ನವದೆಹಲಿ:ಕರೋನಾ ವೈರಸ್ ಚಿಕಿತ್ಸೆಗೆ ಲಸಿಕೆ ಬರಲು ಇನ್ನೂ ಸುಮಾರು 12 ರಿಂದ 18 ತಿಂಗಳುಗಳ ಕಾಲಾವಕಾಶ ಬೇಕಾಗಲಿದೆ. ಆದರೆ ಅಲ್ಲಿಯವರೆಗೆ ಈ ಕಾಯಿಲೆಗೆ ಹೇಗೆ ಚಿಕಿತ್ಸೆ ನೀಡಬೇಕು? ಎಂಬ ಪ್ರಶ್ನೆ ಇದೀಗ ವಿಶ್ವಾದ್ಯಂತ ವೈದ್ಯರಿಗೆ ಕಾಡುತ್ತಿದೆ. ವಿಭಿನ್ನ ಮಾರ್ಗಗಳು ಹೊರಬರುತ್ತಿವೆ. ಆದರೆ ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸುವ ಒಂದು ವಿಧಾನವೆಂದರೆ ಕೋವೆಲನ್ಸಿಯ ಪ್ಲಾಸ್ಮಾ ಚಿಕಿತ್ಸೆ. ಅಂದರೆ, ರಕ್ತದಿಂದ ಪ್ಲಾಸ್ಮಾವನ್ನು ತೆಗೆದು ಅನಾರೋಗ್ಯದಿಂದ ಬಳಲುತ್ತಿರುವ ಇನ್ನೋರ್ವ ವ್ಯಕ್ತಿಯ ದೇಹಕ್ಕೆ ಸೇರಿಸುವ ಚಿಕಿತ್ಸೆ ಎಂದರ್ಥ.
ವಾಸ್ತವಿಕವಾಗಿ, ಕೋವೆಲನ್ಸಿಯ ಪ್ಲಾಸ್ಮಾ ಚಿಕಿತ್ಸೆಯು ವೈದ್ಯಕೀಯ ವಿಜ್ಞಾನದ ಒಂದು ಮೂಲಭೂತ ತಂತ್ರವಾಗಿದೆ. ಜಗತ್ತು ಇದನ್ನು ಸುಮಾರು 100 ವರ್ಷಗಳಿಂದ ಬಳಸುತ್ತಿದೆ. ಇದು ಅನೇಕ ಸಂದರ್ಭಗಳಲ್ಲಿ ಪ್ರಯೋಜನಕಾರಿ ಎಂದು ಕಂಡುಬಂದಿದೆ ಮತ್ತು ಇದೀಗ ಕೋರೋನಾ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿಯೂ ಕೂಡ ಪರಿಣಾಮಕಾರಿ ಎಂದು ಸಾಬೀತಾಗುತ್ತಿದೆ ಎನ್ನಲಾಗಿದೆ.
ತುಂಬಾ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳುತ್ತಿರುವ ಈ ತಂತ್ರಜ್ಞಾನದಲ್ಲಿ ವೈಜ್ಞಾನಿಕರು ಹಳೆ ರೋಗಿಗಳ ರಕ್ತದಿಂದ ಹೊಸರೋಗಿಗಳ ಚಿಕಿತ್ಸೆ ನಡೆಸುತ್ತಾರೆ. ಅಂದರೆ, ಹಳೆ ರೋಗಿಗಳ ರಕ್ತದಿಂದ ಪ್ಲಾಸ್ಮಾ ತೆಗೆದು ಅದನ್ನು ಹೊಸ ರೋಗಿಯ ಶರೀರಕ್ಕೆ ಸೇರಿಸುತ್ತಾರೆ.
ಈಗ ಶರೀರದಲ್ಲಿ ನಡೆಯುತ್ತಿರುವ ಪ್ರಕ್ರಿಯೆಯನ್ನು ಒಮ್ಮೆ ಗಮನಿಸಿ. ಹಳೆ ರೋಗಿಯ ರಕ್ತದೊಳಗೆ ವೈರಸ್ ವಿರುದ್ಧ ಹೋರಾಡುವ ಆಂಟಿಬಾಡಿಗಳು ನಿರ್ಮಾಣಗೊಳ್ಳುತ್ತವೆ. ಈ ಆಂಟಿಬಾಡಿಗಳು ವೈರಸ್ ವಿರುದ್ಧ ಹೋರಾಡಿ ಅವುಗಳನ್ನು ಕೊಲ್ಲುತ್ತವೆ ಅಥವಾ ಹತ್ತಿಕ್ಕುತ್ತವೆ. ಈ ಆಂಟಿಬಾಡಿಗಳು ಹೆಚ್ಚಾಗಿ ರಕ್ತದ ಪ್ಲಾಸ್ಮಾದಲ್ಲಿ ಇರುತ್ತವೆ.
ಅವರ ರಕ್ತದಿಂದ ಈ ಪ್ಲಾಸ್ಮಾವನ್ನು ಸಂಗ್ರಹಿಸಿ ಸ್ಟೋರ್ ಮಾಡಲಾಗುತ್ತದೆ. ಹೊಸ ರೋಗಿಗಳು ದಾಖಲಾದಾಗ ಅವರಿಗೆ ಇದೆ ಪ್ಲಾಸ್ಮಾವನ್ನು ನೀಡಿ ಚಿಕಿತ್ಸೆ ನೀಡಲಾಗುತ್ತದೆ. ಈ ಬ್ಲಡ್ ಪ್ಲಾಸ್ಮಾ ಅನ್ನು ಹಳೆ ರೋಗಿಗಳ ದೇಹದಿಂದ ತತ್ಕಾಲದಲ್ಲಿಯೂ ಕೂಡ ಪಡೆಯಬಹುದಾಗಿದೆ.
ಮನುಷ್ಯರ ಶರೀರದಲ್ಲಿ ಸಾಮಾನ್ಯವಾಗಿ ಶೇ.55ರಷ್ಟು ಪ್ಲಾಸ್ಮಾ ಇರುತ್ತದೆ. ಶೇ.45ರಷ್ಟು ಕೆಂಪು ರಕ್ತ ಕಣಗಳು ಹಾಗೂ ಶೇ.1ರಸ್ತು ಬಿಳಿರಕ್ತ ಕಣಗಳಿರುತ್ತವೆ. ಈ ಪ್ಲಾಸ್ಮಾ ಥೆರಪಿಯ ಲಾಭವೇನೆಂದರೆ, ಯಾವುದೇ ವ್ಯಾಕ್ಸಿನ್ ಸಹಾಯವಿಲ್ಲದೆ ರೋಗಿ ಯಾವುದೇ ಒಂದು ಕಾಯಿಲೆಯ ವಿರುದ್ಧ ಹೋರಾಡುವ ಕ್ಷಮತೆ ಹೊಂದುತ್ತಾನೆ.
ಇದರಿಂದ ವ್ಯಾಕ್ಸಿನ್ ತಯಾರಿಕೆಗೆ ಕಾಲಾವಕಾಶ ಕೂಡ ಸಿಗುತ್ತದೆ. ತತ್ಕಾಲದಲ್ಲಿ ಯಾವುದೇ ವ್ಯಾಕ್ಸಿನ್ ಖರ್ಚು ಕೂಡ ಆಗುವುದಿಲ್ಲ. ಪ್ಲಾಸ್ಮಾ ಶರೀರದಲ್ಲಿ ಆಂಟಿಬಾಡಿಗಳನ್ನು ನಿರ್ಮಿಸುವ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ಅವುಗಳನ್ನು ನಮ್ಮ ಶರೀರದಲ್ಲಿ ಸಂಗ್ರಹ ಕೂಡ ಮಾಡುತ್ತವೆ. ಯಾವುದೇ ಹೊಸರೋಗಿಯ ಶರೀರಕ್ಕೆ ಇವುಗಳನ್ನು ಸೇರಿಸಿದರೆ ಈ ಪ್ಲಾಸ್ಮಾ ಅಲ್ಲಿ ಆಂಟಿಬಾಡಿಗಳನ್ನು ನಿರ್ಮಿಸುವ ಕೆಲಸ ಮಾಡುತ್ತವೆ. ಹೀಗಾಗಿ ರೋಗಿ ಯಾವುದೇ ವೈರಸ್ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ.
ಕೋವೆಲನ್ಸಿಯ ಪ್ಲಾಸ್ಮಾ ಚಿಕಿತ್ಸೆ ಸಾರ್ಸ್ ಹಾಗೋ ಮರ್ಸ್ ಗಳಂತಹ ಮಹಾಮಾರಿಗಳ ಚಿಕಿತ್ಸೆಗೂ ಕೂಡ ಪರಿಣಾಮಕಾರಿ ಎಂದು ಸಾಬೀತಾಗಿತ್ತು. ಇದರಿಂದ ಹಲವು ರೋಗಗಳನ್ನು ಬುಡಸಮೇತ ಕಿತ್ತುಹಾಕಲಾಗಿದೆ. ಸದ್ಯ ಕೊವಿಡ್ 19 ಚಿಕಿತ್ಸೆಗೆ ವಿಶ್ವಾದ್ಯಂತ ಯಾವುದೇ ಲಸಿಕೆ ಲಭ್ಯವಿಲ್ಲ. ಇಂತಹುದರಲ್ಲಿ ಈ ತಂತ್ರಜ್ಞಾನ ತುಂಬಾ ಪರಿಣಾಮಕಾರಿ ಎಂದು ಸಾಬೀತಾಗುತ್ತಿದೆ. ಏಕೆಂದರೆ, ಇದುವರೆಗೆ ಈ ಚಿಕಿತ್ಸೆ ನಡೆಸಲಾಗಿರುವ ಶೆ.100ಕ್ಕೆ ನೂರರಷ್ಟು ಜನ ಗುಣಮುಖರಾಗಿದ್ದಾರೆ.