗೆ ವೃದ್ಧರು ಸ್ನೇಹ ಬೆಳೆಸಿದ್ದರು. ಅವಳು 46 ವರ್ಷ ಚಿಕ್ಕವಳು. ಮಹಿಳೆಗೆ 6 ವರ್ಷದ ಮಗನಿದ್ದು, ವಿಧವೆಯಾಗಿದ್ದಾಳೆ. ಯಾವುದೇ ಬೆಂಬಲವಿಲ್ಲದ ಕಾರಣ ಇಬ್ಬರೂ ಸ್ನೇಹ ಬೆಳೆಸಿ ನಂತರ ಪರಸ್ಪರ ಹೃದಯವನ್ನು ನೀಡಿದ್ದರು ಮತ್ತು ಮದುವೆಯಾಗಲು ನಿರ್ಧರಿಸಿದ್ದಾರೆ. ಸಂಬಂಧಿಕರೊಂದಿಗೆ ಎಡಿಎಂ ಕೋರ್ಟ್ ಆವರಣಕ್ಕೆ ಆಗಮಿಸಿ ಎಡಿಎಂ ಸಮ್ಮುಖದಲ್ಲಿ ಇಬ್ಬರು ವಿವಾಹವಾಗಿದ್ದಾರೆ.
ಇದನ್ನೂ ಓದಿ-WATCH: ತನ್ನ ಸ್ನೇಹಿತನಿಗೆ ನಾಯಿಗಳು ಗುಡ್ ಬೈ ಹೇಳಿದ್ದೇಗೆ ಗೊತ್ತೇ?
ಈ ಕುರಿತು ಮಾಹಿತಿ ನೀಡಿದ ಎಡಿಎಂ ಸಂತೋಷ್ ಟ್ಯಾಗೋರ್, ಅರ್ಜಿ ಸ್ವೀಕರಿಸಲಾಗಿದ್ದು, ಅದರಂತೆ ತನಿಖೆ ನಡೆಸಿ ಇಬ್ಬರ ಒಪ್ಪಿಗೆ ಪಡೆದು ನ್ಯಾಯಾಲಯ ಕ್ರಮ ಕೈಗೊಂಡಿದೆ ಎಂದಿದ್ದಾರೆ. ವೃದ್ಧರ ವಯಸ್ಸು 80 ವರ್ಷಕ್ಕಿಂತ ಹೆಚ್ಚಿದ್ದರೆ, ಮಹಿಳೆಯ ವಯಸ್ಸು 35 ರಿಂದ 45 ರ ನಡುವೆ ಇದೆ. ಇಬ್ಬರೂ ಉಜ್ಜಯಿನಿ ಜಿಲ್ಲೆಯ ನಿವಾಸಿಗಳು. ಇಬ್ಬರೂ ತಮ್ಮ ಗುರುತನ್ನು ರಹಸ್ಯವಾಗಿಡುವ ಬಗ್ಗೆ ಮನವಿ ಮಾಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ-Viral Video : ಮದುವೆ ದಿಬ್ಬಣ ತಡವಾಗಿ ಬಂದಿದ್ದಕ್ಕೆ ಸಿಟ್ಟಾದ ವಧು, ವೇದಿಕೆಯಲ್ಲಿಯೇ ರಂಪಾಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.