Tatkal Ticket ಕಾಯ್ದಿರಿಸುವ ಮುನ್ನ ಈ ನಿಯಮಗಳು ನಿಮಗೆ ತಿಳಿದಿರಲಿ

ರೇಲ್ವೆ ಇಲಾಖೆ ವಿವಿಧ ಶ್ರೇಣಿಯ ಟಿಕೆಟ್ ಕಾಯ್ದಿರಿಸುವಿಕೆಗೆ ವಿವಿಧ ವಿಂಡೋಗಳ ಜೊತೆಗೆ ಸಮಯ ಕೂಡ ನಿಗದಿಪಡಿಸಿದೆ. ಜನರಲ್ ಶ್ರೇಣಿಯ ಟಿಕೆಟ್ ಬುಕಿಂಗ್ ಗಾಗಿ ಬೆಳಗ್ಗೆ 8 ಗಂಟೆಯಿಂದ ವೆಬ್ಸೈಟ್ ಮೇಲೆ ಬುಕಿಂಗ್ ಮಾಡಬಹುದು.

Last Updated : Feb 10, 2020, 12:35 PM IST
Tatkal Ticket ಕಾಯ್ದಿರಿಸುವ ಮುನ್ನ ಈ ನಿಯಮಗಳು ನಿಮಗೆ ತಿಳಿದಿರಲಿ title=

ನವದೆಹಲಿ:ಯಾತ್ರಿಗಳ ಅನುಕೂಲಕ್ಕಾಗಿ ಭಾರತೀಯ ರೈಲು ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಕಳೆದ ಹಲವು ದಶಕಗಳಿಂದ ರೈಲುಗಳ ಆಸನಗಳಿಂದ ಹಿಡಿದು ಸ್ವಚ್ಛತೆ ಹಾಗೂ ಯಾತ್ರಿಗಳ ಸೌಕರ್ಯದ ಮೇಲೆ ಅಧಿಕ ಗಮನ ನೀಡಲಾಗಿದೆ. ಆನ್ಲೈನ್ ಟಿಕೆಟ್ ಬುಕಿಂಗ್ ಗೂ ಕೂಡ ಹೆಚ್ಚಿನ ಒತ್ತು ನೀಡಲಾಗಿದೆ. ನಕಲಿ ಏಜೆನ್ಸಿಗಳ ಮೇಲೂ ಕೂಡ ಕ್ರಮ ಕೈಗೊಳ್ಳಲಾಗಿದೆ. ಟಿಕೆಟ್ ಪಡೆಯಲು ಯಾತ್ರಿಗಳ ಪರದಾಟ ತಪ್ಪಿಸಲು ನಿಯಮಗಳಲ್ಲಿ ಬದಲಾವಣೆಗಳನ್ನೂ ಸಹ ತರಲಾಗಿದೆ.

ಟಿಕೆಟ್ ಬುಕಿಂಗ್ ಗಾಗಿ ವಿವಿಧ ವಿಂಡೋಗಳನ್ನು ತೆರೆಯಲಾಗಿದ್ದು, ಅವುಗಳ ಸಮಯ ಕೂಡ ನಿಗದಿಪಡಿಸಲಾಗಿದೆ. ಜನರಲ್ ಶ್ರೇಣಿಯ ಟಿಕೆಟ್ ಬುಕಿಂಗ್ ಗಾಗಿ IRCTC ವೆಬ್ಸೈಟ್ ನಲ್ಲಿ ಬೆಳಗ್ಗೆ 8 ಗಂಟೆಯಿಂದ ಬುಕಿಂಗ್ ಮಾಡಬಹುದಾಗಿದೆ. ಜೊತೆಗೆ ತತ್ಕಾಲ್ ಟಿಕೆಟ್ ಬುಕಿಂಗ್ ಗಾಗಿ ಬೆಳಗ್ಗೆ 10 ಗಂಟೆಗೆ ಕಿಟಕಿ ತೆರೆದುಕೊಳ್ಳಲಿದೆ. ಒಂದು ವೇಳೆ ನೀವೂ ಕೂಡ ಆನ್ಲೈನ್ ನಲ್ಲಿ ಟಿಕೆಟ್ ಬುಕಿಂಗ್ ಮಾಡಲು ಬಯಸುತ್ತಿದ್ದರೆ, ಈ ನಿಯಮಗಳನ್ನು ತಿಳಿದುಕೊಳ್ಳಿ.

ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮ ಏನು?
IRCTC ವೆಬ್ಸೈಟ್ ಬೆಳಗ್ಗೆ 8 ಗಂಟೆಗೆ ಬುಕಿಂಗ್ ಗಾಗಿ ತೆರೆದುಕೊಳ್ಳಲಿದೆ. ಆದರೆ, ಇದು ಕೇವಲ ಸಾಮಾನ್ಯ ಶ್ರೇಣಿಯ ಟಿಕೆಟ್ ಬುಕಿಂಗ್ ಗಾಗಿ ಮಾತ್ರ ಸೀಮಿತವಾಗಿರಲಿದೆ. ತತ್ಕಾಲ್ ಟಿಕೆಟ್ ಬುಕಿಂಗ್ ಗಾಗಿ ಬೇರೆ ಸಮಯ ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲ ಇದರಲ್ಲೂ ಕೂಡ AC ಹಾಗೂ NON-AC ಟಿಕೆಟ್ ಬುಕಿಂಗ್ ಗಾಗಿ ಸಮಯ ನಿಗದಿಪಡಿಸಲಾಗಿದೆ. ತತ್ಕಾಲ್ ನ AC ಶ್ರೇಣಿಯ ಟಿಕೆಟ್ ಬುಕಿಂಗ್ ಬೆಳಗ್ಗೆ 10  ಗಂಟೆಯಿಂದ ಪ್ರಾರಂಭವಾಗಲಿದೆ. ತತ್ಕಾಲ್ ನ NON-AC ಶ್ರೇಣಿಯ ಟಿಕೆಟ್ ಬುಕಿಂಗ್ ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿದೆ. ಬುಕಿಂಗ್ ಆರಂಭದ ಬಳಿಕ ಮೊದಲಿನ ಅರ್ಧಗಂಟೆಯವರೆಗೆ ಅಧಿಕೃತ ಏಜೆಂಟರು ಟಿಕೆಟ್ ಬುಕ್ ಮಾಡುವಂತಿಲ್ಲ.

ಓರ್ವ ಬಳಕೆದಾರ ಎರಡು ತತ್ಕಾಲ್ ಟಿಕೆಟ್
ಓರ್ವ ಬಳಕೆದಾರ ತಮ್ಮ ಐಡಿ ಬಳಸಿ ದಿನವೊಂದರಲ್ಲಿ ಕೇವಲ ಎರಡು ಟಿಕೆಟ್ ಕಾಯ್ದಿರಿಸಲು ಮಾತ್ರ ಅನುಮತಿ ನೀಡಲಾಗಿದೆ. ಓರ್ವ ಬಳಕೆದಾರ ತಮ್ಮ ಲಾಗಿನ್ ಬಳಸಿ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೇವಲ ಒಂದು ಟಿಕೆಟ್ ಮಾತ್ರ ಬುಕ್ ಮಾಡಬಹುದು. ಇದರಲ್ಲಿ ಎರಡು ಕಡೆಯಿಂದ ಪ್ರಯಾಣ ಬೆಳೆಸಲು ಟಿಕೆಟ್ ಬುಕ್ ಮಾಡಬಹುದು. ಎರಡನೇ ಟಿಕೆಟ್ ಬುಕ್ ಮಾಡಲು ಲಾಗೌಟ್ ಆಗಿ ಪುನಃ ಲಾಗಿನ್ ಆಗಬೇಕು. ಓರ್ವ ಬಳಕೆದಾರ ತಮ್ಮ ಲಾಗಿನ್ ಐಡಿ ಬಳಸಿ ತಿಂಗಳಿನಲ್ಲಿ ಒಟ್ಟು 6 ಹಾಗೂ ಅಧಾರ ಕಾರ್ಡ್ ಜೋಡಣೆಯಾದ ಸಂದರ್ಭದಲ್ಲಿ 12 ಟಿಕೆಟ್ ಗಳನ್ನು ಬುಕ್ ಮಾಡಬಹುದು.

ಹಣ ಮರುಪಾವತಿಯ ನಿಯಮ ಏನು?
ನಿಯಮಗಳ ಅನುಸಾರ ಕೆಲ ಷರತ್ತುಗಳ ಅನ್ವಯ ನೀವು ನಿಮ್ಮ ತತ್ಕಾಲ್ ಟಿಕೆಟ್ ಬುಕಿಂಗ್ ರದ್ದುಗೊಳಿಸಿ ಶೇ.100ರಷ್ಟು ಹಣ ವಾಪಸ್ ಪಡೆಯಬಹುದಾಗಿದೆ. ರೈಲು ಬಿಡುಗಡೆಗೆ 2 ಗಂಟೆ ವಿಳಂಬವಾದ ಸಂದರ್ಭದಲ್ಲಿ, ರೂಟ್ ಬದಲಾವಣೆಯಾದ ವೇಳೆ, ಬೋರ್ಡಿಂಗ್ ಸ್ಟೇಷನ್ ನಿಂದ ರೈಲು ಬಿಡುಗಡೆಯಾಗದೆ ಹೋದಲ್ಲಿ ಅಥವಾ ಕೋಚ್ ಗೆ ಹಾನಿಯಾದ ಸಂದರ್ಭದಲ್ಲಿ ನೀವು ನಿಮ್ಮ ಟಿಕೆಟ್ ಗೆ ನೀಡಿರುವ ಹಣದ ಶೇ.100ರಷ್ಟು ಹಣವನ್ನು ವಾಪಸ್ ಪಡೆಯಬಹುದು. IRCTC ತನ್ನ ರಿಜಿಸ್ಟ್ರೇಷನ್, ಲಾಗಿನ್ ಹಾಗೂ ಬುಕಿಂಗ್ ಪುಟಗಳಲ್ಲಿ ಕ್ಯಾಪ್ಚಾ ಕೋಡ್ ವ್ಯವಸ್ಥೆ ಕೂಡ ಮಾಡಿದೆ. ಅಟೋಮೆಷನ್ ಸಾಫ್ಟ್ ವೇರ್ ಗಳ ಮೂಲಕ ನಡೆಸಲಾಗುವ ಬುಕಿಂಗ್ ಗೆ ಕಡಿವಾಣ ಹಾಕಲು ಈ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ ಪೇಮೆಂಟ್ ಆಪ್ಶನ್ ಗೆ OTP ಸೌಕರ್ಯ ಕೂಡ ಒದಗಿಸಲಾಗಿದೆ.

ಎಷ್ಟು ದಿನ ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡಬಹುದು
ದೂರದ ಪ್ರಯಾಣದ ರೈಲುಗಳಿಗಾಗಿ ನೀವು 120 ದಿನಗಳು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು. ಇದರಲ್ಲಿ ಯಾತ್ರೆಯ ದಿನವನ್ನು ಹೊರತುಪಡಿಸಿ 120 ದಿನಗಳ ಅವಕಾಶ ಇದೆ. ಈ 120 ದಿನಗಳ ಗಣನೆಗೆ ನೀವು IRCTC ವೆಬ್ಸೈಟ್ ನ ಕ್ಯಾಲ್ಕುಲೇಟರ್ ಸೌಕರ್ಯವನ್ನೂ ಸಹ ಬಳಸಬಹುದು. ದಿನನಿತ್ಯ ಓಡಾಡುವ ಹಾಗೂ ಕಡಿಮೆ ಅಂತರದಲ್ಲಿ ಪ್ರಯಾಣಿಸುವ ರೈಲುಗಳಿಗಾಗಿ ನೀವು 30 ದಿನಗಳು ಹಾಗೂ 15 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು. ವಿದೇಶಿ ನಾಗರಿಕರು 360 ದಿನಗಳ ಮುಂಚಿತವಾಗಿ  ಕೂಡ ಟಿಕೆಟ್ ಬುಕ್ ಮಾಡಬಹುದು

Trending News