ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಬೆಂಬಲ ಸೂಚಿಸಲು ಬಂದ ನಟ ಕಿಚ್ಚ ಸುದೀಪ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪೀಕಲಾಟಕ್ಕೆ ಸಿಲುಕಿದರು.ವಿಶ್ವಾಸದಲ್ಲಿ ಬೆಂಬಲ ಎಂದು ಬಳಿಕ ಸೂಚಿಸಿದ ಕ್ಷೇತ್ರಗಳಲ್ಲಿ ಪ್ರಚಾರವೆಂದು ಹೇಳಿಕೆ ಬದಲಿಸಿ ನಟ ಎಂಬುದನ್ನು ಸಾಬೀತುಪಡಿಸಿದರು.
ಇದನ್ನೂ ಓದಿ: ಕೊರೊನಾ ಪ್ರಕರಣಗಳ ಹೆಚ್ಚಳ, ವಕೀಲರಿಗೆ ವರ್ಕ್ ಫ್ರಾಂ ಹೋಂ ಆಯ್ಕೆ ನೀಡಿದ ಸಿಜೆಐ
ಕಳೆದ ಮೂರ್ನಾಲ್ಕು ದಿನಗಳಿಂದ ಸುದೀಪ ಬಿಜೆಪಿಗೆ ಸೇರ್ತಾರೆ.ಈ ಬಾರೀ ಸುದೀಪ ಎಂಎಲ್ಎ ಅಗ್ತಾರೆ ಅಂತ ಸಾಕಷ್ಟು ಚರ್ಚೆಯಾಗಿತ್ತು.ಆದ್ರೆ ಇಂದು ಸಿಎಂ ಜೊತೆ ಸುದ್ದಿಗೋಷ್ಟಿ ಬಂದ ಸುದೀಪ ಎಲ್ಲಾದಕ್ಕೂ ತೆರೆ ಎಳೆದಿದ್ದಾರೆ.ನಾನು ಪಕ್ಷದ ಪರವಲ್ಲ ನಾನು ಏನಿದ್ರು ಮಾಮನ ಪರ ಎಂದು ಹೇಳುವ ಮೂಲಕ ಬಿಜೆಪಿ ಸ್ಟಾರ್ ಕ್ಯಾಂಪೇಯನ್ ಮಾತ್ರ ಎಂದು ಹೇಳುವ ಮೂಲಕ ರಾಜಕೀಯ ಎಂಟ್ರಿಗೆ ತೆರೆ ಎಳೆದಿದ್ದಾರೆ.
ಸದ್ಯ ಸುದೀಪ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.ನಾನು ಯಾವ ಪಕ್ಷದ ಪರ ಕೆಲಸ ಮಾಡಲ್ಲ.ನನ್ನ ಕಷ್ಟ ಕಾಲದಲ್ಲಿ ನನ್ನ ಪರ ಪ್ರೀತಿಯ ಮಾಮ ನಿಂತಿದ್ರು.ಹೀಗಾಗಿ ನಾನು ಸ್ಪಷ್ಟವಾಗಿ ಹೇಳುವೆ ನಾನು ಯಾವುದೇ ಪಕ್ಷದ ಪರವಿಲ್ಲ, ನನ್ನ ಪ್ರೀತಿಯ ಮಾಮನ ಪರ ನಿಂತಿರುವೆ.ಅವರು ಎಲ್ಲಿ ಎಲ್ಲಿ ಹೇಳ್ತಾರೋ ಅಲ್ಲಿ ಹೋಗಿ ಪ್ರಚಾರ ಮಾಡುವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: "ಕ್ರಿಮಿನಲ್ ಅಪರಾಧ ಇರುವ ರೌಡಿ ಶೀಟರ್ ಗಳನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ"
ಇನ್ನೊಂದೆಡೆಗೆ ಸಿಎಂ ಬೊಮ್ಮಾಯಿ ಮಾತನಾಡಿ " ಅವರು ಜನಪ್ರಿಯ ನಟರಾಗಿದ್ದು ಅವರ ಕ್ಯಾಂಪೇನ್ಗೆ ತೀರ್ಮಾನ ಮಾಡಿದೇವೆ.ಇನ್ನು ಅವರಿಗೂ ಅನುಕೂಲ ಆಗುವಾಗೇ ಅವರ ಫ್ಯಾನ್ಸ್ ಗಮನದಲ್ಲಿ ಇಟ್ಟುಕೊಂಡು ಪ್ರಚಾರ ಮಾಡ್ತೀವಿ ಎಂದು ಬೊಮ್ಮಯಿ ಹೇಳಿದ್ರು. ಸುದೀಪ್ ಆಗಮನ ನಮಗೆ ದೊಡ್ಡ ಶಕ್ತಿ ಬಂದಿದೆ.ಅವರ ತಂದೆ ತಾಯಿ ಸಂಜೀವಣ್ಣ ಮತ್ತು ಸರೋವರಕ್ಕಗೆ ಧನ್ಯವಾದ ಹೇಳ್ತೀನಿ. ಹೀಗಾಗಿ ಅವರ ಸಮಯ, ಗೌರವ ಎರಡೂ ಗಮನದಲ್ಲಿಟ್ಟುಕೊಂಡು ಪ್ರಚಾರ ನಿರ್ಧಾರ ಮಾಡ್ತೀವಿ ಎಂದು ಸಿಎಂ ತಿಳಿಸಿದರು.
ಒಟ್ಟಾರೆ ಸುದೀಪ ಮಾಮನ ಪರ ನಿಲ್ಲುವೆ ಅಂದರೂ ಸಿಎಂ ಬೊಮ್ಮಯಿ ಬಿಜೆಪಿ ಪಕ್ಷದ ಶಾಸಕಾಂಗ ನಾಯಕ ಎನ್ನುವುದನ್ನ ಮರೆತಿದ್ದಾರೆ. ಹೀಗಾಗಿ ಸುದೀಪರ ಈ ನಡೆ ಮತ್ತು ಸುದ್ದಿಗೋಷ್ಟಿ ಯಾವುದೇ ನಿಖರ ಕ್ಲೈಮ್ಯಾಕ್ಸ್ ಕಾಣದೆ ಅಂತ್ಯವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.