Karnataka Election 2023: "ನಿಮ್ಮ ಮಗ ದಹೆಲಿಯಲ್ಲಿ ಕುಳಿತಿದ್ದ, ಆ ಭಾರ ರೈತರ ಮೇಲೆ ಬೀಳಲು ಬಿಡಲಿಲ್ಲ" - ಪಿಎಂ ಮೋದಿ

Karnataka Election 2023: ಆಯನೂರು ಗ್ರಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಜನರತ್ತ ಕೈ ಬೀಸಿದ ಪ್ರಧಾನಿ, ಆಯನೂರು ಗ್ರಾಮದ ಮೈದಾನದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.    

Written by - Chetana Devarmani | Last Updated : May 7, 2023, 05:10 PM IST
  • ಆಯನೂರು ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ
  • ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮೋದಿ ಭಾಗಿ
  • ಶಿವಮೊಗ್ಗದ ಜನತೆಗೆ ನಮಸ್ಕಾರಗಳು ಎಂದ ಪ್ರಧಾನಿ
Karnataka Election 2023: "ನಿಮ್ಮ ಮಗ ದಹೆಲಿಯಲ್ಲಿ ಕುಳಿತಿದ್ದ, ಆ ಭಾರ ರೈತರ ಮೇಲೆ ಬೀಳಲು ಬಿಡಲಿಲ್ಲ" - ಪಿಎಂ ಮೋದಿ  title=
Narendra Modi

ಆಯನೂರು (ಶಿವಮೊಗ್ಗ): ಮಲೆನಾಡಿನ ಮಡಿಲು ಸೌಂದರ್ಯದ ಹೊನಲು, ಶಿವಮೊಗ್ಗದ ಜನತೆಗೆ ನಮಸ್ಕಾರಗಳು, ಕುವೆಂಪುರವರ ಈ ನೆಲೆಗೆ ನಾನು ಶ್ರದ್ಧಾಪೂರ್ವಕವಾಗಿ ನಮಸ್ಕರಿಸುತ್ತೇವೆ. ದೇವಿ ಸಿಗಂದೂರು ಚೌಡೇಶ್ವರಿಗೂ ತಲೆಭಾಗಿ ನಮಸ್ಕರಿಸುತ್ತೇನೆ. ಶಿವಮೊಗ್ಗದಲ್ಲಿ ಕೋಟೆ ಆಂಜನೇಯ ಸ್ವಾಮಿ ಇದ್ದಾರೆ, ಆ ದೇವರಿಗೆ ಇವತ್ತು ಇಡೀ ಹಿಂದೂಸ್ತಾನ ಪ್ರಣಾಮ ಮಾಡುತ್ತಿದೆ. ಪೂಜ್ಯ ಶ್ರೀಧರಸ್ವಾಮಿಯವರಿಗೂ ಶ್ರದ್ಧೆಯಿಂದ ನಮಸ್ಕರಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು. 

ನಾನು ಯಡಿಯೂರಪ್ಪನವರ ಜನ್ಮದಿನದಂದು ಶಿವಮೊಗ್ಗಕ್ಕೆ ಬಂದಿದ್ದೆ. ಕೆಲದಿನಗಳ ಹಿಂದೆ ಈಶ್ವರಪ್ಪನವರೊಂದಿಗೆ ಫೋನ್‌ನನಲ್ಲಿ ಮಾತನಾಡಿದ್ದೇನೆ. ಶಿವಮೊಗ್ಗವೂ ನಮ್ಮೆಲ್ಲರಿಗೂ ಬಹಳಷ್ಟು ಸ್ನೇಹ, ವಿಶ್ವಾಸ ಹಾಗೂ ಭರವಸೆ ನೀಡಿದೆ. ಇವತ್ತು ನನಗೆ ನಂಬಿಕೆ ಮೂಡಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರಲಿದೆ ಎಂಬುದು ಖಾತರಿಯಾಗಿದೆ. ಯಡಿಯೂರಪ್ಪನವರು ಕೈಗೊಂಡ ಸಂಕಲ್ಪ ಪೂರ್ಣಗೊಳ್ಳಲಿದೆ. ಪೂರ್ಣ ಕರ್ನಾಟಕ ಹೇಳುತ್ತಿದೆ. ಈ ಭಾರೀಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಹೇಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

ಇದನ್ನೂ ಓದಿ: "ನಿಜವಾದ ಡಬಲ್ ಇಂಜಿನ್ ಸರ್ಕಾರ ಎಂದರೆ ಆರ್ಥಿಕ ವಿಕಾಸ ಮತ್ತು ಸಾಮಾಜಿಕ ಸದ್ಭಾವನೆ ಇರುವಂತದ್ದು"

ಬೆಂಗಳೂರಿನಲ್ಲಿ ಸಿಕ್ಕ ಪ್ರೋತ್ಸಾಹ ಮರೆಯಲಾಗದು : 

ಕರ್ನಾಟಕದಲ್ಲಿ ಹೋದಲೆಲ್ಲಾ ನನ್ನ ಮೇಲೆ ಎಷ್ಟು ಪ್ರೀತಿಯಿದೆ ಎಂದರೆ, ನನ್ನ ಹಾಗೂ ನಿಮ್ಮಗಳ ಪ್ರೀತಿಯ ನಡುವೆ ಭಾಷೆ ಎಂದು ಅಡ್ಡಿಯಾಗಿಲ್ಲ. ಈ ಪ್ರೀತಿಯನ್ನ ನಾನೆಂದಿಗೂ ಮರೆಯೋದಿಲ್ಲ. ಇಲ್ಲಿಗೆ ಬರುವುದಕ್ಕೂ ಮೊದಲು ಬೆಂಗಳೂರಿನಲ್ಲಿ ಜನತಾ ಜನಾರ್ಧನರ ದರ್ಶನಕ್ಕೆ ಬಂದಿದ್ದೆ. ಯಾವುದೇ ಪಕ್ಷ ಬೆಳಗ್ಗೆ 11 ಗಂಟೆಗೂ ಮೊದಲು ಯಾವುದೇ ಕಾರ್ಯಕ್ರಮ ಸಂಘಟಿಸಲು ಮುಂದಾಗುವುದಿಲ್ಲ. ಆದರೆ ಇವತ್ತು ನಾನು ಬೆಳಗ್ಗೆ ಬೆಳಗ್ಗೆ ಜನತೆಯ ದರ್ಶನಕ್ಕೆ ಹೊರಟಿದ್ದೆ, ಈಶ್ವರ ರೂಪಿ ಜನರು ಪುಷ್ಟವೃಷ್ಟಿ ಮಾಡಿದರು. ಇವತ್ತು ಬಹಳಷ್ಟು ದೂರದ ರೋಡ್​ ಶೋ ಇತ್ತು. ಆದರೆ ಇವತ್ತು ನೀಟ್ ಎಕ್ಸಾಮ್​ ಇದೆ ಎಂದು ಗೊತ್ತಾಯ್ತು. ಹಾಗಾಗಿ ನಾನು ಹೇಳಿದೆ, ಇವತ್ತು ಮಕ್ಕಳ ಎಕ್ಸಾಮ್​ ಇದೆ ನಮ್ಮ ಪರೀಕ್ಷೆ ಮೇ 10 ಕ್ಕಿದೆ. ಹಾಗಾಗಿ ಮಕ್ಕಳ ಎಕ್ಸಾಮ್‌ಗೆ ಅವಕಾಶ ಕಲ್ಪಿಸಬೇಕು ಎಂದೆ. ಅದೇ ಕಾರಣಕ್ಕೆ ಬೆಳಗ್ಗೆ ಬೆಳಗ್ಗೆ ನಾವು ರೋಡ್ ಶೋ  ಆಯೋಜಿಸಿದ್ದವು. ಆದರೆ ಬೆಂಗಳೂರಿನಲ್ಲಿ ಸಿಕ್ಕ ಪ್ರೋತ್ಸಾಹ ಮರೆಯಲಾಗದು. ನಾನು ಕರ್ನಾಟಕಕ್ಕೆ ಋಣಿಯಾಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು. 

ಇಡೀ ರಾಜ್ಯ ಸ್ನೇಹ, ವಿಶ್ವಾಸ ತೋರುತ್ತಿದೆ : 

ಇಡೀ ರಾಜ್ಯ ಸ್ನೇಹ, ವಿಶ್ವಾಸ ತೋರುತ್ತಿದೆ. ಇವತ್ತು ಶಿವಮೊಗ್ಗದ ಈ ನೆಲದಿಂದ, ರೈತ ಬಂದು ಯಡಿಯೂರಪ್ಪನವರ ನೆಲದಿಂದ ಇಡೀ ಕರ್ನಾಟಕಕ್ಕೆ ವಿಶ್ವಾಸ ನೀಡುತ್ತೇನೆ. ಅಸಲಿ ಗ್ಯಾರಂಟಿ ನೀಡುತ್ತೇನೆ. ನೀವು ಕೊಟ್ಟ ಪ್ರೀತಿ, ಆಶೀರ್ವಾದ ಮಾಡಿ, ಕರ್ನಾಟಕದ ಅಭಿವೃದ್ಧಿಯನ್ನು ಮಾಡಿ ಬಡ್ಡಿ ಸಮೇತ ನಿಮಗೆ ಹಿಂತಿರುಗಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು. 

ಬಂದು ಭಗಿನಿಯರೇ ಈ ಕ್ಷೇತ್ರ, ದೇಶದಲ್ಲೆ ವಿಶಿಷ್ಟ ಕ್ಷೇತ್ರವಾಗಿದೆ. ಇಲ್ಲಿಯ ಫಸಲು ಸಾಕಷ್ಟು ವಿಶೇಷವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಅಡಿಕೆ ಆಮದು ನೀತಿಯನ್ನು ಒಮ್ಮೆ ತುಲನೆ ಮಾಡಿ ನೋಡಿ, ಆಗ ನಿಮಗೆ ಅರ್ಥವಾಗುತ್ತದೆ ಯಾವ ಪಕ್ಷ ನಿಮಗೆ ಆತ್ಮೀಯವಾಗಿದೆ ಎಂದು ಗೊತ್ತಾಗುತ್ತದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಅಡಿಕೆ ಆಮದು ಸಮಸ್ಯೆ ಎದುರಾಗಿತ್ತು. ಆಗ ಅವರು ಗುಜರಾತ್‌ಗೆ ಬಂದು ಅಡಿಕೆ ಆಮದು ಸಮಸ್ಯೆಯ ವಿಚಾರವಾಗಿ ಮಾತನಾಡಲು ಬಂದಿದ್ದರು. ಆಗ ಅವರು ಹೇಳಿದಂತೆ ನಾನು ನಡೆದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

ಇದನ್ನೂ ಓದಿ: ಅಶೋಕ್‌ರನ್ನು ಗೆಲ್ಲಿಸಿ, ಕನಕಪುರಕ್ಕೆ ಎಷ್ಟು ಬೇಕೋ ಅಷ್ಟು ಅನುದಾನ‌ ಕೊಡುತ್ತೇನೆ: ಸಿಎಂ ಬೊಮ್ಮಾಯಿ‌

ನಿಮ್ಮ ಮಗ ದಹೆಲಿಯಲ್ಲಿ ಕುಳಿತಿದ್ದ: 

ಕಾಂಗ್ರೆಸ್​ ವಿದೇಶದಿಂದ ಕಡಿಮೆ ಬೆಲೆಯಿಂದ ಅಡಿಕೆ ಆಮದು ಮಾಡಿಕೊಳ್ಳಲು ಮುಂದಾಗಿತ್ತು. ಆದರೆ ಇದು ಮಲೆನಾಡಿನ ಅಡಿಕೆ ಬೆಲೆ ಮೇಲೆ ಪರಿಣಾಮ ಬೀರಿತ್ತು. ಆದರೆ ಕಾಂಗ್ರೆಸ್ ಇದರ ಬಗ್ಗೆ ಗಮನವನ್ನೇ ಹರಿಸಿಲ್ಲ. ಆದರೆ ನನ್ನನ್ನ ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿದಾಗ ಅಡಿಕೆ ಆಮದು ಮೇಲೆ ಮಿಮಿಮಮ್​ ಇಂಪೋರ್ಟ್​ ಬೆಲೆಯನ್ನ ಕೆಜಿಗೆ 350 ನಷ್ಟು ಇರಿಸಿದೆ.  ಇಷ್ಟು ದೊಡ್ಡ ಮೊತ್ತ ಕೊಟ್ಟು ಆಮದು ಮಾಡುವ ದೈರ್ಯ ಯಾರು ತೋರುತ್ತಾರೆ. ಇದರ ಫಲ ಕರ್ನಾಟಕದ ರೈತರಿಗೆ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

ಇದರ ಜೊತೆಯಲ್ಲಿ ಬಿಜೆಪಿ ಸರ್ಕಾರ, ಕೃಷಿ ಆಧಾರಿತ ರಪ್ತು ಯೋಜನೆಯನ್ನು ಕೈಗೊಳ್ಳುತ್ತಿದೆ. ಕೊರೊನಾ ಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಕೃಷಿ ಆಧಾರಿತ ರಪ್ತುವನ್ನು ಕೈಗೊಂಡಿದ್ದೇವೆ. ಇದರ ಲಾಭ ರೈತರಿಗೆ ಅನುಕೂಲವಾಗಿದೆ. ಬೀಜದಿಂದ ಬಜಾರ್​ನವರೆಗೂ ಹಲವು ಅನುಕೂಲಗಳನ್ನ ಬಿಜೆಪಿ ಸರ್ಕಾರ ನೀಡಿದೆ. 2 ಸಾವಿರ ಕ್ಕೂ ಅಧಿಕ ವಿಭಿನ್ನ ಬೀಜಗಳನ್ನ ತಯಾರು ಮಾಡಿದ್ಧೇವೆ, ಉಕ್ರೇನ್ ಹಾಗೂ ರಷ್ಯಾದ ಸಂಕಷ್ಟದಿಂದ ರಸಗೊಬ್ಬರದ ಬೆಲೆ ಗಗನಕ್ಕೆ ಏರಿದೆ. ಆದರೆ ಇದರ ಪರಿಣಾಮ ರೈತರ ಮೇಲೆ ಬೀರಲು ನಾವು ಬಿಡಲಿಲ್ಲ. ಯೂರಿಯಾ ಬೆಲೆ ಏರಿಕೆಯಿಂದ 2 ಲಕ್ಷ ಕೋಟಿ ರೂಪಾಯಿ ಹೊರೆ ರೈತರ ಮೇಲೆ ಬೀರುತ್ತಿತ್ತು. ಆದರೆ, ನಿಮ್ಮ ಮಗ ದಹೆಲಿಯಲ್ಲಿ ಕುಳಿತಿದ್ದ, ಆ ಭಾರ ರೈತರ ಮೇಲೆ ಬೀರಲು ಬಿಡಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. 

ಇದನ್ನೂ ಓದಿ: ಚುನಾವಣೆಗೆ ಕೌಂಟ್ ಡೌನ್ ಶುರು: ಉದ್ಯಾನನಗರಿಯಲ್ಲಿ ಭರ್ಜರಿ ಪ್ರಚಾರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News