ನವದೆಹಲಿ: Hindu Marriage Act - ಸುಪ್ರೀಂ ಕೋರ್ಟ್ ಮಂಗಳವಾರ, ಪ್ರಕರಣದ ವಿಚಾರಣೆಯೊಂದರ ಸಮಯದಲ್ಲಿ, ಹೆಂಡತಿ ತನ್ನ ಗಂಡನ ಗುಲಾಮ ಅಥವಾ (Wife Is Not Property Or Chattel) ಅಲ್ಲ ಎಂದು ಹೇಳಿದೆ. ಹೀಗಾಗಿ ಆಕೆಯನ್ನು ಗಂಡನ ಜೊತೆಗೆ ಬಲವಂತವಾಗಿ ವಾಸಿಸಲು ಕೇಳುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ. ಪತ್ನಿಯನ್ನು ತನ್ನೊಂದಿಗೆ ಇರಲು ಆದೇಶಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ ಈ ಹೇಳಿಕೆ ನೀಡಿದೆ.
ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ (Supreme Court) ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಮತ್ತು ಹೇಮಂತ್ ಗುಪ್ತಾ, ಇಂತಹ ಆದೇಶ ನೀಡಲು ಹೆಣ್ಣು ಯಾರ ಗುಲಾಮ ಅಥವಾ ಆಸ್ತಿಯೇ? ನೀವು ಯೋಚಿಸುತ್ತಿರುವುದಾದರು ಏನು? ಆಕೆಯನ್ನು ನಿಮ್ಮೊಂದಿಗೆ ಹೋಗಲು ಹೇಳಲು ಆಕೆ ನಿಮ್ಮ ಆಸ್ತಿಯೇ? ಎಂದು ಪ್ರಶ್ನಿಸಿದ್ದಾರೆ.
ವಿವಾದದ ತಿರುಳಿನಲ್ಲಿ ವೈವಾಹಿಕ ಹಕ್ಕುಗಳ ಪುನಃಸ್ಥಾಪನೆ ಕುರಿತು ಏಪ್ರಿಲ್ 2019 ರ ಆದೇಶವಿದೆ, ಇದನ್ನು ಹಿಂದೂ ವಿವಾಹ ಕಾಯ್ದೆಯ (Hindu Marriage Act) ಸೆಕ್ಷನ್ 9 ರ ಅಡಿಯಲ್ಲಿ ಗಂಡನ ಪರವಾಗಿ ಗೋರಖ್‌ಪುರದ ಕುಟುಂಬ ನ್ಯಾಯಾಲಯವು ನೀಡಿದೆ. 2013 ರಲ್ಲಿ ಮದುವೆಯಾದಾಗಿನಿಂದ ವರದಕ್ಷಿಣೆಗಾಗಿ ತನ್ನ ಪತಿಯಿಂದ ಹಿಂಸೆಗೆ ಒಳಗಾಗಿರುವುದಾಗಿ ಮಹಿಳೆ ಹೇಳಿದ್ದಾರೆ.
ಪತಿಯಿಂದ ಜೀವನಾಂಶ ಕೋರಿ ಮಹಿಳೆ 2015 ರಲ್ಲಿ ಗೋರಖ್‌ಪುರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಪತಿಗೆ ಪ್ರತಿ ತಿಂಗಳು 20 ಸಾವಿರ ರೂ ನೀಡಲು ಆದೇಶಿಸಿದೆ. ಆ ಬಳಿಕ ಪತಿ ತನ್ನ ಮದುವೆಯ ಹಕ್ಕನ್ನು ಪುನಃಸ್ಥಾಪಿಸಲು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದ.
ಗೋರಖ್‌ಪುರದ ಕುಟುಂಬ ನ್ಯಾಯಾಲಯದ ಆದೇಶದ ನಂತರ, ಪತಿ ಹೈಕೋರ್ಟ್‌ಗೆ ತೆರಳಿ ಅರ್ಜಿಯ ನಿರ್ವಹಣೆ ಮತ್ತು ಭತ್ಯೆಯನ್ನು ಪ್ರಶ್ನಿಸಿ, ಹೆಂಡತಿಯೊಂದಿಗೆ ವಾಸಿಸಲು ತಾನು ಸಿದ್ಧನಿರುವಾಗ ಅದೆಲ್ಲಾ ಯಾಕೆ ಬೇಕು ಎಂದು ಪ್ರಶ್ನಿಸಿದ್ದ. ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ (Allahabad High Court) ವಜಾಗೊಳಿಸಿದ ನಂತರ ಆ ವ್ಯಕ್ತಿ ಸುಪ್ರೀಂ ಕೋರ್ಟ್ ಗೆ ಮೊರೆಹೋಗಿದ್ದ.
ಇದನ್ನೂ ಓದಿ- ಒಮ್ಮತದ ಲೈಂಗಿಕ ಸಂಬಂಧ ಅತ್ಯಾಚಾರವಾಗುತ್ತದೆಯೇ? ಸುಪ್ರಿಂಕೋರ್ಟ್ ಪ್ರಶ್ನೆ
ಜೀವನಾಂಶ ಪಾವತಿಸುವುದನ್ನು ತಪ್ಪಿಸುವುದು ತನ್ನ ಗಂಡನ ಆಟವಾಡುತ್ತಿದ್ದಾನೆ ಎಂದು ಮಹಿಳೆ ವಾದಿಸಿದ್ದಾರೆ. ಪತ್ನಿಗೆ ಜೀವನಾಂಶ ನೀಡುವ ಆದೇಶ ಬಂದಾಗ ಮಾತ್ರ ಪತಿ ಕುಟುಂಬ ನ್ಯಾಯಾಲಯಕ್ಕೆ ಹೋಗಿದ್ದಾನೆ ಎಂದು ಮಹಿಳಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ-'Your Honour' ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸರ್ವೊಚ್ಛ ನ್ಯಾಯಾಲಯ
ಪತ್ನಿಗೆ ಒಟ್ಟಿಗೆ ಇರಲು ಆದೇಶಿಸಬೇಕು ಎಂದು ಗಂಡ ಸಲ್ಲಿಸುತ್ತಿರುವ ನಿರಂತರ ಬೇಡಿಕೆಯ ಮೇರೆಗೆ ಸುಪ್ರೀಂ ಕೋರ್ಟ್ (SC) ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಮತ್ತು ಪತಿ ತನ್ನ ವೈವಾಹಿಕ ಹಕ್ಕುಗಳನ್ನು ಪುನಃಸ್ಥಾಪಿಸಲು ಕೋರಿರುವ ಅರ್ಜಿಯನ್ನು ತಿರಸ್ಕರಿಸಿದೆ.
ಇದನ್ನೂ ಓದಿ-'ಬಟ್ಟೆ ಬಿಚ್ಚದೆ ಎದೆಗೆ ಕೈಹಾಕುವುದು ಲೈಂಗಿಕ ಕಿರುಕುಳ ಅಲ್ಲ' , HC ತೀರ್ಪಿಗೆ ಸುಪ್ರೀಂ ತಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.