ಎಮ್ಮೆ ಅಪಘಾತ ವಿಮೆ ನಿರಾಕರಿಸಿದ ವಿಮಾ ಕಂಪನಿಗೆ 95 ಸಾವಿರ ರೂ.ದಂಡ

ವಿಮಾ ಪಾಲಿಸಿ ಹೊಂದಿದ್ದು ಎಮ್ಮೆಯೊಂದು ಕಾಯಿಲೆಯಿಂದ ಮರಣ ಹೊಂದಿದ ಬಗ್ಗೆ ಪೂರಕ ದಾಖಲೆಗಳೊಂದಿಗೆ ಮಾಹಿತಿ ನೀಡಿದರೂ, ಪರಿಹಾರ ಪಾವತಿಸದ ವಿಮಾ ಕಂಪೆನಿಗೆ ಇಲ್ಲಿನ ಜಿಲ್ಲಾ ಗ್ರಾಹಕ ವ್ಯವಹಾರಗಳ ಪರಿಹಾರ ಆಯೋಗವು 95 ಸಾವಿರ ರೂ.ದಂಡ ವಿಧಿಸಿದೆ.

Written by - Zee Kannada News Desk | Last Updated : Aug 12, 2022, 01:29 PM IST
  • ಪರಿಹಾರ ಪಾವತಿಸದ ವಿಮಾ ಕಂಪೆನಿಗೆ ಇಲ್ಲಿನ ಜಿಲ್ಲಾ ಗ್ರಾಹಕ ವ್ಯವಹಾರಗಳ ಪರಿಹಾರ ಆಯೋಗವು 95 ಸಾವಿರ ರೂ.ದಂಡ ವಿಧಿಸಿದೆ.
ಎಮ್ಮೆ ಅಪಘಾತ ವಿಮೆ ನಿರಾಕರಿಸಿದ ವಿಮಾ ಕಂಪನಿಗೆ 95 ಸಾವಿರ ರೂ.ದಂಡ  title=
ಸಾಂದರ್ಭಿಕ ಚಿತ್ರ

ಧಾರವಾಡ: ವಿಮಾ ಪಾಲಿಸಿ ಹೊಂದಿದ್ದು ಎಮ್ಮೆಯೊಂದು ಕಾಯಿಲೆಯಿಂದ ಮರಣ ಹೊಂದಿದ ಬಗ್ಗೆ ಪೂರಕ ದಾಖಲೆಗಳೊಂದಿಗೆ ಮಾಹಿತಿ ನೀಡಿದರೂ, ಪರಿಹಾರ ಪಾವತಿಸದ ವಿಮಾ ಕಂಪೆನಿಗೆ ಇಲ್ಲಿನ ಜಿಲ್ಲಾ ಗ್ರಾಹಕ ವ್ಯವಹಾರಗಳ ಪರಿಹಾರ ಆಯೋಗವು 95 ಸಾವಿರ ರೂ.ದಂಡ ವಿಧಿಸಿದೆ.

ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದ ಮುತ್ತಪ್ಪ ತಪೇಲಿ ಎಂಬುವರು ವಿಮಾ ಪಾಲಿಸಿ ಹೊಂದಿದ್ದ ತಮ್ಮ ಎಮ್ಮೆ ಖಾಯಿಲೆಯಿಂದ ಮರಣಹೊಂದಿದರೂ ಕೂಡ ಯುನಿವೆರಲ್ ಸೊಂಪೆÇ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಕಂಪನಿಯವರು ಪರಿಹಾರದ ಹಣ ನೀಡಿಲ್ಲ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: ಕೋವಿಡ್‌ ಲಸಿಕೆಯ ಮೂರನೇ ಡೋಸ್‌ ಪಡೆದವರು 17% ಮಾತ್ರ : ಸಚಿವ ಸುಧಾಕರ್‌

ದೂರಿನ ವಿಚಾರಣೆಯನ್ನು ನಡೆಸಿದ ಆಯೋಗವು ಎಮ್ಮೆಯ ಮೇಲಿನ ವಿಮಾ ಮೊತ್ತವನ್ನು ಫಿರ್ಯಾದಿಗೆ ನೀಡುವಲ್ಲಿ ಕರ್ತವ್ಯ ಲೋಪ ಎಸಗಿ ಸೇವಾ ನ್ಯೂನ್ಯತೆ ಮಾಡಿದ ವಿಮಾ ಕಂಪನಿಗೆ 95 ಸಾವಿರ ರೂ.ಗಳ ದಂಡ ವಿಧಿಸಿದೆ. 30 ದಿನಗಳ ಒಳಗಾಗಿ ಆದೇಶ ಪಾಲನೆ ಮಾಡಬೇಕು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶಪ್ಪ ಕೆ. ಭೂತೆ, ಸದಸ್ಯರಾದ ಪ್ರಭು ಹಿರೇಮಠ ಅವರು ಆದೇಶಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News